ಉಪ್ಪಿನಂಗಡಿ: ಬಸ್ ಡಿಕ್ಕಿ – ಬೈಕ್ ಸವಾರರಿಗೆ ಗಾಯ

0

ಉಪ್ಪಿನಂಗಡಿ: ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಪೆದಮಲೆ ಎಂಬಲ್ಲಿ ಫೆ.1ರಂದು ನಡೆದಿದೆ. ರಾಜಸ್ಥಾನದ ಮೂಲದ ಮೋಹನ್ ಸಿಂಗ್ ಹಾಗು ಅಶೊಕ್ ಗಾಯಗೊಂಡವರು. ಬೈಕ್ ಸವಾರ 34-ನೆಕ್ಕಿಲಾಡಿ ರಾಜಸ್ಥಾನ್ ಗ್ರಾನೈಟ್ ಸಂಸ್ಥೆಯ ಸಿಬ್ಬಂದಿ ಅಶೋಕ್ ರವರಿಗೆ ಗಂಭಿರ ಗಾಯಗೊಂಡಿದೆ.


ಉಪ್ಪಿನಂಗಡಿಯಿಂದ ಗುರುವಾಯನಕೆರೆ ಹೋಗುತ್ತಿದ್ದ ಬೈಕ್ ಗೆ ಗುರುವಾಯಿನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here