ಆಲಂಕಾರು: ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

0

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಇದರ ಆಲಂಕಾರು ವಲಯದ ಕುಂತೂರು, ಪೆರಾಬೆ, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ಕೊಲ, ಪದವು ಒಕ್ಕೂಟಗಳ ನೇತೃತ್ವದಲ್ಲಿ ಆಲಂಕಾರಿನಲ್ಲಿ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟಿಸಲಾಯಿತು.


ಆಲಂಕಾರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿಯವರು ಉದ್ಘಾಟಿಸಿದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪರವರು ಇ ಶ್ರಮ ಕಾರ್ಡ್ ಹಾಗೂ ಇತರ ಯೋಜನೆಯ ಪ್ರಯೋಜನೆವನ್ನು ತಿಳಿಸಿದರು. ಆಲಂಕಾರು ವಲಯ ಅಧ್ಯಕ್ಷ ಬಾಲಕೃಷ್ಣ ಗೌಡರವರು ಅಧ್ಯಕ್ಷತೆ ವಹಿಸಿದ್ದರು. ಆಲಂಕಾರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಇಂದುಶೇಖರ ಶೆಟ್ಟಿ, ಹಣಕಾಸು ಪ್ರಬಂಧಕಿ ಸುಜಾತ, ಸಿ.ಎಸ್.ಸಿ ನೋಡೆಲ್ ಅಧಿಕಾರಿ ಚಿತ್ರೇಶ್ ಉಪಸ್ಥಿತರಿದ್ದರು. ಪೆರಾಬೆ ಒಕ್ಕೂಟದ ಸೇವಾ ಪ್ರತಿನಿಧಿ ಸವಿತಾ ಪ್ರಾರ್ಥಿಸಿದರು. ಆಲಂಕಾರು ವಲಯ ಮೇಲ್ವಿಚಾರಕಿ ಕವಿತಾ ಸ್ವಾಗತಿಸಿದರು. ಕುಂತೂರು ಸೇವಾ ಪ್ರತಿನಿಧಿ ರೇಖಾ ವಂದಿಸಿದರು. ಸುವಿಧಾ ಸಹಾಯಕ ಚೆನ್ನಕೇಶವ ರೈ ಕಾರ್ಯಕ್ರಮ ನಿರೂಪಿಸಿದರು. ಆಲಂಕಾರು ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರುಗಳು, ನಿಕಟಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here