ಅಡ್ಕಾರು: ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಕುರಿತು ಪೂರ್ವಭಾವಿ ಸಭೆ

0

 

ನೂತನ ಉತ್ಸವ ಸಮಿತಿ ರಚನೆ

ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಅಯ್ಯಪ್ಪ ಮಂದಿರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಜರುಗುವ ವಾರ್ಷಿಕೋತ್ಸವದ ಕುರಿತು ಪೂರ್ವಭಾವಿ ಸಭೆ ಹಾಗೂ ನೂತನ ಉತ್ಸವ ಸಮಿತಿಯನ್ನು ಸೆ.18ರಂದು ರಚಿಸಲಾಯಿತು.


ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ನಾರಾಯಣ ಮಡಿವಾಳ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಅಡ್ಕಾರು ಅದ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ಜರುಗುವ ವಾರ್ಷಿಕೋತ್ಸವ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.


ಈ ಸಂದರ್ಭದಲ್ಲಿ ನೂತನ ಉತ್ಸವ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉದಯ ಮಣಿಯಾಣಿ ಪದವು, ಕಾರ್ಯದರ್ಶಿಯಾಗಿ ತೀಕ್ಷಣ್ ಅಡ್ಕಾರು, ಜೊತೆ ಕಾರ್ಯದರ್ಶಿಯಾಗಿ ಅಖಿಲೇಶ್ ಪದವು, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ದಿನೇಶ್ .ಕೆ ಮೂಕಾಂಬಿಕಾ, ಗಣೇಶ್ ಅಂಬಾಡಿಮೂಲೆ, ಹರೀಶ್ ಕಲ್ಲಡ್ಕ
ಪುರುಷೋತ್ತಮ ಕಾಮತ್,
ಬಾಲಕೃಷ್ಣ ಕಾನ, ಸದಸ್ಯರುಗಳಾಗಿ
ತೀರ್ಥೇಶ್, ರಕ್ಷಿತ್, ರಾಜೇಶ್, ಮೋಕ್ಷಿತ್, ಭರತ್, ನವೀನ್ ಅಂಬಾಡಿಮೂಲೆ, ರಾಜೇಶ್ ( ಮಣಿ), ಸತೀಶ್ ಪೂಜರಿ, ಲೋಕೇಶ್ ಪದವು, ಚಂದ್ರಶೇಖರ್ ಪದವು, ಶೇಖರ ಪದವು ಇವರನ್ನು ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here