ಕಳಪೆ ಆರೋಪ: ಸ್ಥಗಿತಗೊಂಡಿದ್ದ ಮತ್ತೆ ಕಾಮಗಾರಿ ಆರಂಭ

0

 

ಉಪ್ಪಿನಂಗಡಿ: ಕಳಪೆ ಕಾಮಗಾರಿಯೆಂದು ಗ್ರಾಮಸ್ಥರ ಆಕ್ಷೇಪಣೆಯ ಬಳಿಕ ಸ್ಥಗಿತಗೊಂಡಿದ್ದ ಹಿರೇಬಂಡಾಡಿ ಗ್ರಾಮದ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಎಂಜಿನಿಯರ್‌ಗಳು ಈ ಕಾಮಗಾರಿಯನ್ನು ಎಸ್ಟಿಮೇಟ್ ಪ್ಲಾನಿಂಗ್‌ನಂತೆ ನಡೆಸಲು ಸೂಚಿಸಿದ ಬಳಿಕ ಮತ್ತೆ ಆರಂಭಿಸಲಾಗಿದೆ.

 


ಹಿರೇಬಂಡಾಡಿ ಗ್ರಾಮದ ಮುರ ಕ್ರೋಟ್ರಾಸ್- ಅಡ್ಕರೆಗುರಿ ರಸ್ತೆಯ ಕಾಂಕ್ರೀಟ್ ಕಾಮಗಾರಿಯು ಕಳಪೆಯಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರ ಆಕ್ಷೇಪಣೆಯ ಬಳಿಕ ಈ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಮಂಗಳವಾರ ಸ್ಥಳಕ್ಕೆ ಜಿ.ಪಂ. ಎಂಜಿನಿಯರಿಂಗ್ ಪುತ್ತೂರು ವಿಭಾಗದ ಸಹಾಯಕ ಎಂಜಿನಿಯರ್ ಭರತ್ ಹಾಗೂ ಕಿರಿಯ ಎಂಜಿನಿಯರ್ ಸಂದೀಪ್ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದ್ದು, ಕಾಂಕ್ರೀಟ್‌ನ ದಪ್ಪವನ್ನು ಕಾಮಗಾರಿಯ ಎಸ್ಟಿಮೆಂಟ್ ಪ್ಲಾನಿಂಗ್‌ನಂತೆ ಹೆಚ್ಚಿಸಿ ಕಾಮಗಾರಿ ನಡೆಸಲು ಎಂಜಿನಿಯರ್‌ಗಳು ಸೂಚಿಸಿದರು. ಬಳಿಕ ಕಾಂಕ್ರೀಟ್ ಕಾಮಗಾರಿಯನ್ನು ಆರಂಭಿಸಲಾಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅನುದಾನದಲ್ಲಿ ಈ ಕಾಮಗಾರಿ ಮಂಜೂರುಗೊಂಡಿತ್ತು.


ಗುಣಮಟ್ಟ ಪರಿಶೀಲನಾ ಸಂದರ್ಭ ಗ್ರಾಮಸ್ಥರಾದ ಅಶೋಕ್ ಕುಮಾರ್ ಪಡ್ಪು, ಚೆನ್ನಕೇಶವ ಕನ್ಯಾನ, ಮಾಧವ ಗೌಡ ಹೆನ್ನಾಳ, ಧರ್ನಪ್ಪ ಬರೆಕೆರೆ, ನಾರಾಯಣ ಬಂಗೇರ ಎಲಿಯ, ಪುನೀತ್ ಬರೆಕೆರೆ, ಸಲೀಂ ಮುರ ಕ್ವಾಟ್ರಸ್, ರಿಯಾಝ್, ತಸ್ರೀಫ್, ಇದಿನಬ್ಬ, ಉನೈಸ್ ಹಾಗೂ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ಭವಾನಿ, ಗ್ರಾಮ ಪಂಚಾಯತ್ ಸದಸ್ಯರಾದ ನಿತಿನ್ ತಾರಿತ್ತಡಿ, ಸತೀಶ್ ಶೆಟ್ಟಿ, ನಾರಾಯಣ, ಗೀತಾ ದಾಸರಮೂಲೆ, ಶೌಕತ್ ಆಲಿ, ಮಾಜಿ ಸದಸ್ಯ ವಿಶ್ವನಾಥ, ಕಾರ್ಯದರ್ಶಿ ಪರಮೇಶ್ವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here