ಸವಣೂರು : ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

0

ಸವಣೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ಇದರ ವತಿಯಿಂದ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಸಹಲ್ ಕಾಂಪ್ಲೆಕ್ಸ್  ಬಳಿ ನಡೆಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಎ.ಆಬ್ದುಲ್ ರಝಾಕ್ ರವರು ನೆರವೇರಿಸಿದರು.  ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾದ್ಯಕ್ಷರಾದ ಬಾಬು ಸವಣೂರು,ಪ್ರಧಾನ ಕಾರ್ಯದರ್ಶಿ ನಝೀರ್ ಸಿ ಎ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಸಂಬ್ಲಿ ಸಂಘಟಣಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ,ಬದ್ರೀಯಾ ಜುಮಾ ಮಸೀದಿ ಚಾಪಲ್ಲ ಅದ್ಯಕ್ಷರಾದ ಉಮ್ಮರ್ ಹಾಜಿ ಕೆನರಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸವಣೂರು ಡಿವಿಝನ್ ಅಧ್ಯಕ್ಷರಾದ ರಫಿಕ್ ಎಂ ಎಸ್,ಸವಣೂರು ಏರಿಯಾ ಅದ್ಯಕ್ಷರಾದ ಇರ್ಷಾದ್ ಸರ್ವೆ,ಈಸುಬು ಹಾಜಿ ಬೇರಿಕೆ,ಸುಲೈಮಾನ್ ಪಲ್ಲತಮೂಲೆ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.  ಎಸ್‌ಡಿಪಿಐ ಸವಣೂರು ‌ಬ್ಲಾಕ್ ಅದ್ಯಕ್ಷ ರಫೀಕ್ ಎಂ ಎ ಸ್ವಾಗತಿಸಿ
ವಲಯ ಕಾರ್ಯದರ್ಶಿ ರಫೀಕ್ ಪಿ ವಂದಿಸಿದರು 

LEAVE A REPLY

Please enter your comment!
Please enter your name here