ಇಂಟರ್ನ್‌ಶಿಪ್ ಅ ಗ್ರೇಟ್ ಕೆರಿಯರ್’ ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಗಾರ

0

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಉದ್ಯೋಗ ಕ್ಷೇತ್ರದ ಅನುಭವ ನೀಡುವ ಕಾರ್ಯವನ್ನು ಇಂಟರ್ನ್‌ಶಿಪ್ ಮಾಡುತ್ತದೆ. ವಿದ್ಯಾಭ್ಯಾಸ ಪೂರೈಸಿದ ನಂತರದಲ್ಲೇ ಉದ್ಯೋಗ ಸಿಗುವುದು ಖಚಿತ ಎಂದು ಬೆಂಗಳೂರಿನ ಅವೋಧ ಎಜ್ಯುಟೆಕ್‌ನ ಬ್ಯುಸಿನೆಸ್ ಡೆವಲಪ್‌ಮೆಂಟ್ ಅಸೋಸಿಯೇಟ್ ತಷಿಕಾ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಅಶ್ರಯದಲ್ಲಿ ‘ಇಂಟರ್ನ್‌ಶಿಪ್ ಅ ಗ್ರೇಟ್ ಕೆರಿಯರ್’ ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಪ್ರಸ್ತುತ ಸ್ಫರ್ಧಾತ್ಮಕ ಜಗತ್ತಿನಲ್ಲಿ ನೂತನವಾಗಿ ಪದವೀಧರರಾದವರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ಇಂಟರ್ನ್‌ಶಿಪ್‌ನಂತಹ ಸದಾವಕಾಶಗಳು ಹುಟ್ಟಿಕೊಂಡಿವೆ. ವಿದ್ಯಾರ್ಥಿಗಳನ್ನು ಉದ್ಯೋಗ ಕ್ಷೇತ್ರದಲ್ಲಿ ನೈಪುಣ್ಯರನ್ನಾಗಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ತರವಾದ ಪಾತ್ರವಹಿಸುತ್ತದೆ ಎಂದು ಹೇಳಿದರು.

ಬೆಂಗಳೂರಿನ ಅವೋಧ ಎಜುಟೆಕ್‌ನ ಕೆರಿಯರ್ ಎಕ್ಸ್‌ಪರ್ಟ್ ತುಷಾನ್ ಮಾತನಾಡಿ, ಇಂಟರ್ನ್‌ಶಿಪ್‌ನ ಅವಶ್ಯಕತೆ ಹಾಗೂ ಉದ್ಯೋಗ ಜೀವನಕ್ಕೆ ಅದರಿಂದಾಗುವ ಉಪಯೋಗಗಳನ್ನು ತಿಳಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಸ್ವಾಗತಿಸಿ, ಫ್ಲೋರ್ ಮ್ಯಾನೇಜರ್ ಅನುಜರಾಜ್ ಪ್ರಸ್ತಾವನೆಗೈದರು. ಉಪನ್ಯಾಸಕಿ ಜ್ಯೋತಿ ಎಂ.ಎಂ. ನಿರ್ವಹಿಸಿದರು.

LEAVE A REPLY

Please enter your comment!
Please enter your name here