ದುಗ್ಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ದುಗ್ಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.14ರಂದು ದುಗ್ಗಲಡ್ಕದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಎನ್.ಜಿ.ವಹಿಸಿದ್ದರು.ಸಂಘವು ಪ್ರಸಕ್ತ ವರ್ಷದಲ್ಲಿ ರೂ.54,222.81 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 0.15 ಪೈಸೆ ಬೋನಸ್ ನೀಡಲಾಗುವುದೆಂದು ಹೇಳಿದರು.ಕಳೆದ 4 ತಿಂಗಳಿನಿಂದ ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ನಿರಂಜನ್ ಬಿ.ಎನ್.ರವರನ್ನು ಶಾಲು,ಸ್ಮರಣಿಕೆ,ಫಲಪುಷ್ಪಗಳನ್ನು ನೀಡಿ ಸಭೆಯಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ನಿರ್ದೇಶಕಿ ಶ್ರೀಮತಿ ಸುಶ್ಮಿತಾ ಎಂ.ಎಸ್.ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷೆ, ಹಾಲಿ ನಿರ್ದೇಶಕಿ ಶ್ರೀಮತಿ ಭಾರತಿ ಕೆ.ಎಸ್. ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಪ್ರಿಯಾ ವರದಿ ವಾಚಿಸಿದರು.ನಿರ್ದೇಶಕಿ ಶ್ರೀಮತಿ ಶೀಲಾವತಿ ಪಿ‌.ವಂದಿಸಿದರು. ಉಪಾಧ್ಯಕ್ಷೆ ಶ್ರೀಮತಿ ಉಷಾ ಪಿ.ಎಸ್.,ನಿರ್ದೇಶಕರುಗಳಾದ ಶ್ರೀಮತಿ ವಾರಿಜ ಕೆ.ಕೆ.,ಶ್ರೀಮತಿ ಹೇಮಾವತಿ ಕೆ.,ಶ್ರೀಮತಿ ಲೀಲಾವತಿ ಕೆ.ಎಸ್.,ಶ್ರೀಮತಿ ಅಮೃತ ಎಂ.ಎಸ್.,ಶ್ರೀಮತಿ ಸವಿತಾ ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಎಂ.ಸಿ.ನಿರ್ವಾಹಕಿ ಶ್ರೀಮತಿ ನಯನ ಕೆ.,ಹಾಲು ಪರೀಕ್ಷಕಿ ಶ್ರೀಮತಿ ಅರುಣಾ ಪಿ. ಸಹಕರಿಸಿದರು.

LEAVE A REPLY

Please enter your comment!
Please enter your name here