ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್.ರೈಯವರಿಗೆ ಡಾಕ್ಟರೇಟ್ ಪದವಿ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿಎಸ್ ರೈಯವರು ಡಾ.ಸಜೀವನ್‌ರಾವ್‌ರವರ ಮಾರ್ಗದರ್ಶನದಲ್ಲಿ ಸಾದರಪಡಿಸಿರುವ “ಡಿವೆಡೆಂಟ್ ಪೋಲಿಸಿ ಆಂಡ್ ಇಂಪ್ಯಾಕ್ಟ್ ಆನ್ ಶ್ಯೇರ್ ಪ್ರೈಸ್ ಆಫ್ ನ್ಯಾಷನಲ್‌ಲೈಸ್‌ಡ್ ಕಾರ್ಮಸಿಯಲ್ ಬ್ಯಾಂಕ್ಸ್ ಲಿಸ್ಟ್‌ಡ್ ಇನ್ ಬಿಎಸ್‌ಇ” ಎಂಬ ಮಹಾ ಪ್ರಬಂಧಕ್ಕೆ ಅರುಣಾಚಲ ಪ್ರದೇಶದ ಹಿಮಾಲಯನ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟ್‌ರೇಟ್ ಪದವಿಯನ್ನು ನೀಡಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ ಹಾಗೂ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿಯವರು ತಿಳಿಸಿದ್ದಾರೆ.

ರಾಜಲಕ್ಷ್ಮಿ ಎಸ್.ರೈ

ಐಕಳ ಆನಂದ ಶೆಟ್ಟಿ ಮತ್ತು ಶಾಂಭವಿ ಶೆಟ್ಟಿರವರ ಪುತ್ರಿಯಾಗಿರುವ ಡಾ.ರಾಜಲಕ್ಷ್ಮಿ ಎಸ್.ರೈಯವರ ಪತಿ ಶಿವಶಂಕರ್ ರೈ ನೆಲ್ಲಿಕಟ್ಟೆರವರು ಮಂಗಳೂರಿನಲ್ಲಿ ಎನ್‌ಎಫ್‌ಸಿ ಕಂಪೆನಿಯಲ್ಲಿ ಮ್ಯಾನೇಜರ್‌ರಾಗಿದ್ದು, ಪುತ್ರಿ ಧೃತಿ ಎಸ್ ರೈಯವರು ಮೂಡಬಿದ್ರೆಯ ಆಳ್ವಾಸ್‌ನ ಬಿಎಎಂಸ್ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here