ಪ್ಯಾರಮೆಡಿಕಲ್ ಫಲಿತಾಂಶ: HPR – ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

0

ಪುತ್ತೂರು: ಪ್ಯಾರಮೆಡಿಕಲ್ ಬೋರ್ಡ್ ಕರ್ನಾಟಕ 2020-21ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ HPR ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ದ್ವಿತೀಯ ವರ್ಷದ DOTT ಮತ್ತು AT (ಡಿಪ್ಲೋಮ ಇನ್ ಆಪರೇಷನ್ ಮತ್ತು ಅನಸ್ತೇಶಿಯ ಟೆಕ್ನಾಲಜಿ) ಕೋರ್ಸ್‌ನ ಎಲ್ಲಾ 25 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಸಂಸ್ಥೆಗೆ ಶೇ.100 ಫಲಿತಾಂಶ ಬಂದಿದೆ. DMLT (ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ) ಕೋರ್ಸ್‌ನಲ್ಲಿ ಶೇ.94 ಫಲಿತಾಂಶ ಸಂಸ್ಥೆ ಪಡೆದುಕೊಂಡಿದೆ DMLT ವಿಭಾಗದಲ್ಲಿ ರಶ್ಮಿಕಾ ಆರ್.ಜೆ ಪ್ರಥಮ ಸ್ಥಾನ ಹಾಗೂ ಮೋನಿಕಾ ಕೆ.ಎಸ್. ದ್ವಿತೀಯ ಸ್ಥಾನ ಪಡೆದಿದ್ದಾರೆ. DOTT ಮತ್ತು AT ವಿಭಾಗದಲ್ಲಿ ಆಯಿಷತ್ ಸಲೀನ ಪ್ರಥಮ ಸ್ಥಾನ ಹಾಗೂ ಶ್ರಾವ್ಯ ಎಮ್. ದ್ವಿತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here