ಪುತ್ತೂರು: ಗ್ರಾಮದ ವಿಶಾಲವಾದ ಭಾವದಕೆರೆಯ ಬಳಿಯಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ಪುರಾತನ ಮೂಲ ಶ್ರೀ ನಾಗ ಸಾನಿಧ್ಯ ಜೀರ್ಣೋದ್ಧರಗೊಂಡಿದ್ದು, ಜ.27ರಂದು ನಾಗ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಬನ್ನೂರು ಶ್ರೀ ದೇವಿ ದೈಯರ ಮಾಡ ನಡಿಮಾರ್ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯ ಆನೆಮಜಲು ಭಾವದಕೆರೆ ಶ್ರೀ ನಾಗ ಸಾನಿಧ್ಯ ಅಲುಂಬುಡ ಜೀರ್ಣೋದ್ಧಾರ ಸಮಿತಿವತಿಯಿಂದ ದೈಯರ ಮಾಡದಲ್ಲಿ 2020ರ ಜ.17ರಂದು ದೈವಜ್ಞ ಗಣೇಶ್ ಭಟ್ ಕೇಕನಾಜೆಯವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಜೀರ್ಣಾವ್ಯವಸ್ಥೆಯಲ್ಲಿರುವ ನಾಗ ಸನ್ನಿಧಿಯನ್ನು ಜೀರ್ಣೋದ್ಧಾರೊಗಳಿಸಿದ್ದು, ಇದೀಗ ನಾಗಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ಆಶ್ಲೇಷ ಬಲಿ ನಡೆಯಲಿದೆ. ಜ.26ಕ್ಕೆ ಸಂಜೆ ಪುಣ್ಯಾಹವಾಚನ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯಲಿದೆ. ಜ.27ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದ ಬಳಿಕ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ಆಶ್ಲೇಷ ಬಲಿ ನಡೆಯಲಿದೆ. ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಆಶ್ಲೇಷ ಬಲಿಯನ್ನು ಸೇವಾ ರೂಪದಲ್ಲಿ ಮಾಡಿಸಲು ಭಕ್ತರು ರಶೀದಿಯನ್ನು ಮಾಡಿಸಿಕೊಳ್ಳಬೇಕು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಗೌಡ ಅಲುಂಬುಡ ಅವರು ತಿಳಿಸಿದ್ದಾರೆ.
ಜೀರ್ಣಾವ್ಯವಸ್ಥೆಯಲ್ಲಿರುವ ನಾಗ ಸನಿಧಿಯನ್ನು ಊರಿನ ಭಕ್ತರು ಸೇರಿಕೊಂಡು ಜೀರ್ಣೋದ್ಧಾರಗೊಳಿಸಿ ಇದೀಗ ನಾಗಪ್ರತಿಷ್ಠೆ ನಡೆಯಲಿದೆ. ಇದಾದ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದಾಗ ಸಕಲ ನಾಗದೋಷ ಪರಿಹಾರವಾಗಿ ಗ್ರಾಮಕ್ಕೆ ಹಾಗು ಜನತೆಗೆ ಆರೋಗ್ಯ ಭಾದೆ, ಕೌಟುಂಬಿಕ ಸಮಸ್ಯೆ, ಕೃಷಿ ಭುಮಿಗೆ ಸಮೃದ್ಧಿ, ಚರ್ಮರೋಗ ನಿವಾರಣೆ, ಜ್ಞಾಪಕ ಶಕ್ತಿ ವೃದ್ಧಿ, ದೃಷ್ಠಿದೋಷ, ಸಕಲ ನಾಗದೋಷ ಪರಿಹಾರವಾಗಿ ಗ್ರಾಮಕ್ಕೆ ಸುಭಿಕ್ಷೆ ದೊರೆಯಲಿದೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ಶ್ರೀ ದೇವಿ ದೈಯರ ಮಾಡ ನರಿಮಾರ್ ಬನ್ನೂರು ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯ ಆನೆಮಜಲು, ಭಾವದಕೆರೆ ಶ್ರೀ ನಾಗ ಸಾನಿಧ್ಯದ ಮೂರು ಶಕ್ತಿಗಳು ತ್ರಿಕೋನ ಸಂಬಂಧವಾಗಿದ್ದು, ಈಗಾಗಲೇ ನಾಗನ ಕಟ್ಟೆಯ ಜೀರ್ಣೋದ್ಧರ ಕಾರ್ಯ ಪೂರ್ಣಗೊಂಡಿದ್ದು, ಮುಂದೆ ಶ್ರೀ ದೇವಿ ದೈಯರ ಮಾಡ ಹಾಗು ಇಷ್ಟದೇವತೆ, ಅಣ್ಣಪ್ಪ ಪಂಜರ್ಲಿ, ರಕ್ತೇಶ್ವರಿ ಸಾನಿಧ್ಯದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ – ಎ.ವಿ.ನಾರಾಯಣ ಗೌಡ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ