ಕೇಂದ್ರ ಕಾಫಿ ಮಂಡಳಿಯ ಸದಸ್ಯರಾಗಿ ಕಿಶೋರ್ ಕುಮಾರ್ ಟಿ.ಎ. ನೇಮಕ

0

 

ಭಾರತ ಸರ್ಕಾರವು ಕೇಂದ್ರ ಕಾಫಿ ಮಂಡಳಿಯ ಸದಸ್ಯರನ್ನಾಗಿ ಕಿಶೋರ್ ಕುಮಾರ್ ಟಿ .ಎ. ಅವರನ್ನು
ನೇಮಕ ಮಾಡಿದೆ.

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿರುವ ಈ ಕಾಫಿ ಮಂಡಳಿಯಲ್ಲಿ ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯ, ಪದನಿಮಿತ್ತ ವಿವಿಧ ಇಲಾಖಾಧಿಕಾರಿಗಳ ಸಹಿತ 31 ಸದಸ್ಯರುಗಳಿದ್ದು ಕಿಶೋರ್ ಕುಮಾರ್ ಕೊಡಗಿನಿಂದ ಆಯ್ಕೆಯಾದ ಏಕೈಕ ಸದಸ್ಯರಾಗಿದ್ದಾರೆ.

ಕೇಂದ್ರ ರೇಷ್ಮೆ ಹಾಗೂ ಕೈಮಗ್ಗ ನಿಗಮದ ಮಾಜಿ ಸದಸ್ಯರಾಗಿರುವ ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ನ ಸದಸ್ಯರಾಗಿ , ಅಕಾಡೆಮಿಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕೊಡವ ಅಧ್ಯಯನ ಪೀಠದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಟ್ಟಗೇರಿಯ ಉದಯ ಎಜುಕೇಶನಲ್ ಟ್ರಸ್ಟ್ ಹಾಗೂ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರೂ ಆಗಿರುವ ಕಿಶೋರ್ ಅವರು, ಮಡಿಕೇರಿ ತಾಲೂಕು ಪಂಚಾಯಿತ್ ನ ಮಾಜಿ ಅಧ್ಯಕ್ಷರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅರ್ವತೊಕ್ಲು ಗ್ರಾಮದವರಾದ ಕಿಶೋರ್ ಅವರ ಪತ್ನಿ ಶ್ರೀಮತಿ ಸ್ವರ್ಣಕಲಾ, ಸುಳ್ಯದ ಶ್ರೀ ಶಾರದ ಮಹಿಳಾ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿದ್ದಾರೆ.

LEAVE A REPLY

Please enter your comment!
Please enter your name here