ಜ.30: ಗಾಂಧೀಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆ

0

  • ಗಾಂಧೀ ಪಾದಸ್ಪರ್ಶ ಮಾಡಿದ್ದ ರಾಗೀಕುಮೇರ್‌ಗೆ ಪಾದಾಯಾತ್ರೆ

ಪುತ್ತೂರು: ಗಾಂಧೀಕಟ್ಟೆ ಸಮಿತಿಯಿಂದ ನಡೆಯುವ ಈ ವರ್ಷದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮರ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಣೆಗೆ ಸಿದ್ದತೆ ಮಾಡಿಕೊಂಡಿದ್ದು, ೧೯೪೩ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಗಿಕುಮೇರ್ ಪರಿಶಿಷ್ಟ ಜಾತಿ ಕಾಲೊನಿಗೆ ಪಾದಾಯಾತ್ರೆ ಮಾಡಿದ್ದ ಪ್ರದೇಶಕ್ಕೆ ಈ ವರ್ಷ ಪಾದಾಯಾತ್ರೆ ಮಾಡುವ ಮೂಲಕ ವಿಶಿಷ್ಠ ರೀತಿಯಲ್ಲಿ ಆಚರಿಸಲಿದ್ದಾರೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧೀಕಟ್ಟೆ ಸಮಿತಿ ಹಾಗೂ ಗಾಂಧೀ ವಿಚಾರ ವೇದಿಕೆ ಪುತ್ತೂರು ಇವುಗಳ ಜಂಟೀ ಆಶ್ರಯಲ್ಲಿ ಗಾಂಧೀಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ, ಗಾಂಧೀ ಪ್ರತಿಮೆಗೆ ಮಾಲಾರ್ಪಣೆ, ರಾಮಕೃಷ್ಣ ಪ್ರೌಢಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ನಾಯಕತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ. ೧೦.೫೯ಕ್ಕೆ ಅಗ್ನಿ ಶಾಮಕ ದಳದವರಿಂದ ಸೈರನ್ ಮೊಳಗಿಸಿ ಗೌರವಾರ್ಪಣೆ ನಡೆದ ಬಳಿಕ ಗಾಂಧೀಕಟ್ಟೆಯಿಂದ ಗಾಂಧೀಜಿಯವರು ಪಾದಸ್ಪರ್ಶ ಮಾಡಿದ ಸ್ಥಳ ರಾಗಿಕುಮೇರ್‌ಗೆ ಪಾದಾಯಾತ್ರೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಸಹಾಯಕ ಆಯುಕ್ತ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ರಮೇಶ್ ಬಾಬು ಹಾಗೂ ಡಿವೈಎಸ್‌ಪಿ ಡಾ. ಡಾನಾ.ಪಿ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಗಾಂಧೀಕಟ್ಟೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here