ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ “ಕಲಾಪರ್ವ”

0

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ “ಕಲಾಪರ್ವ” ಜರುಗಿತು. ಇಂದ್ರಪ್ರಸ್ಥ ವಿದ್ಯಾಲಯದ ಸಹಶಿಕ್ಷಕಿ ನಿಶಿತಾ ಕೆ. ಕಾರ್ಯಕ್ರಮ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

 

ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಹೆಚ್.ಕೆ. ಪ್ರಕಾಶ್, ವಿದ್ಯಾರ್ಥಿ ನಾಯಕ ನಿಹಾರ್ ಎಂ. ಶೆಟ್ಟಿ, ಕಾರ್‍ಯದರ್ಶಿ ತನ್ವಿ ಜಿ.ಕೆ., ಕ್ರೀಡಾ ಕಾರ್ಯದರ್ಶಿ ನೂಮನ್ ಉಪಸ್ಥಿತರಿದ್ದರು. ಕಲಾಪರ್ವದ ಪ್ರಯುಕ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗಾಯನ, ಭಾಷಣ, ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಆಂಗ್ಲ ಭಾಷಾ ಉಪನ್ಯಾಸಕಿ  ಶಿಲ್ಪಾ ವಿ.ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here