ಅಡ್ಕಾರು ಸೇತುವೆ ಬಳಿ ಗದಗ ಮೂಲದ ವ್ಯಕ್ತಿಯ ಮೃತದೇಹ ಪತ್ತೆ

0

 

ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಆಧಾರ್ ಕಾರ್ಡ್ ಆಧರಿಸಿ ವ್ಯಕ್ತಿಯ ಗುರುತುಪತ್ತೆ

ಗದಗ ಮೂಲದ ವ್ಯಕ್ತಿಯೊಬ್ಬರ ಮೃತದೇಹವೊಂದು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದ ಸೇತುವೆ ಬಳಿ ಪಯಸ್ವಿನಿ ನದಿಯಲ್ಲಿ ಪತ್ತೆಯಾದ ಘಟನೆ ಸೆ.17ರಂದು ಸಂಜೆ ಸಂಭವಿಸಿದೆ.

ಶರ್ಟ್ ಹಾಗೂ ಪ್ಯಾಂಟ್ ಧರಿಸಿರುವ ಅಪರಿಚಿತ ವ್ಯಕ್ತಿಯ
ಮೃತದೇಹವು ಪಯಸ್ವಿನಿ ನದಿಯ ಹಳೆ ಸೇತುವೆಯ ಕಂಬದ ಬಳಿ ಮರದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಸ್ಥಳಕ್ಕೆ ಸುಳ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬಂದು ಸ್ಥಳೀಯರ ಸಹಕಾರದಿಂದ ಬೋಟ್ ಮೂಲಕ ತೆರಳಿ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದರು.
ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ಪರ್ಸ್ ದೊರೆತಿದ್ದು, ಅದರಲ್ಲಿ ಅವರ ಆಧಾರ್ ಕಾರ್ಡ್ ನೋಡಿದಾಗ ಗದಗ ಜಿಲ್ಲೆಯ ಸವದತ್ತಿಯ ಲಾಲಾ ಸಾಬ ಆನೆಹೊಸೂರ (26 ವರ್ಷ) ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here