ತ್ಯಾಗರಾಜೆ ನೂರುಲ್ ಹುದಾ ಮಸೀದಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

0

ಪುತ್ತೂರು: ದೇಶದ ೭೩ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ತ್ಯಾಗರಾಜೆ ಜಮಾಅತ್ ಸಮಿತಿ ವತಿಯಿಂದ ಆಚರಿಸಲಾಯಿತು. ಜಮಾಅತ್ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಪಟ್ಟೆ ಧ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವ ಸಂದೇಶ ಭಾಷಣ ಮಾಡಿದ ಸ್ಥಳೀಯ ಖತೀಬರಾದ ಅಬ್ದುಲ್ ನಾಸಿರ್ ಫೈಝಿ ಕುಂತೂರು ನಮ್ಮ ಪೂರ್ವಿಕರು ದೊರಕಿಸಿಕೊಟ್ಟ ಭಾರತದ ಸಂವಿಧಾನವನ್ನು ಉಳಿಸಲು ಪ್ರತಿಯೊಬ್ಬ ಭಾರತೀಯರು ಪಣ ತೊಡಬೇಕು ಎಂದರು. ನಂತರ ಮದ್ರಸ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್‌ಬಿವಿ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡಿದರು. ಮದ್ರಸ ಪ್ರ.ಅಧ್ಯಾಪಕರಾದ ನಾಸಿರ್ ಫೈಝಿ ಪ್ರತಿಜ್ಞಾವಿಧಿ ಬೋಧಿಸಿದರು. ಸಹ ಅಧ್ಯಾಪಕರಾದ ಆಸಿಫ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಶರೀಫ್ ತ್ಯಾಗರಾಜೆ, ಇಬ್ರಾಹಿಂ ಹಾಜಿ ಹಾಗೂ ಜಮಾಅತರು ಎಸ್ಕೆಎಸ್ಸೆಸ್ಸೆಫ್ ಹಾಗೂ ಎನ್‌ಎಚ್‌ವೈಎ ಸದಸ್ಯರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here