ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

  • ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಮಾತ್ಮನ ಅಂಶ : ಜಯಮಾಲಾ

ಪುತ್ತೂರು : ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಮಾತ್ಮನ ಅಂಶ. ಮಕ್ಕಳಲ್ಲಿ ಅದ್ಭುತವಾದ ಸಾಮರ್ಥ್ಯವಿದೆ. ತನ್ನೊಳಗೆ ಹುದುಗಿರುವ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಸೂಕ್ತ ಅವಕಾಶ, ವೇದಿಕೆ ಸಿಕ್ಕಿದಾಗ ಆ ವಿದ್ಯಾರ್ಥಿ ಪರಿಪೂರ್ಣನಾಗುತ್ತಾನೆ ಎಂದು ಸಾಂದೀಪನಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಜಯಮಾಲಾ ಹೇಳಿದರು.

 


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ)ದಲ್ಲಿ ನಡೆದ ಶೈಕ್ಷಣಿಕ ವರ್ಷ ೨೦೨೧-೨೨ ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.

ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯಿಂದ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ. ಒಳ್ಳೆಯ ವ್ಯಕ್ತಿಯ ಒಡನಾಟದಿಂದ ಒಳ್ಳೆಯ ಮನು?ನಾಗಲು ಸಾಧ್ಯ. ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜದೊಂದಿಗೆ ಒಳ್ಳೆಯ ಸಂಬಂಧವನ್ನು ಇರಿಸಿಕೊಳ್ಳಬೇಕು. ಸಂಸ್ಕಾರ, ಸಂಸ್ಕೃತಿ ತತ್ವ ಶಾಸ್ತ್ರ ವೇದ, ಪುರಾಣ ಜ್ಞಾನ ವಿದ್ಯಾರ್ಥಿಗಳಿಗೆ ದೊರಕಬೇಕಾದ್ದು ಅಗತ್ಯ. ಅವೆಲ್ಲವನ್ನೂ ಅಂಬಿಕಾ ಸಂಸ್ಥೆ ಒದಗಿಸುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯ ಎಂದರು.

ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಭಟ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಳೆದ ಎರಡು ವ?ಗಳಿಂದ ಯಾವುದೇ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿಲ್ಲ. ಅವರಲ್ಲಿದ್ದ ಪ್ರತಿಭೆಗಳು ಹಾಗೆಯೇ ಮುದುಡಿವೆ. ಕೊರೋನಾದಿಂದಾಗಿ ಶಾಲೆಗಳಿಲ್ಲದೆ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಸಿಗಲಿಲ್ಲ ಎಂಬುದು ಬೇಸರದ ವಿಚಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ವೇದಿಕೆ ಸಿಕ್ಕಿದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಪ್ರತಿಭೆಯಿದೆ. ವ್ಯಕ್ತಿಗೆ ಹಣ, ಪದವಿ ಮುಖ್ಯವಲ್ಲ, ಬದಲಾಗಿ ಮಾನವೀಯತೆಯ ಗುಣಗಳನ್ನು ತನ್ನಲ್ಲಿ ಅಳವಡಿಕೊಳ್ಳಬೇಕು. ಶಿಕ್ಷಣದ ಜೊತೆಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕತೆ ಮುಖ್ಯ ಎಂದು ತಿಳಿಸಿದರು.

ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ಶಿಕ್ಷಕಿಯರಾದ ಸುಚೇತಾ ರತ್ನ, ಅನ್ನಪೂರ್ಣ, ಸುಜಯಾ ಹಾಗೂ ಶಿಕ್ಷಕ ರಮೇಶ್ ವಾಚಿಸಿದರು. ಸಂಸ್ಥೆಯಲ್ಲಿ ವಿಶೇಷಸಾಧನೆಯನ್ನು ಮಾಡಿ ಸಂಸ್ಥೆಯ ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳ ವಿವರವನ್ನು ಕೃತಿಕಾ ವಾಚಿಸಿದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಖಜಾಂಜಿ  ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.

ವಿಶೇಷ ಪುರಸ್ಕಾರ :
೨೦೨೦ನೇ ವ?ದಲ್ಲಿ ಸಂಸ್ಥೆಯಿಂದ ಸ್ಕೌಟ್ಸ್-ಗೈಡ್ಸ್ ವಿಭಾಗದಲ್ಲಿ ತೃತೀಯ ಸೋಪಾನ ಪರೀಕ್ಷೆಯನ್ನು ಪೂರೈಸಿದ, ಸಂಸ್ಕೃತಿ, ಮನ್ವಿತ್ ಎಸ್, ಸ್ವಸ್ತಿಕ್ ಎ. ಎಸ್, ಪ್ರಾರ್ಥನಾ ರೈ, ನಮೃತಾ ಇವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ:
A Novel way of Recycling microplastic using Natural Binder ಎಂಬ ವಿಷಯದಲ್ಲಿ ವೈಜ್ಞಾನಿಕ ಯೋಜನಾ ಕಾರ್ಯ ನಡೆಸಿ Boot ಕ್ಯಾಂಪ್‌ನಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರವರ್ಧನ್ ಕೆ. ಪಿ ಹಾಗೂ ಜಸ್ವಿತ್ ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಶ್ರೀಯಾಮ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಶ್ರೇ?, ನಮ್ರತಾ ಹಾಗೂ ಆತ್ಮಶ್ರೀ ಪ್ರಾರ್ಥಿಸಿದರು. ಕಾರ್ಯಕ್ರಮ ಭಾರ್ಗವಿ ಬೋರ್ಕರ್ ಹಾಗೂ ಆತ್ಮಶ್ರೀ ನಿರ್ವಹಿಸಿ, ವಿದ್ಯಾರ್ಥಿ ಸನ್ಮಯ್ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here