ಪುತ್ತೂರು, ಕಡಬ ತಾಲೂಕಿನಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ – ಹಲವೆಡೆ ಸುದ್ದಿ ಜನಾಂದೋಲನಕ್ಕೆ ಬೆಂಬಲ

0

  • ಉತ್ತಮ ಸೇವೆಗೆ ಪುರಸ್ಕಾರ-ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಘೋಷಣೆ, ಪ್ರತಿಕೃತಿ ದಹನ 
  • ಲಂಚ ಭ್ರಷ್ಟಾಚಾರ ಮನೋರೋಗ
  • ಪುತ್ತೂರು ಗಾಂಧಿಕಟ್ಟೆ ಬಳಿ ನಡೆದ ಸುದ್ದಿ ಜನಾಂದೋಲನದಲ್ಲಿ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್

ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಸುದ್ದಿ ಜನಾಂದೋಲನ ಅಂಗವಾಗಿ ಭ್ರಷ್ಟಾಚಾರದ ಪ್ರತಿಕೃತಿಯ ದಹನ ಕಾರ್ಯಕ್ರಮ ಜ.೨೬ರಂದು ಪುತ್ತೂರು ಗಾಂಧಿಕಟ್ಟೆಯ ಬಳಿ ನಡೆಯಿತು.

ಕಾರ್‍ಯಕ್ರಮದಲ್ಲಿ ಮಾತನಾಡಿದ ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್‌ರವರು ಲಂಚ, ಭ್ರಷ್ಟಾಚಾರ ಎನ್ನುವುದು ಮನೋರೋಗ. ಹೆಚ್ಚು ಭ್ರಷ್ಟಾಚಾರ ಮಾಡಿದಂತೆ ಆತ ಅಷ್ಟು ದೊಡ್ಡ ಮನೋರೋಗಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿಶ್ಲೇಷಿಸಿದರು.

ಭ್ರಷ್ಟಾಚಾರ ಇಂದು ಸಾರ್ವಜನಿಕ ಹಾಗೂ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರದಿಂದ ಹಾನಿಗೆ ಒಳಗಾಗಿದ್ದಾರೆ. ಭ್ರಷ್ಟಾಚಾರ ಎನ್ನುವುದು ಬರೀಯ ಸರಕಾರಿ ವ್ಯವಸ್ಥೆಗೆ ಸೀಮಿತವಾಗಿಲ್ಲ. ಖಾಸಗಿ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಇದರಿಂದಾಗಿ ಪ್ರಾಮಾಣಿಕತೆ ಕಡಿಮೆಯಾಗಿದೆ. ಕೆಲಸ, ಕಾರ್ಯಗಳು ಕಲುಷಿತಗೊಳ್ಳುತ್ತಿವೆ. ಎಷ್ಟೋ ಕೆಲಸಗಳಿಗೆ ಇದು ಅಡ್ಡಿಯಾಗಿದೆ. ಆದ್ದರಿಂದ ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿ ಹಬ್ಬಿದೆ ಎಂದರು.

ಭ್ರಷ್ಟಾಚಾರ, ಲಂಚಕ್ಕೆ ಕಡಿವಾಣ ಹಾಕುವುದು ಇಂದಿನ ಅಗತ್ಯ. ಮನೋರೋಗವಾಗಿ ಹರಡುತ್ತಿರುವ ಈ ಕಾಯಿಲೆಗೆ ಚಿಕಿತ್ಸೆ ನೀಡಲು ಹೊರಟಿರುವ ಡಾ. ಯು.ಪಿ. ಶಿವಾನಂದ್ ನೇತೃತ್ವದ ಸುದ್ದಿ ಬಳಗದ ಕಾರ್ಯ ಶ್ಲಾಘನೀಯ ಹಾಗೂ ಹೆಮ್ಮೆಯ ಕೆಲಸ. ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ. ಇಂತಹ ಮಾಧ್ಯಮ ಈ ಆಂದೋಲನವನ್ನು ಕೈಗೆತ್ತಿಕೊಂಡಿರುವುದು ಉತ್ತಮ ಕೆಲಸ. ಇಂತಹ ಉತ್ತಮ ಕಾರ್ಯಗಳು, ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದರು.

ಸುದ್ದಿ ಜನಾಂದೋಲನ ವೇದಿಕೆಯ ಡಾ. ಯು.ಪಿ. ಶಿವಾನಂದ್‌ರವರು ಮಾತನಾಡಿ, ಉತ್ತಮ ಕೆಲಸ ಮಾಡುವವರಿಗೆ ಸಹಕಾರ, ಪ್ರೋತ್ಸಾಹ ನೀಡಬೇಕಾದದ್ದು ಕೂಡ ನಮ್ಮ ಕರ್ತವ್ಯ. ಪ್ರತಿ ಗ್ರಾಮದಲ್ಲೂ ಇದು ನಡೆಯಬೇಕು. ಉತ್ತಮ ಕೆಲಸಗಳಿಗೆ ಮನ್ನಣೆ, ಪ್ರೋತ್ಸಾಹ ಅಗತ್ಯ. ಭ್ರಷ್ಟಾಚಾರದಿಂದ ಹೊರ ಬರಬೇಕಾದರೆ ವಾತಾವರಣ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲೂ ಘೋಷಣೆ ಕೂಗಿzವೆ. ಮುಂದೆ ಅವರು ಅಧಿಕಾರಿಗಳಾಗುವವರು. ಆದ್ದರಿಂದ ನನಗೆ ಖಂಡಿತಾ ಭರವಸೆ ಇದೆ. ನಮ್ಮ ತಾಲೂಕಿನಲ್ಲಿ ಭ್ರಷ್ಟಾಚಾರ, ಲಂಚ ದೂರ ಆಗುವ ದಿನಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ್ರೋಹದ ಕೆಲಸ: ಭ್ರಷ್ಟಾಚಾರ ದೇಶದ್ರೋಹದ ಕೆಲಸ. ಭ್ರಷ್ಟಾಚಾರ ಮಾಡಿದವರನ್ನು ದೂರ ಇಡಬೇಕು. ಆಗ ಅವರ ಮನಃಪರಿವರ್ತನೆ ಸಾಧ್ಯ. ಅದು ಬಿಟ್ಟು ಹೆದರಿಸಿ, ಬೆದರಿಸಿ ಭ್ರಷ್ಟಾಚಾರವನ್ನು ದೂರ ಮಾಡಲು ಸಾಧ್ಯವಿಲ್ಲ. ಗಾಂಧಿ ತತ್ವದಂತೆ ನಾವು ಕೆಲಸ ಮಾಡುತ್ತಿzವೆ. ಒಳ್ಳೆಯ ಕೆಲಸ ಮಾಡುವವರಿಗೆ ಸದಾ ಸ್ವಾಗತ. ಜನಪ್ರತಿನಿಧಿಗಳು ಈ ಹೋರಾಟಕ್ಕೆ ಖಂಡಿತಾ ಬೆಂಬಲ ನೀಡುತ್ತಾರೆ ಎಂದರು.

ಮನಸ್ಸಿನ ಸ್ವಚ್ಛತೆ: ಇದು ಪ್ರತಿಭಟನೆ ಅಲ್ಲ; ಅಭಿಯಾನ. ಪ್ರತಿಭಟನೆ ಎಂದಾಗ ಜನರು ಭಯ ಗೊಳ್ಳುತ್ತಾರೆ. ಯಾಕೆಂದರೆ ಯಾರ ವಿಷಯದಲ್ಲಿ ಇವರು ಮಾತನಾಡುತ್ತಾರೆ ಎಂದು. ಇದು ಒಂದು ರೀತಿಯಲ್ಲಿ ಸರಕಾರದ ಕಾರ್ಯಕ್ರಮ. ಅಂದರೆ ಮನಸ್ಸಿನ ಸ್ವಚ್ಛತೆ. ಮನಸ್ಸು ಸ್ವಚ್ಛ ಮಾಡಿದಂತೆ, ಸಮಾಜದಲ್ಲೂ ಬದಲಾವಣೆಯ ಗಾಳಿ ಬೀಸತೊಡಗುತ್ತದೆ. ಈ ಸಲ ಜನಾಂದೋಲನವಾಗಿ ಅಭಿಯಾನ ನಡೆಸುತ್ತಿzವೆ. ಎಲ್ಲಾ ಇಲಾಖೆಗಳು ನಮ್ಮದೇ ಎಂದಾದರೆ ಅವರಿಗೆ ವಿರೋಧ ಯಾಕೆ? ವಿರೋಧ ಇಲ್ಲ. ಉತ್ತಮ ಸೇವೆ ಕೊಡಿ ಎಂದು ಕೇಳುತ್ತಿzವೆ ಅಷ್ಟೇ. ನಮಗೆ ಮತದಾನದ ಶಕ್ತಿ ನೀಡಿದ್ದಾರೆ. ಆದ್ದರಿಂದ ನಮಗೆ ಕೇಳುವ ಹಕ್ಕಿದೆ. ಆದ್ದರಿಂದ ಇದು ನಮ್ಮ ಹಕ್ಕಿನ ಪ್ರತಿಪಾದನೆ ಎಂದರು.

ಉತ್ತಮ ಸೇವೆಗೆ ಮನವಿ: ಭ್ರಷ್ಟಾಚಾರ, ಲಂಚಕ್ಕೆ ಯಾವ ಇಲಾಖೆ, ಸರಕಾರದಲ್ಲೂ ಸಮ್ಮತಿ ಇಲ್ಲ. ಆದ್ದರಿಂದ ಎಲ್ಲಾ ಇಲಾಖೆ, ಜನಪ್ರತಿನಿಧಿಗಳ ಸಹಕಾರವನ್ನು ಪಡೆದುಕೊಂಡಿzವೆ. ಮುಂದೆ ತಾಲೂಕಿನ ಇಲಾಖೆಗಳಿಗೆ ಬರುವ ಅಧಿಕಾರಿಗಳಿಗೆ ಸ್ವಾಗತ ಮಾಡುತ್ತಾ, ಉತ್ತಮ ಸೇವೆ ನೀಡಲು ಮನವಿ ಮಾಡುತ್ತೇವೆ. ದಾರಿ ತಪ್ಪಿದರೆ ಜನರೇ ದೂರ ಇಡುತ್ತಾರೆ. ನಾವು ಮಾಧ್ಯಮವಾಗಿ ಉತ್ತಮ ಕೆಲಸಗಳಿಗೆ ಬೆಂಬಲ ನೀಡುತ್ತೇವೆ ಎಂದರು.

ಭ್ರಷ್ಟಾಚಾರ, ಲಂಚಕ್ಕೆ ಕೈಯೊಡ್ಡುವವರ ಬಗ್ಗೆ ಇಡೀ ಊರಿನ ಜನ ಮಾತನಾಡಬೇಕು. ಮನೆಯಲ್ಲೂ ಮಾತನಾಡುವಂತಾಗಬೇಕು. ಆಗ ಭ್ರಷ್ಟಾಚಾರ ದೂರ ಆಗುತ್ತದೆ. ಆಗ ಲಂಚ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ. ಲಂಚ ತೆಗೆದುಕೊಳ್ಳದ ಉತ್ತಮ ಅಧಿಕಾರಿಗೆ ಎಲ್ಲರೂ ಮರ್ಯಾದೆ ಕೊಡುತ್ತಾರೆ ಎಂದರು.

ಲಂಚ, ಭ್ರಷ್ಟಾಚಾರದ ದಹನ: ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂದಾಗ ದಹನ ಯಾರನ್ನು ಮಾಡುತ್ತೀರಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ನಾವು ಯಾವುದೇ ವ್ಯಕ್ತಿಯ ವಿರುದ್ಧ ಈ ಅಭಿಯಾನ ನಡೆಸುತ್ತಿಲ್ಲ. ಬದಲಾಗಿ ಲಂಚ ಅಥವಾ ಭ್ರಷ್ಟಾಚಾರ ಎನ್ನುವ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದೇವೆ. ಕಸವನ್ನು ಗುಡಿಸಿ ಬೆಂಕಿ ಹಂಚಿದಂತೆ, ಇದು ಕೂಡ. ಭ್ರಷ್ಟಾಚಾರದ ಪ್ರತಿಕೃತಿಯನ್ನು ಮಾಡಿ, ಅದಕ್ಕೆ ಬೆಂಕಿ ಕೊಡುತ್ತಿದ್ದೇವೆ. ಅದರಲ್ಲೂ ದೊಡ್ಡ ಪ್ರತಿಕೃತಿ ಮಾಡಿದರೆ ಸಮಸ್ಯೆ ಎನ್ನುವ ಕಾರಣಕ್ಕೆ, ಸಣ್ಣ ಪ್ರತಿಕೃತಿಯನ್ನು ಮಾಡುತ್ತಿ ದ್ದೇವೆ ಎಂದರು.

ಬಲಾತ್ಕಾರದ ಬಂದ್‌ಗೆ ಬಂಬಲವಿಲ್ಲ: ಬಲಾತ್ಕಾರದ ಬಂದ್ ವಿರುದ್ಧದ ಹೋರಾಟದಿಂದಾಗಿ ನಾವು ಹೊಡೆತ ತಿಂದಿzವೆ. ಆದರೆ ಎಲ್ಲಾ ವರ್ಗದ ಜನರ ಜೊತೆ ಮಾತುಕತೆ ನಡೆಸಿ, ಜನಾಂದೋಲನವಾಗಿ ಹೋರಾಟವನ್ನು ಮೂಡಿಸಿದೆವು. ಮುಂದೆ ಪತ್ರಿಕೆ ನಿಲ್ಲಿಸುವಂತಾಯಿತು. ಜನರ ಬೆಂಬಲದಿಂದಾಗಿ ಮತ್ತೆ ಪತ್ರಿಕೆ ಆರಂಭಿಸುವಂತಾಯಿತು. ಇಂದು ಬಲಾತ್ಕಾರದ ಬಂದ್‌ಗೆ ಬೆಂಬಲ ಇಲ್ಲ ಎಂಬಂತಹ ಮಾತು ಜನರಿಂದಲೇ ಕೇಳಿಬರುತ್ತಿದೆ. ಜನರ ಶಕ್ತಿಯಿಂದಾಗಿ ಹೋರಾಟ ಯಶಸ್ಸಾಯಿತು ಎನ್ನುವುದು ಇಲ್ಲಿ ಉಲ್ಲೇಖನೀಯ ಎಂದು ಡಾ. ಯು.ಪಿ. ಶಿವಾನಂದ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಮಾತನಾಡಿ, ೧೯೮೫ರಲ್ಲಿ ಯುವ ವೈದ್ಯರಾಗಿದ್ದ ಡಾ. ಯು.ಪಿ. ಶಿವಾನಂದ್ ಅವರು ಬಳಕೆದಾರರ ವೇದಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ಆರಂಭಿಸಿದರು. ೧೯೮೫ ಜನವರಿ ೧೦ರಂದು ಸುಳ್ಯ ಜಾತ್ರೆಯ ದಿನ ಬಸ್‌ನಿಲ್ದಾಣದಲ್ಲಿ ಭ್ರಷ್ಟಾಚಾರದ ಪ್ರತಿಕೃತಿಯನ್ನು ದಹನ ಮಾಡಿದ್ದರು. ಹೋರಾಟದಿಂದಾಗಿ ಅನೇಕ ಸವಾಲುಗಳು ಎದುರಾಯಿತು. ಇದನ್ನು ಎದುರಿಸಲು ಪ್ರಭಾವಿ ನಾಯಕರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮುಂದಕ್ಕೆ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯನ್ನು ಆರಂಭಿಸಿ, ತಮ್ಮ ಹೋರಾಟವನ್ನು ಮುಂದುವರಿಸಿದರು. ಪತ್ರಿಕೆಯ ಮೂಲಕ ನಿರಂತರವಾಗಿ ಬಲಾತ್ಕಾರದ ಬಂದ್, ವಾರಾಂತ್ಯದ ಕರ್ಫ್ಯೂ ಮೊದಲಾದ ವಿಚಾರಗಳ ವಿರುದ್ಧ ಹೋರಾಟ ಮಾಡುವ ಜೊತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಮಹಾತ್ಮಾ ಗಾಂಧೀ ಜಯಂತಿಯ ಸಂದರ್ಭದಲ್ಲಿ ಜನರಿಗೆ ತಮ್ಮ ಹಕ್ಕುಗಳು, ಅಧಿಕಾರದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದರು. ಇದೀಗ ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಅಭಿಯಾನ ಆರಂಭಿಸಲಾಗಿದೆ. ಸಮಾಜದ ವಿವಿಧ ವರ್ಗದ ಪ್ರಮುಖರು, ಅಧಿಕಾರಿಗಳು, ಜನಸಾಮಾನ್ಯರಿಂದ ಉತ್ತಮ ಬೆಂಬಲ ಸಿಕ್ಕಿದ್ದು, ಇಂದು ಅಂದರೆ ಜನವರಿ ೨೬ರಂದು ಪುತ್ತೂರು, ಸುಳ್ಯ, ಬೆಳ್ತಂಗಡಿಯ ಪ್ರತಿ ಗ್ರಾಮಗ್ರಾಮಗಳಲ್ಲಿ ಲಂಚ, ಭ್ರಷ್ಟಾಚಾರದ ದಹನವಾಗಿದೆ. ಇದರ ಮುಂದುವರಿದ ಅಂಗವಾಗಿ ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರದ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ೩ ತಿಂಗಳ ಕಾಲ ಇದು ನಿರಂತರವಾಗಿ ನಡೆಯಲಿದೆ ಎಂದರು.

ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಘೋಷಿಸಿದರು. ಸುದ್ದಿ ಜನಾಂದೋಲನ ವೇದಿಕೆಯ ಪುತ್ತೂರು ಮುಖ್ಯಸ್ಥ ಗಣೇಶ್ ಎನ್. ಕಲ್ಲರ್ಪೆ ವಂದಿಸಿದರು.ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಸುದ್ದಿ ಜನಾಂದೋಲನ ಅಂಗವಾಗಿ ಭ್ರಷ್ಟಾಚಾರದ ಪ್ರತಿಕೃತಿಯ ದಹನ ಕಾರ್ಯಕ್ರಮ ಜ.೨೬ರಂದು ಪುತ್ತೂರು ಗಾಂಧಿಕಟ್ಟೆಯ ಬಳಿ ನಡೆಯಿತು.

ಕಾರ್‍ಯಕ್ರಮದಲ್ಲಿ ಮಾತನಾಡಿದ ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್‌ರವರು ಲಂಚ, ಭ್ರಷ್ಟಾಚಾರ ಎನ್ನುವುದು ಮನೋರೋಗ. ಹೆಚ್ಚು ಭ್ರಷ್ಟಾಚಾರ ಮಾಡಿದಂತೆ ಆತ ಅಷ್ಟು ದೊಡ್ಡ ಮನೋರೋಗಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿಶ್ಲೇಷಿಸಿದರು.

ಭ್ರಷ್ಟಾಚಾರ ಇಂದು ಸಾರ್ವಜನಿಕ ಹಾಗೂ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರದಿಂದ ಹಾನಿಗೆ ಒಳಗಾಗಿದ್ದಾರೆ. ಭ್ರಷ್ಟಾಚಾರ ಎನ್ನುವುದು ಬರೀಯ ಸರಕಾರಿ ವ್ಯವಸ್ಥೆಗೆ ಸೀಮಿತವಾಗಿಲ್ಲ. ಖಾಸಗಿ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಇದರಿಂದಾಗಿ ಪ್ರಾಮಾಣಿಕತೆ ಕಡಿಮೆಯಾಗಿದೆ. ಕೆಲಸ, ಕಾರ್ಯಗಳು ಕಲುಷಿತಗೊಳ್ಳುತ್ತಿವೆ. ಎಷ್ಟೋ ಕೆಲಸಗಳಿಗೆ ಇದು ಅಡ್ಡಿಯಾಗಿದೆ. ಆದ್ದರಿಂದ ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿ ಹಬ್ಬಿದೆ ಎಂದರು.

ಭ್ರಷ್ಟಾಚಾರ, ಲಂಚಕ್ಕೆ ಕಡಿವಾಣ ಹಾಕುವುದು ಇಂದಿನ ಅಗತ್ಯ. ಮನೋರೋಗವಾಗಿ ಹರಡುತ್ತಿರುವ ಈ ಕಾಯಿಲೆಗೆ ಚಿಕಿತ್ಸೆ ನೀಡಲು ಹೊರಟಿರುವ ಡಾ. ಯು.ಪಿ. ಶಿವಾನಂದ್ ನೇತೃತ್ವದ ಸುದ್ದಿ ಬಳಗದ ಕಾರ್ಯ ಶ್ಲಾಘನೀಯ ಹಾಗೂ ಹೆಮ್ಮೆಯ ಕೆಲಸ. ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ. ಇಂತಹ ಮಾಧ್ಯಮ ಈ ಆಂದೋಲನವನ್ನು ಕೈಗೆತ್ತಿಕೊಂಡಿರುವುದು ಉತ್ತಮ ಕೆಲಸ. ಇಂತಹ ಉತ್ತಮ ಕಾರ್ಯಗಳು, ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದರು.

ಸುದ್ದಿ ಜನಾಂದೋಲನ ವೇದಿಕೆಯ ಡಾ. ಯು.ಪಿ. ಶಿವಾನಂದ್‌ರವರು ಮಾತನಾಡಿ, ಉತ್ತಮ ಕೆಲಸ ಮಾಡುವವರಿಗೆ ಸಹಕಾರ, ಪ್ರೋತ್ಸಾಹ ನೀಡಬೇಕಾದದ್ದು ಕೂಡ ನಮ್ಮ ಕರ್ತವ್ಯ. ಪ್ರತಿ ಗ್ರಾಮದಲ್ಲೂ ಇದು ನಡೆಯಬೇಕು. ಉತ್ತಮ ಕೆಲಸಗಳಿಗೆ ಮನ್ನಣೆ, ಪ್ರೋತ್ಸಾಹ ಅಗತ್ಯ. ಭ್ರಷ್ಟಾಚಾರದಿಂದ ಹೊರ ಬರಬೇಕಾದರೆ ವಾತಾವರಣ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲೂ ಘೋಷಣೆ ಕೂಗಿzವೆ. ಮುಂದೆ ಅವರು ಅಧಿಕಾರಿಗಳಾಗುವವರು. ಆದ್ದರಿಂದ ನನಗೆ ಖಂಡಿತಾ ಭರವಸೆ ಇದೆ. ನಮ್ಮ ತಾಲೂಕಿನಲ್ಲಿ ಭ್ರಷ್ಟಾಚಾರ, ಲಂಚ ದೂರ ಆಗುವ ದಿನಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ್ರೋಹದ ಕೆಲಸ: ಭ್ರಷ್ಟಾಚಾರ ದೇಶದ್ರೋಹದ ಕೆಲಸ. ಭ್ರಷ್ಟಾಚಾರ ಮಾಡಿದವರನ್ನು ದೂರ ಇಡಬೇಕು. ಆಗ ಅವರ ಮನಃಪರಿವರ್ತನೆ ಸಾಧ್ಯ. ಅದು ಬಿಟ್ಟು ಹೆದರಿಸಿ, ಬೆದರಿಸಿ ಭ್ರಷ್ಟಾಚಾರವನ್ನು ದೂರ ಮಾಡಲು ಸಾಧ್ಯವಿಲ್ಲ. ಗಾಂಧಿ ತತ್ವದಂತೆ ನಾವು ಕೆಲಸ ಮಾಡುತ್ತಿzವೆ. ಒಳ್ಳೆಯ ಕೆಲಸ ಮಾಡುವವರಿಗೆ ಸದಾ ಸ್ವಾಗತ. ಜನಪ್ರತಿನಿಧಿಗಳು ಈ ಹೋರಾಟಕ್ಕೆ ಖಂಡಿತಾ ಬೆಂಬಲ ನೀಡುತ್ತಾರೆ ಎಂದರು.

ಮನಸ್ಸಿನ ಸ್ವಚ್ಛತೆ: ಇದು ಪ್ರತಿಭಟನೆ ಅಲ್ಲ; ಅಭಿಯಾನ. ಪ್ರತಿಭಟನೆ ಎಂದಾಗ ಜನರು ಭಯ ಗೊಳ್ಳುತ್ತಾರೆ. ಯಾಕೆಂದರೆ ಯಾರ ವಿಷಯದಲ್ಲಿ ಇವರು ಮಾತನಾಡುತ್ತಾರೆ ಎಂದು. ಇದು ಒಂದು ರೀತಿಯಲ್ಲಿ ಸರಕಾರದ ಕಾರ್ಯಕ್ರಮ. ಅಂದರೆ ಮನಸ್ಸಿನ ಸ್ವಚ್ಛತೆ. ಮನಸ್ಸು ಸ್ವಚ್ಛ ಮಾಡಿದಂತೆ, ಸಮಾಜದಲ್ಲೂ ಬದಲಾವಣೆಯ ಗಾಳಿ ಬೀಸತೊಡಗುತ್ತದೆ. ಈ ಸಲ ಜನಾಂದೋಲನವಾಗಿ ಅಭಿಯಾನ ನಡೆಸುತ್ತಿದ್ದೇವೆ. ಎಲ್ಲಾ ಇಲಾಖೆಗಳು ನಮ್ಮದೇ ಎಂದಾದರೆ ಅವರಿಗೆ ವಿರೋಧ ಯಾಕೆ? ವಿರೋಧ ಇಲ್ಲ. ಉತ್ತಮ ಸೇವೆ ಕೊಡಿ ಎಂದು ಕೇಳುತ್ತಿzವೆ ಅಷ್ಟೇ. ನಮಗೆ ಮತದಾನದ ಶಕ್ತಿ ನೀಡಿದ್ದಾರೆ. ಆದ್ದರಿಂದ ನಮಗೆ ಕೇಳುವ ಹಕ್ಕಿದೆ. ಆದ್ದರಿಂದ ಇದು ನಮ್ಮ ಹಕ್ಕಿನ ಪ್ರತಿಪಾದನೆ ಎಂದರು.

ಉತ್ತಮ ಸೇವೆಗೆ ಮನವಿ: ಭ್ರಷ್ಟಾಚಾರ, ಲಂಚಕ್ಕೆ ಯಾವ ಇಲಾಖೆ, ಸರಕಾರದಲ್ಲೂ ಸಮ್ಮತಿ ಇಲ್ಲ. ಆದ್ದರಿಂದ ಎಲ್ಲಾ ಇಲಾಖೆ, ಜನಪ್ರತಿನಿಧಿಗಳ ಸಹಕಾರವನ್ನು ಪಡೆದುಕೊಂಡಿzವೆ. ಮುಂದೆ ತಾಲೂಕಿನ ಇಲಾಖೆಗಳಿಗೆ ಬರುವ ಅಧಿಕಾರಿಗಳಿಗೆ ಸ್ವಾಗತ ಮಾಡುತ್ತಾ, ಉತ್ತಮ ಸೇವೆ ನೀಡಲು ಮನವಿ ಮಾಡುತ್ತೇವೆ. ದಾರಿ ತಪ್ಪಿದರೆ ಜನರೇ ದೂರ ಇಡುತ್ತಾರೆ. ನಾವು ಮಾಧ್ಯಮವಾಗಿ ಉತ್ತಮ ಕೆಲಸಗಳಿಗೆ ಬೆಂಬಲ ನೀಡುತ್ತೇವೆ ಎಂದರು.

ಭ್ರಷ್ಟಾಚಾರ, ಲಂಚಕ್ಕೆ ಕೈಯೊಡ್ಡುವವರ ಬಗ್ಗೆ ಇಡೀ ಊರಿನ ಜನ ಮಾತನಾಡಬೇಕು. ಮನೆಯಲ್ಲೂ ಮಾತನಾಡುವಂತಾಗಬೇಕು. ಆಗ ಭ್ರಷ್ಟಾಚಾರ ದೂರ ಆಗುತ್ತದೆ. ಆಗ ಲಂಚ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ. ಲಂಚ ತೆಗೆದುಕೊಳ್ಳದ ಉತ್ತಮ ಅಧಿಕಾರಿಗೆ ಎಲ್ಲರೂ ಮರ್ಯಾದೆ ಕೊಡುತ್ತಾರೆ ಎಂದರು.

ಲಂಚ, ಭ್ರಷ್ಟಾಚಾರದ ದಹನ: ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂದಾಗ ದಹನ ಯಾರನ್ನು ಮಾಡುತ್ತೀರಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ನಾವು ಯಾವುದೇ ವ್ಯಕ್ತಿಯ ವಿರುದ್ಧ ಈ ಅಭಿಯಾನ ನಡೆಸುತ್ತಿಲ್ಲ. ಬದಲಾಗಿ ಲಂಚ ಅಥವಾ ಭ್ರಷ್ಟಾಚಾರ ಎನ್ನುವ ವ್ಯವಸ್ಥೆಯನ್ನು ವಿರೋಧಿಸುತ್ತಿzವೆ. ಕಸವನ್ನು ಗುಡಿಸಿ ಬೆಂಕಿ ಹಂಚಿದಂತೆ, ಇದು ಕೂಡ. ಭ್ರಷ್ಟಾಚಾರದ ಪ್ರತಿಕೃತಿಯನ್ನು ಮಾಡಿ, ಅದಕ್ಕೆ ಬೆಂಕಿ ಕೊಡುತ್ತಿzವೆ. ಅದರಲ್ಲೂ ದೊಡ್ಡ ಪ್ರತಿಕೃತಿ ಮಾಡಿದರೆ ಸಮಸ್ಯೆ ಎನ್ನುವ ಕಾರಣಕ್ಕೆ, ಸಣ್ಣ ಪ್ರತಿಕೃತಿಯನ್ನು ಮಾಡುತ್ತಿದ್ದ ವೆ ಎಂದರು.

ಬಲಾತ್ಕಾರದ ಬಂದ್‌ಗೆ ಬಂಬಲವಿಲ್ಲ: ಬಲಾತ್ಕಾರದ ಬಂದ್ ವಿರುದ್ಧದ ಹೋರಾಟದಿಂದಾಗಿ ನಾವು ಹೊಡೆತ ತಿಂದಿzವೆ. ಆದರೆ ಎಲ್ಲಾ ವರ್ಗದ ಜನರ ಜೊತೆ ಮಾತುಕತೆ ನಡೆಸಿ, ಜನಾಂದೋಲನವಾಗಿ ಹೋರಾಟವನ್ನು ಮೂಡಿಸಿದೆವು. ಮುಂದೆ ಪತ್ರಿಕೆ ನಿಲ್ಲಿಸುವಂತಾಯಿತು. ಜನರ ಬೆಂಬಲದಿಂದಾಗಿ ಮತ್ತೆ ಪತ್ರಿಕೆ ಆರಂಭಿಸುವಂತಾಯಿತು. ಇಂದು ಬಲಾತ್ಕಾರದ ಬಂದ್‌ಗೆ ಬೆಂಬಲ ಇಲ್ಲ ಎಂಬಂತಹ ಮಾತು ಜನರಿಂದಲೇ ಕೇಳಿಬರುತ್ತಿದೆ. ಜನರ ಶಕ್ತಿಯಿಂದಾಗಿ ಹೋರಾಟ ಯಶಸ್ಸಾಯಿತು ಎನ್ನುವುದು ಇಲ್ಲಿ ಉಲ್ಲೇಖನೀಯ ಎಂದು ಡಾ. ಯು.ಪಿ. ಶಿವಾನಂದ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಮಾತನಾಡಿ, ೧೯೮೫ರಲ್ಲಿ ಯುವ ವೈದ್ಯರಾಗಿದ್ದ ಡಾ. ಯು.ಪಿ. ಶಿವಾನಂದ್ ಅವರು ಬಳಕೆದಾರರ ವೇದಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ಆರಂಭಿಸಿದರು. ೧೯೮೫ ಜನವರಿ ೧೦ರಂದು ಸುಳ್ಯ ಜಾತ್ರೆಯ ದಿನ ಬಸ್‌ನಿಲ್ದಾಣದಲ್ಲಿ ಭ್ರಷ್ಟಾಚಾರದ ಪ್ರತಿಕೃತಿಯನ್ನು ದಹನ ಮಾಡಿದ್ದರು. ಹೋರಾಟದಿಂದಾಗಿ ಅನೇಕ ಸವಾಲುಗಳು ಎದುರಾಯಿತು. ಇದನ್ನು ಎದುರಿಸಲು ಪ್ರಭಾವಿ ನಾಯಕರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮುಂದಕ್ಕೆ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯನ್ನು ಆರಂಭಿಸಿ, ತಮ್ಮ ಹೋರಾಟವನ್ನು ಮುಂದುವರಿಸಿದರು. ಪತ್ರಿಕೆಯ ಮೂಲಕ ನಿರಂತರವಾಗಿ ಬಲಾತ್ಕಾರದ ಬಂದ್, ವಾರಾಂತ್ಯದ ಕರ್ಫ್ಯೂ ಮೊದಲಾದ ವಿಚಾರಗಳ ವಿರುದ್ಧ ಹೋರಾಟ ಮಾಡುವ ಜೊತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಮಹಾತ್ಮಾ ಗಾಂಧೀ ಜಯಂತಿಯ ಸಂದರ್ಭದಲ್ಲಿ ಜನರಿಗೆ ತಮ್ಮ ಹಕ್ಕುಗಳು, ಅಧಿಕಾರದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದರು. ಇದೀಗ ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಅಭಿಯಾನ ಆರಂಭಿಸಲಾಗಿದೆ. ಸಮಾಜದ ವಿವಿಧ ವರ್ಗದ ಪ್ರಮುಖರು, ಅಧಿಕಾರಿಗಳು, ಜನಸಾಮಾನ್ಯರಿಂದ ಉತ್ತಮ ಬೆಂಬಲ ಸಿಕ್ಕಿದ್ದು, ಇಂದು ಅಂದರೆ ಜನವರಿ ೨೬ರಂದು ಪುತ್ತೂರು, ಸುಳ್ಯ, ಬೆಳ್ತಂಗಡಿಯ ಪ್ರತಿ ಗ್ರಾಮಗ್ರಾಮಗಳಲ್ಲಿ ಲಂಚ, ಭ್ರಷ್ಟಾಚಾರದ ದಹನವಾಗಿದೆ. ಇದರ ಮುಂದುವರಿದ ಅಂಗವಾಗಿ ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರದ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ೩ ತಿಂಗಳ ಕಾಲ ಇದು ನಿರಂತರವಾಗಿ ನಡೆಯಲಿದೆ ಎಂದರು.

ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಘೋಷಿಸಿದರು. ಸುದ್ದಿ ಜನಾಂದೋಲನ ವೇದಿಕೆಯ ಪುತ್ತೂರು ಮುಖ್ಯಸ್ಥ ಗಣೇಶ್ ಎನ್. ಕಲ್ಲರ್ಪೆ ವಂದಿಸಿದರು.

3ತಿಂಗಳಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ
ಜ.೨೬ರ ಪ್ರಜಾಪ್ರಭುತ್ವದ ಈ ದಿನದಂದು ನಾವು ಸ್ವತಂತ್ರರು, ನಮ್ಮದೇ ಆಡಳಿತ ಎಂದು ಘೋಷಣೆ ಕೂಗುತ್ತಾ ಜನಪ್ರತಿನಿಧಿಗಳನ್ನು, ಸರಕಾರವನ್ನು, ಅಧಿಕಾರಿಗಳನ್ನು ಎಚ್ಚರಿಸುತ್ತಾ , ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಅಂದರೆ ದೇಶದ್ರೋಹ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಊರಿನ ಪ್ರಮುಖ ಸ್ಥಳಗಳಲ್ಲಿ ಸೇರಿ, ಭ್ರಷ್ಟಾಚಾರದ ಪ್ರತಿಕೃತಿಯನ್ನು ದಹಿಸಿದ್ದೇವೆ. ಈ ಅಭಿಯಾನ ಮುಂದುವರಿಯಲಿದೆ. ಮುಂದಿನ ೩ ತಿಂಗಳಲ್ಲಿ ಪುತ್ತೂರು ತಾಲೂಕು ಲಂಚ, ಭ್ರಷ್ಟಾಚಾರ ಮುಕ್ತವಾಗಲಿದೆ ಎಂದು ಡಾ. ಯು.ಪಿ. ಶಿವಾನಂದ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಗ್ರಾಮದಲ್ಲೂ ಅಭಿಯಾನ
ಪ್ರತಿ ಗ್ರಾಮ ಗ್ರಾಮದಲ್ಲೂ ಲಂಚ ಭ್ರಷ್ಟಾಚಾರ ವಿರುದ್ಧದ ಅಭಿಯಾನ ನಡೆಯಬೇಕು. ಅಲ್ಲಿನ ಇಲಾಖೆಗಳು, ಅಧಿಕಾರಿಗಳು ಭ್ರಷ್ಟಾಚಾರದಿಂದ ಮುಕ್ತರಾಗಬೇಕು. ಜನರಿಗೆ ಉತ್ತಮ ಸೇವೆ ನೀಡಬೇಕು. ಇದು ನಮ್ಮ ಇಲಾಖೆ, ನಮ್ಮ ಅಧಿಕಾರಿಗಳು ಎನ್ನುವ ವಾತಾವರಣ ನಿರ್ಮಾಣವಾಗಬೇಕು. ಒಂದು ಗ್ರಾಮದಲ್ಲಿ ಇಂತಹ ವಾತಾವರಣ ಮೂಡಿದರೆ, ಅದು ತಾಲೂಕಿಗೆ ಹರಡುತ್ತದೆ. ತಾಲೂಕು ಭ್ರಷ್ಟಾಚಾರ ಮುಕ್ತವಾದರೆ ದೇಶಕ್ಕೆ ಮಾದರಿ ತಾಲೂಕಾಗಿ ಗುರುತಿಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲೂ ಅಭಿಯಾನ ಹಮ್ಮಿಕೊಳ್ಳಲಾಗುವುದು ತಾಲೂಕು, ಜಿಲ್ಲೆಗೂ ಆಭಿಯಾನ ವಿಸ್ತರಿಸಲಾಗುವುದು ಎಂದು ಡಾ.ಯು.ಪಿ. ಶಿವಾನಂದ್ ಹೇಳಿದರು.

ಗ್ರಾಮಗಳಲ್ಲಿ ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನ
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ, ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕರೂ ಆಗಿರುವ ಸುದ್ದಿ ಜನಾಂದೋಲನ ವೇದಿಕೆಯ ಮುಖ್ಯ ರೂವಾರಿ ಡಾ.ಯು.ಪಿ. ಶಿವಾನಂದರವರ ನೇತೃತ್ವದಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಉತ್ತಮ ಸೇವೆಗೆ ಪುರಸ್ಕಾರ-ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಲಂಚ, ಭ್ರಷ್ಟಾಚಾರ ಮುಕ್ತ ನಮ್ಮ ಊರು, ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ’ ಎಂಬ ಅಭಿಯಾನಕ್ಕೆ ಹಲವೆಡೆ ಬೆಂಬಲ ವ್ಯಕ್ತವಾಗಿದೆ. ಸುದ್ದಿ ಜನಾಂದೋಲನ ಬೆಂಬಲಿಸಿ ಈಗಾಗಲೇ ಧರ್ಮಾಧಿಕಾರಿಗಳು, ಸಚಿವರು, ಶಾಸಕರು ಸಹಿತ ವಿವಿಧ ಸ್ತರದ ಜನಪ್ರತಿನಿಧಿಗಳು, ಹಿರಿಯ, ಕಿರಿಯ ಅಧಿಕಾರಿಗಳು, ವಕೀಲರು ಸಹಿತ ವಿವಿಧ ಕ್ಷೇತ್ರಗಳ ಪ್ರಮುಖರು ಭ್ರಷ್ಟಾಚಾರ ವಿರೋಧಿ ಫಲಕ ಅಳವಡಿಸಿದ್ದಾರೆ. ಅಲ್ಲದೆ, ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸಿ ಉತ್ತಮ ಸೇವೆ ಮಾಡಿದವರನ್ನು ಪುರಸ್ಕರಿಸುವುದಾಗಿ ಘೋಷಿಸಿದ್ದಾರೆ. ಇದೀಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿದೆಡೆ ಸುದ್ದಿ ಜನಾಂದೋಲನಕ್ಕೆ ಬೆಂಬಲ ಸೂಚಿಸಿ ಘೋಷಣೆ ಕೂಗಲಾಗಿದೆ. ಅಲ್ಲದೆ, ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹಿಸಲಾಗಿದೆ.

LEAVE A REPLY

Please enter your comment!
Please enter your name here