ಸವಿತಾ ಮಹರ್ಷಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳೋಣ ಸವಿತಾ ಮಹರ್ಷಿ ಜಯಂತಿಯಲ್ಲಿ ಎಸಿ ಗಿರೀಶ್‌ನಂದನ್ ಎಮ್

0

ಪುತ್ತೂರು: ಯಾವುದೇ ವೃತ್ತಿಯಲ್ಲಿ ಶ್ರದ್ಧೆಯಿದ್ದಲ್ಲಿ ಪರಿಪೂರ್ಣರಾಗಿ ಬದುಕು ನಡೆಸಲು ಸಾಧ್ಯ. ಇಂತಹ ಸಂದರ್ಭದಲ್ಲಿ ಸವಿತಾ ಮಹರ್ಷಿಯವರ ತತ್ವಾದರ್ಶಗಳನ್ನು ಎಲ್ಲರು ಅಳವಡಿಸಿಕೊಂಡು ಮುಂದೆ ಸಾಗುವುದು ಉತ್ತಮ ಎಂದು ಸಹಾಯಕ ಕಮೀಷನರ್ ಗಿರೀಶ್‌ನಂದನ್ ಎಮ್ ಅವರು ಹೇಳಿದರು.

 

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಸವಿತಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ಫೆ. 8ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಸೀಲ್ದಾರ್ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಮಾತನಾಡಿದರು. ಸಕಲೇಶಪುರದಲ್ಲಿ ನಾನು ಎಸಿಯಾಗಿದ್ದ ಸಂದರ್ಭ ಸವಿತಾ ಸಮಾಜದ ವೃತ್ತಿಪರರು ಕೋವಿಡ್ ಸಂದರ್ಭದಲ್ಲಿ ಪೂರ್ಣ ಸಹಕಾರ ನೀಡಿದ್ದಾರೆ. ಪುತ್ತೂರಿನಲ್ಲಿ ಸವಿತಾ ಸಮಾಜದ ಸಮುದಾಯದಲ್ಲಿ ಸಮಸ್ಯೆಗಳಿದ್ದಲ್ಲಿ ಮುಂದೆ ಬಂದು ಮಾಹಿತಿ ನೀಡಿ. ತಮ್ಮ ಬೇಡಿಕೆಗಳನ್ನು ಪರಿಶೀಲಿಸೋಣಾ ಎಂದರು.

ಸಮಾಜಕ್ಕೆ ಸ್ವಂತ ನಿವೇಶನದ ಬೇಡಿಕೆ:
ಸವಿತಾ ಸಮಾಜದ ಅಧ್ಯಕ್ಷ ಜಿ.ವಿ.ವೆಂಕಟೇಶ್ ಭಂಡಾರಿಯವರು ಮಾತನಾಡಿ ಸರಕಾರ ಸವಿತಾ ಸಮಾಜವನ್ನು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬ ಸಂತೋಷದ ವಿಚಾರ. ಅದೇ ರೀತಿ ಸರಕಾರದ ಸವಲತ್ತುಗಳು ಕೂಡಾ ಸವಿತಾ ಸಮಾಜಕ್ಕೆ ಸಿಗಬೇಕು. ನಮ್ಮ ಸಮಾಜಕ್ಕೆ ಸ್ವಂತ ನಿವೇಶನ ಕೊಡಿಸುವಂತೆ ಅವರು ವಿನಂತಿಸಿದರು. ಉಪತಹಸೀಲ್ದಾರ್ ಸುಲೋಚನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸವಿತಾ ಮಹರ್ಷಿಯವರ ಸಾಧನೆ ಮತ್ತು ಸಮಾಜಪರ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ರಮೇಶ್ ಬಾಬು, ಗ್ರೇಡ್ ೨ ತಹಸೀಲ್ದಾರ್ ಲೋಕೇಶ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಮಹೇಶ್, ದಯಾನಂದ್, ಉಪತಹಸೀಲ್ದಾರ್ ರಾಮಣ್ಣ ಅತಿಥಿಗಳನ್ನು ಗೌರವಿಸಿದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಸವಿತಾ ಸಮಾಜದವರು ನಿವೇಶನಕ್ಕಾಗಿ ಸಹಾಯಕ ಕಮೀಷನರ್ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಸವಿತಾ ಸಮಾಜದ ಕಾರ್ಯದರ್ಶಿ ರಾಜೇಶ್, ಮಾಜಿ ಅಧ್ಯಕ್ಷ ಚೆಲುವರಾಜ್, ಹಿರಿಯರಾದ ಬಾಲಕೃಷ್ಣ, ಜಿಲ್ಲಾ ಪ್ರತಿನಿಧಿ ರಮೇಶ್, ಅರುಣಾಸ್ ಸೇರಿದಂತೆ ಸಮಾಜದ ವೃತ್ತಿಪರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here