ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ವಿಶೇಷ ಸಭೆ

0

ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಸುಳ್ಯ, ಅಲೆಟ್ಟಿ ಮತ್ತು ಅರಂತೋಡು ಇದರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಸಭೆಯು ಸೆ. 25ರಂದು ಶಿವಕೃಪಾ ಕಲಾ ಮಂದಿರ ಸುಳ್ಯ ದಲ್ಲಿ ಶ್ರೀ ತಂಬುರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಕುಂಞಕಣ್ಣನ್ ಬೇಡಗಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಅನಿಲಕುಮಾರ್,ಕುಂಞಕೃಷ್ಣನ್, ಗೋಪಾಲನ್, ಅಚ್ಚುತನ್, ಉಪಾಧ್ಯಕ್ಷರಾದ ಪವಿತ್ರನ್ ಗುಂಡ್ಯ, ಸುಳ್ಯ ಸಮಿತಿಯ ಅಧ್ಯಕ್ಷ ರಾದ ರಾಧಾ ಕೃಷ್ಣ ಪರಿವಾರಕಾನ, ಅಲೆಟ್ಟಿ ಸಮಿತಿಯ ಅಧ್ಯಕ್ಷರಾದ ನಾರಾಯಣ ಬಾರ್ಪಣೆ, ಅ ರಂತೋಡು ಸಮಿತಿಯ ಅಧ್ಯಕ್ಷರಾದ ಶ್ರೀಜಿತ್ ಅ ರಂತೋಡು, ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾದ ರಧೀಶನ್ ಅರಂಬೂರು ರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಈ ಸಭೆ ಯಲ್ಲಿ ಶ್ರೀ ಕ್ಷೇತ್ರ ಕುತ್ತಿಕೋಲಿನಲ್ಲಿ ನಡೆಯಲಿರುವ ನವೀಕರಣ ಮತ್ತು ಶ್ರೀ ವಯನಾಟ್ ಕುಲವನ್ ದೈವ ಸ್ಥಾನ ಕುಂಬಳ ಚೇರಿ ಮತ್ತು ಕೊಲ್ಚಾರಿನಲ್ಲಿ ಮುಂದಿನ ಸಾಲಿನಲ್ಲಿ ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಕ್ಕೆ ಸಂಬಂಧ ಪಟ್ಟಂತೆ ಚರ್ಚಿಸಲಾಯಿತು ಆನಂದ ಅಡ್ಪ0ಗಾಯ, ಅಂಬಿಕಾ ಶ್ರೀ ಶೈಲಮ್ ಅರಂಬೂರು,ರಾಧಾ ಕೃಷ್ಣ ನಾರ್ಕೋಡು, ಜಗದೀಶ್ ಕೂಳಿ ಯಡ್ಕ ರವರು ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತ ಪಡಿಸಿದರು ಸಭೆಯಲ್ಲಿಜಂಟಿ ಸಮಿತಿ ಯ ಸದಸ್ಯರು, ಮಹಿಳಾ ಸಮಿತಿ ಯ ಸದಸ್ಯರುಗಳು ಭಾಗವಹಿಸಿದ್ದರು ರಾಧಾ ಕೃಷ್ಣ ಪರಿವಾರ ಕಾನ ರವರು ಸ್ವಾಗತಿಸಿ ಗೋಪಾಲ ಬಲ್ಯಾಡಿ ಯವರು ವಂದಿಸಿದರು

LEAVE A REPLY

Please enter your comment!
Please enter your name here