ನೆಕ್ಕಿಲಾಡಿ ಮೈಂದಡ್ಕದ ನಮ್ಮೂರು-ನಮ್ಮವರು ಸಂಘಟನೆಯಿಂದ ಸುದ್ದಿ ಜನಾಂದೋಲನಕ್ಕೆ ಬೆಂಬಲ

0

ಪುತ್ತೂರು: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಂದಡ್ಕ ಮೈದಾನದಲ್ಲಿ ನಮ್ಮೂರು ನಮ್ಮವರು ಸಂಸ್ಥೆಯ ವತಿಯಿಂದ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಶಿವಾಜಿನಗರರವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ನಿವೃತ್ತ ಯೋಧ ಪುರುಷೋತ್ತಮ ಕುದ್ಕೋಳಿರವರಿಗೆ ಕಾರ್ಯಕ್ರಮದಲ್ಲಿ ಯೋಧ ನಮನ ಸಲ್ಲಿಸಲಾಯಿತು. ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸೇನಾ ಅಧಿಕಾರಿಗಳಿಗೆ ಉಪ್ಪಿನಂಗಡಿಯ ಹಿರಿಯ ಪತ್ರಕರ್ತ ಉದಯ ಕುಮಾರ್ ಯು.ಎಲ್.ರವರು ನುಡಿನಮನ ಸಲ್ಲಿಸಿದರು. ಗ್ರಾ. ಪಂ. ಉಪಾಧ್ಯಕ್ಷೆ ಸಪ್ನ ಜೀವನ್ ಶಾಂತಿನಗರ, ನಮ್ಮೂರು ನಮ್ಮವರು ಸಂಸ್ಥೆಯ ಅಧ್ಯಕ್ಷ ಗಣೇಶ್ ನಾಯಕ್ ಸಹಿತ ಹಲವರು ಉಪಸ್ಥಿತರಿದ್ದರು. ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಜಿಲ್ಲೆಯಾದ್ಯಂತ ನಡೆಸಲಾಗುತ್ತಿರುವ ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ರಮಕ್ಕೆ ಘೋಷಣೆ ಮೂಲಕ ಬೆಂಬಲ ಸೂಚಿಸಲಾಯಿತು. ಬಾಲಕೃಷ್ಣ ತಾಳೆಹಿತ್ಲು‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here