ಕಲ್ಲಾರೆ ಡೇನಿಯಲ್ ಎಂಟರ್‌ಪ್ರೈಸಸ್‌ನಲ್ಲಿ ಕ್ರಿಸ್ಮಸ್/ಹೊಸ ವರ್ಷದ ಮೆಗಾ ಕೂಪನ್ ಡ್ರಾ

0

ಪುತ್ತೂರು: ಕಲ್ಲಾರೆ ಕೃಷ್ಣ ಲಂಚ್ ಹೋಮ್ ಬಳಿಯ ಸುಸಜ್ಜಿತ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಫರ್ನಿಚರ್ ಮಳಿಗೆ ಡೇನಿಯಲ್ ಎಂಟರ್‌ಪ್ರೈಸಸ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಸಲುವಾಗಿ ಗ್ರಾಹಕರಿಗೆ ಮೆಗಾ ಆಫರ್‌ಗಳನ್ನು ಪರಿಚಯಿಸಿದ್ದು, ಸಂಸ್ಥೆಯು ಹಮ್ಮಿಕೊಂಡ ಪ್ರತಿ ರೂ.ಒಂದು ಸಾವಿರ ಖರೀದಿಗೆ ಒಂದು ಕೂಪನ್ ಉಚಿತ ಇದರ ಡ್ರಾ ಕಾರ್ಯಕ್ರಮವು ಫೆ.1 ರಂದು ನೆರವೇರಿತು.

ಉದ್ಯಮಿಗಳಾದ ಇಬ್ರಾಹಿಂ ಹಾಗೂ ಮಹಾಬಲರವರು ಡ್ರಾ ಕಾರ್ಯಕ್ರಮವನ್ನು ನೆರವೇರಿಸಿದ್ದು, ಚೀಟಿ ಎತ್ತುವಿಕೆಯಲ್ಲಿ ಪ್ರಥಮ 1391, ದ್ವಿತೀಯ 2000 ಹಾಗೂ ತೃತೀಯ 1733 ಆಯ್ಕೆಯಾಗಿದೆ. ಪ್ರಥಮ ಬಹುಮಾನವಾಗಿ ಸೋಫಾ ಸೆಟ್, ದ್ವಿತೀಯ ಬಹುಮಾನವಾಗಿ ವಾರ್ಡ್ ರೂಬ್ ಹಾಗೂ ತೃತೀಯ ಬಹುಮಾನವಾಗಿ ಗ್ಲಾಸ್ ಟೀಪಾಯಿಯನ್ನು ಸಂಸ್ಥೆಯು ನೀಡುತ್ತಿದ್ದು, ವಿಜೇತ ಗ್ರಾಹಕರು ಫೆ.28ರ ಒಳಗೆ ಬಹುಮಾನಗಳನ್ನು ಪಡೆದುಕೊಳ್ಳತಕ್ಕದ್ದು ಎಂದು ಸಂಸ್ಥೆಯ ಮಾಲಕರಾದ ಡೇವಿಡ್ ಪಿರೇರಾರವರು ಹೇಳಿದರು. ಸಂಸ್ಥೆಯ ಸಿಬ್ಬಂದಿ ವರ್ಗ ಸಹಕರಿಸಿದರು. ಹೆಚ್ಚಿನ ಮಾಹಿತಿಗಾಗಿ  9481757193 ನಂಬರಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here