ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗೀತಗಾಯನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ತೃತೀಯ ಸ್ಥಾನ

0

 

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮಂಗಳೂರು ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಅಶ್ವಿಜ್ ಅತ್ರೇಯ,

ತನ್ಮಯ್, ಚಂದನ್, ಅಕ್ಷರ್, ಬಿಪಿನ್‌ಕುಮಾರ್, ಹಂಶಿತ್‌ಕುಮಾರ್, ಲಕ್ಷ್ಯಜಿತ್ ಜಿ ರೈ, ಕೌಶಲ್‌ರವರು ಭಾಗವಹಿಸಿ ಜಿಲ್ಲಾಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯ ಸುಮಾರು ೩೩ ತಂಡಗಳು ಭಾಗವಹಿಸಿದ್ದು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತೃತೀಯ ಸ್ಥಾನವನುಪಡೆದುಕೊಂಡಿರುತ್ತದೆ.

ಈ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಭಾನುಪ್ರಕಾಶ್ ಸಿ ಜೆ ಮತ್ತು ಅನಿತಾ ಮಸ್ಕರೇನಸ್‌ರವರು ತರಬೇತಿ ಮತ್ತು ಮಾರ್ಗದರ್ಶನ ನೀಡಿರುತ್ತಾರೆ.

LEAVE A REPLY

Please enter your comment!
Please enter your name here