ವಿವೇಕಾನಂದ ಕಾಲೇಜಿನಲ್ಲಿ ಮತದಾರರ ದಿನ ಕಾರ್ಯಕ್ರಮ

0

 


ಪುತ್ತೂರು: ರಾಷ್ಟ್ರೀಯ ಮತದಾರರ ದಿನಕ್ಕೆ ತುಂಬಾ ಮಹತ್ವವಿದೆ. 18 ವರ್ಷ ಮೇಲ್ಪಟ್ಟ ಜನರು ಮತದಾರರ ಗುರುತಿನ ಚೀಟಿಯನ್ನು ಇನ್ನೂ ಮಾಡಿಕೊಂಡಿಲ್ಲ. ಪ್ರತಿಯೊಬ್ಬರು ವೋಟರ್ ಐಡಿ ಮಾಡಿಕೊಳ್ಳಬೇಕು. ಜವಾಬ್ದಾರಿಯುತ ಪ್ರಜೆಗಳಾಗಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು.


ಅವರು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಐಕ್ಯೂಎಸಿ ಘಟಕಗಳು ಮತದಾರ ದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ನಮ್ಮ ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ಮತದಾರರ ಸಾಕ್ಷರತಾ ಘಟಕದ ಆಶ್ರಯದಲ್ಲಿ ಯುವ ಮತದಾರರ ನೊಂದಾವಣೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವೇಕಾನಂದ ಪದವಿ ಕಾಲೇಜು, ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಮುಖೇನವಾಗಿ ಅತಿ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿಕೊಂಡಿದೆ. ನಮ್ಮ ವಿವೇಕಾನಂದ ಕಾಲೇಜು ವೋಟರ್ ಹೆಲ್ಪ್‌ಲೈನ್ ಮೂಲಕ ರಾಜ್ಯದಲ್ಲಿ ಅತೀಹೆಚ್ಚು ಮತದಾರರ ಯುವ ಮತದಾರರ ನೋಂದಾವಣೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಬಿ. ಮಾತನಾಡಿ, ಭಾರತದಲ್ಲಿ ಜನವರಿ ೨೬ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಅದರ ಹಿಂದಿನ ದಿನವನ್ನು ಮತದಾರರ ದಿನವೆಂದು ಆಚರಿಸಲಾಗುತ್ತದೆ. ಆ ದಿನ ನಮಗೆಲ್ಲ ಪರ್ವಕಾಲ. ಇಂದು ಪ್ರತಿ ಮತವೂ ಮುಖ್ಯವಾಗಿದೆ. ಕೆಲವೊಂದು ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಒಂದು ವೋಟ್‌ಗಳಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ಪ್ರತಿಯೊಬ್ಬರು ವೋಟ್ ಹಾಕಬೇಕು. ಯಾವುದೇ ಆಮಿಷಕ್ಕೆ ಬಲಿಯಾಗದೆ ಸೂಕ್ತ ಪ್ರತಿನಿಧಿಯನ್ನು ಆರಿಸಲು ನಮ್ಮ ಮತ ಬಳಕೆಯಾಗಲಿ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಮಾಹಿತಿ ನೀಡಿದರು.

ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವಿ?ಕುಮಾರ್ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಅನಿತಾ ಕಾಮತ್ ಕೆ. ಮತ್ತು ಕವಿತಾ ಬಿ., ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ ಸಿ., ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಪ್ರಮೋದ್ ಎಂ.ಜಿ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೃತೀಯ ಬಿಎ ವಿದ್ಯಾರ್ಥಿ ಬ್ರಿಜೇಶ್ ಸ್ವಾಗತಿಸಿ, ಪ್ರಥಮ ಬಿಎ ವಿದ್ಯಾರ್ಥಿನಿ ಪದ್ಮಾ ರೈ ವಂದಿಸಿ, ದ್ವಿತೀಯ ಬಿಎ ವಿದ್ಯಾರ್ಥಿನಿ ಸುಲಕ್ಷಣ ನಿರೂಪಿಸಿದರು.

LEAVE A REPLY

Please enter your comment!
Please enter your name here