ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ದುರ್ಗಾ, ಅಶ್ವತ್ಥ ಪೂಜೆ – ಮಹಾಲಕ್ಷ್ಮೀ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯಿಂದ ಕಾರ್ಯಕರ್ತರಿಗೆ ಅಭಿನಂದನೆ

0

  • ಬ್ರಹ್ಮಕಲಶೋತ್ಸವ ಯಶಸ್ವಿನ ಹಿಂದಿನ ಶಕ್ತಿ ಕಾರ್ಯಕರ್ತರು – ವಿಶ್ವನಾಥ ಗೌಡ

 

ಪುತ್ತೂರು: ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಜ.25ರಂದು ದುರ್ಗಾಪೂಜೆ ಮತ್ತು ಅಶ್ವತ್ಥ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಶಿವ ಪಾರ್ವತಿ ಮಂದಿರದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಬನ್ನೂರು ಶ್ರೀ ಮಹಾಲಕ್ಷ್ಮಿ ಮಂದಿರದ ಬ್ರಹ್ಮಕಲಶೋತ್ಸವದಲ್ಲಿ ಶ್ರಮವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಭೆಯು ನಡೆಯಿತು.

 


ಬ್ರಹ್ಮಕಲಶೋತ್ಸವ ಯಶಸ್ವಿನ ಹಿಂದಿನ ಶಕ್ತಿ ಕಾರ್ಯಕರ್ತರು :
ಶ್ರೀ ಶಿವಪಾರ್ವತಿ ಮಂದಿರದ ಸಭಾಭವನದಲ್ಲಿ ಬ್ರಹ್ಮಕಲಶೋತ್ಸವದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ ಶ್ರೀ ಮಹಾಲಕ್ಷ್ಮೀ ಮಂದಿರದ ಜೀರ್ಣೋದ್ಧಾರ ಕಾರ್ಯದಿಂದ ಬ್ರಹ್ಮಕಲಶೋತ್ಸವದ ತನಕ ಕಾರ್ಯಕರ್ತರು ಪೂರ್ಣ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಕೋವಿಡ್ ಲಾಕ್‌ಡೌನ್‌ನಲ್ಲೂ ಸಹ ಕಾರ್ಯಕರ್ತರ ಕಾರಸೇವೆ ನಿರಂತರ ನಡೆದಿದೆ. ಕಾರ್ಯಕರ್ತರು ಬ್ರಹ್ಮಕಲಶೋತ್ಸವದ ಯಶಸ್ವಿನ ಹಿಂದಿನ ಶಕ್ತಿಯಾಗಿ ಮೂಡಿದ್ದಾರೆ ಎಂದರು. ಶ್ರೀ ಶಿವ ಪಾರ್ವತಿ ಮಂದಿರದ ಗೌರವಾಧ್ಯಕ್ಷ ಉದಯ ಕುಮಾರ್ ಅವರು ಕಾರ್ಯಕರ್ತರನ್ನು ಅಭಿನಂದಿಸಿದರು. ಕಾರ್ಯಕರ್ತರಿಗೆ ಶಾಲು, ಸ್ಮರಣಿಗೆ ನೀಡಿ ಗೌರವಿಸಲಾಯಿತು. ಮಂದಿರದ ಕೋಶಾಧಿಕಾರಿ ಮೋಹನ್ ಜೈನ್, ಹಿರಿಯರಾದ ಶೇಷಪ್ಪ ಪೂಜಾರಿ, ಚಂದ್ರಶೇಖರ್, ಲೋಕೇಶ್ ಬನ್ನೂರು, ಶೇಖರ್ ಬಿರ್ವ, ದಯಾನಂದ, ಹರ್ಷ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಶಿವ ಪಾರ್ವತಿ ಮಂದಿರದಲ್ಲಿ ದುರ್ಗಾಪೂಜೆ ಸಂಪನ್ನಗೊಂಡಿತ್ತು.

 

LEAVE A REPLY

Please enter your comment!
Please enter your name here