ಜೆಸಿಐ ಸುಳ್ಯ ಪಯಸ್ವಿನಿ ಜೆಸಿ ಸಪ್ತಾಹ : ಶೇಣಿ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣ ವಿತರಣೆ ಹಾಗೂ ವಿವಿಧ ಸ್ಪರ್ಧೆ

0

 

ಜೇಸಿಐ ಸುಳ್ಯ ಪಯಸ್ವಿನಿ ಜೆಸಿ ಸಪ್ತಾಹ ದ ಅಂಗವಾಗಿ ಅಮರ ಪಡ್ನೂರು ಗ್ರಾಮದ ಶ್ರೇಣಿ ಅಂಗನವಾಡಿ ಕೇಂದ್ರದಲ್ಲಿ ಪೀಠೋಪಕರಣಗಳ ವಿತರಣೆ ಹಾಗೂ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಸ್ಪರ್ಧೆಯನ್ನು ಸೆಪ್ಟೆಂಬರ್ 10ರಂದು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ ಇದರ ಘಟಕ ಅಧ್ಯಕ್ಷ ಜೆಸಿ ರಂಜಿತ್ ಕುಕ್ಕೆಟಿ ವಹಿಸಿದ್ದರು.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಆನಂದ ಗೌಡ ಚಿಲ್ಪಾರ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಮೀನಾಕ್ಷಿ, ಗ್ರಾಮ ಪಂಚಾಯತ್ ಅಮರ ಪಡ್ನೂರು ,ಜೆಸಿ ಪ್ರಸಾದ್ ಕಿಮ್ಮಿಂಜೆ ಪೂರ್ವ ಅಧ್ಯಕ್ಷರು ಜೆಸಿಐ ಸುಳ್ಯ ಪಯಸ್ವಿನಿ, ಶ್ರೀಮತಿ ಪುಷ್ಪಿತ ಉದಯಕುಮಾರ್, ಅಧ್ಯಕ್ಷರು ಪಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಶೇಣಿ,ಶ್ರೀಮತಿ ಧರ್ಮಾವತಿ ಕಾರ್ಯಕರ್ತೆ ಅಂಗನವಾಡಿ ಕೇಂದ್ರ, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಗುರುರಾಜ್ ಅಜ್ಜಾವರ ಉಪಸ್ಥಿತರಿದ್ದರು.

ಜೆಸಿ ಸಪ್ತಾಹದ ನಿರ್ದೇಶಕಿ ಯಾದ ಜೆಸಿ ಶೋಭಾ ಅಶೋಕ್ ಚೂಂತಾರು ಸಪ್ತಾಹದ ವರದಿಯನ್ನು ವಾಚಿಸಿದರು,ಜೆ ಸಿ ರವಿಕುಮಾರ್ ಅಕ್ಕೋಜಿ ಪಾಲ್ ಜೆಸಿ ತಾರಾ ಮಾಧವ ಗೌಡ ಜಿ ಸಿ ಭಟ್ ಜೆಜೆಸಿ ಅಕ್ಷತ್ ಕುಮಾರ್ ಅಜ್ಜಾವರ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜೆಸಿ ವಲಯ 15ರ ಪೂರ್ವ ಅಧ್ಯಕ್ಷರಾದ ಜೆಸಿ ಅಶೋಕ್ ಚೂಂತಾರು ಉಪಸ್ಥಿತರಿದ್ದರು .ಕಾರ್ಯದರ್ಶಿ ಜೆಸಿ ನವೀನ್ ಕುಮಾರ್ ವಂದಿಸಿದರು.

 

 

LEAVE A REPLY

Please enter your comment!
Please enter your name here