ಕಡಬ: ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿ ಪತ್ತೆ | ಸಂಘಟನೆಯ ಕಾರ್ಯಕರ್ತರಿಂದ ದಾಳಿ- ವ್ಯಕ್ತಿ ಪೋಲಿಸ್ ವಶಕ್ಕೆ

0

ಕಡಬ: ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ವಶಕ್ಕೆ ನೀಡಿದ ಘಟನೆ ಫೆ. 11 ರಂದು ಮುಂಜಾನೆ ನಡೆದಿದೆ.

ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆಯ ಮನೆಯಲ್ಲಿ ಅನ್ಯಕೊಮಿನ ವ್ಯಕ್ತಿಯೋರ್ವರು ತಂಗಿರುವ ವಿಚಾರ ಬೆಳಕಿಗೆ ಬಂದಿದ್ದು, ಮಹಿಳೆಯನ್ನು ಮತಾಂತರ ಮಾಡುವ ಉದ್ದೇಶದಿಂದ ಹಲವಾರು ಸಮಯಗಳಿಂದ ಪ್ರಯತ್ನಗಳು ಈ ವ್ಯಕ್ತಿಯಿಂದ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಪೂರಕ ಸಾಕ್ಷಾಧಾರಗಳು ದೊರೆತಿರುವುದರಿಂದ ಮಹಿಳೆಯ ಮನೆಗೆ ಕಡಬ ಸಂಘಟನೆಯ ಕಾರ್ಯಕರ್ತರು ಭೇಟಿ ಮಾಡಿ ಮನವೊಲಿಸಿದ್ದರು, ಆದರೆ ಈ ವ್ಯಕ್ತಿಯೂ ಹಲವಾರು ಸಮಯದಿಂದ ಮಹಿಳೆಯ ಮನೆಗೆ ಬರುತ್ತಿರುವುದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.11 ರಂದು ಮುಂಜಾನೆ ಆ ವ್ಯಕ್ತಿಯನ್ನು ಪೋಲಿಸ್ ವಶಕ್ಕೆ ನೀಡಿದ್ದು ಸದ್ಯ ಆ ವ್ಯಕ್ತಿ ಪೋಲಿಸ್ ವಶವಾಗಿದ್ದಾನೆ.

ಆಸೀಡ್ ದಾಳಿಗೊಳಗಾದ ಸಂತ್ರಸ್ತೆ ಮಹಿಳೆ!
ವರ್ಷದ ಹಿಂದೆ ಜಿಲ್ಲೆಯನ್ನೆ ತಲ್ಲಣಗೊಳಿಸಿದ್ದ ಆಸೀಡ್ ದಾಳಿಗೊಳಗಾದ ಸಂತ್ರಸ್ತೆಯ ಮಹಿಳೆಯನ್ನು ಮತಾಂತರಗೊಳಿಸಲು ಯತ್ನಿಸುತ್ತಿರುವ ಆರೋಪವಾಗಿದೆ. ಒಂದು ವರ್ಷದ ಹಿಂದೆ ತನ್ನ ಬಾವನಿಂದ ಜಾಗದ ತಕರಾರಿಗೆ ವಿಚಾರವೊಂದಕ್ಕೆ ಸಂಬಂಧಿಸಿ ಆಸೀಡ್ ದಾಳಿಗೊಳಗಾಗಿದ್ದರು, ಬಳಿಕದ ದಿನಗಳಲ್ಲಿ ಮಹಿಳೆಯ ಬಾವ ಪೋಲಿಸ್ ವಶವಾಗಿದ್ದು ಬಳಿಕ ಜಾಮೀನು ನೀಡಲಾಗಿತ್ತು, ಈ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಗೆ ಜಾಮೀನು ರದ್ದುಗೊಳಿಸುವಂತೆ ಅರ್ಜಿ ನೀಡಿದ್ದರು, ಇದನ್ನು ಪುರಸ್ಕರಿಸಿದ ನ್ಯಾಯಾಲಯ ಕೆಳ ನ್ಯಾಯಾಲಯ ನೀಡಿದ ಜಾಮೀನನ್ನು ರದ್ದುಗೊಳಿಸಿರುವುದನ್ನು, ಹಾಗೂ ಆಸೀಡ್ ದಾಳಿಯ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಕಡಬ ಠಾಣೆಯ ಎ.ಎಸ್.ಐ. ಅಮಾನತುಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here