ಸೀಮಾಧಿಪತಿ ಮಹಾಲಿಂಗೆಶ್ವರ ದೇವರ 22 ದಿನಗಳ ಅಷ್ಟಮಂಗಲ ಪ್ರಶ್ನೆ ಸಂಪನ್ನ – ಒಂದೇ ಪ್ರಯತ್ನದಲ್ಲಿ ನಿವೃತಿ ರಾಶಿ – ಪೂರ್ಣ ಪ್ರಮಾಣದ ದೈವಾನುಕೂಲ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಯ ಕೊನೆಯ ನಿವೃತಿ ರಾಶಿಯಲ್ಲಿ ಮಕರ ರಾಶಿ ಬಂದಿರುವುದು ದೈವಾನುಕೂಲ ತಂದಿರುವ ರಾಶಿಯಾಗಿದೆ. ಜೊತೆಗೆ ಒಂದೇ ಪ್ರಯತ್ನದಲ್ಲಿ ನಿವೃತಿ ರಾಶಿ ಬಂದಿರುವುದು ದೈವಾನುಕೂಲವನ್ನು ತೋರಿಸಿಕೊಟ್ಟಿದೆ ಎಂಬುದು ನಿವೃತಿ ರಾಶಿಯಲ್ಲಿ ಕಂಡು ಬಂದಿದೆ.

ನಾಡಿನ ಖ್ಯಾತ ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ಮತ್ತು ಡಾ| ವಳಕ್ಕುಂಜ ಮುರಳೀಕೃಷ್ಣ ಭಟ್ ನೇತೃತ್ವದಲ್ಲಿ 22 ದಿನಗಳು ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯ ಕೊನೆಯಲ್ಲಿ ಫೆ. 11ರಂದು ನಿವೃತಿ ರಾಶಿ ಮತ್ತು ’ನಿಧಿ ಸಂಚಯನ’ ಕಾರ್ಯಕ್ರಮ ನಡೆಯಿತು.

ನಿವೃತಿ ರಾಶಿ ಇಡುವ ಮುಂದೆ ದೈವಜ್ಞರು ಆರಂಭದಲ್ಲಿ ಸ್ವರ್ಣ ರಾಶಿ ಇಟ್ಟ ವಿಚಾರವನ್ನು ಸಭೆಗೆ ಮಂಡಿಸಿದರು. ಆರಂಭದಲ್ಲಿ ಧನು ರಾಶಿಯಲ್ಲಿ ಆರಂಭ ಮಾಡಿ. ಹಲವಾರು ಆಯಾಮ, ವಿಶಿಷ್ಟವಾದ ಪ್ರಯತ್ನಗಳು, ಸವಾಲುಗಳನ್ನು ಎದುರಿಸಿಕೊಂಡು ಪ್ರತಿಯೊಂದಕ್ಕೂ ನಮ್ಮ ಪರಂಪರೆ ವಿದ್ವಜ್ಞನಗಳ ಸಮಗ್ರವಾದ ಸಹಾಯದಿಂದ ಚಿಂತನೆ ಮಾಡಿಕೊಂಡಿದ್ದೇವೆ. ಸಾನಿಧ್ಯ ವೃದ್ದಿಯನ್ನು ಮಾಡಿಕೊಂಡು ಸಾನಿಧ್ಯ ದೀಪವನ್ನು ನಿತ್ಯ ಕರ್ಮನುಷ್ಠಾನ, ಧರ್ಮನುಷ್ಠಾನ ಮತ್ತು ದೀಪದಿಂದ ಲೋಕ ಬೆಳಕೆಂಬ ಉತ್ತಮ ಸಂಕಲ್ಪದಿಂದ ಪ್ರಶ್ನೆ ಚಿಂತನೆ ಮಾಡಿದ್ದೇವೆ. ಕೈಲಾಸ ಸಮಾನವಾದ ಇಲ್ಲಿ ಏಳ್ನಾಡು ಸೀಮೆ ಸೇರಿದಂತೆ ಪ್ರತಿಯೊಂದು ಭಕ್ತರ, ವ್ಯಕ್ತಿಯ ಮನಸ್ಸಿನಲ್ಲಿ ಭಕ್ತಿ ಶ್ರದ್ಧೆಯನ್ನು ಮೂಡಿಸಿಕೊಂಡು ಸೀಮೆಯ, ರಾಜ್ಯದ, ದೇಶದ ಜಗತ್ತಿನ ಪ್ರತಿಯಂದು ಆಗುಹೋಗಿಗೂ ಉತ್ತರೋತ್ತರ ಅಭಿವೃದ್ಧಿಗೂ ಕಾರಣವಾಗಲಿ, ಸತ್ಯ ಬೆಳಗಳಿ ಎಂದು ಪ್ರಾರ್ಥನೆ ಮಾಡಿ ನಿವೃತಿ ರಾಶಿಯನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿ ದೈವಜ್ಞರ ಆದೇಶದಂತೆ ಭಕ್ತರೆಲ್ಲರು ಎದ್ದು ನಿಂತು ಪ್ರಾರ್ಥನೆ ಮಾಡಿದರು. ನಿವೃತಿ ರಾಶಿಯಲ್ಲಿ ಮಕರ ರಾಶಿ ಬಂದಿದಿದ್ದು, ಪೂರ್ಣ ಪ್ರಮಾಣದ ದೈವಾನುಕೂಲ ಲಭಿಸಿತು.

ಇನ್ನು ಯಾವ ವಿಮರ್ಶೆಯ ಅವಶ್ಯಕತೆ ಇಲ್ಲ:
ನಿವೃತಿ ರಾಶಿಯನ್ನು ತೆಗೆದ ದೈವಜ್ಞರು ಆರಂಭದಲ್ಲಿ ’ ಅತ್ಯಂತ ಸಮಾಧನ ಕೊಟ್ಟ ನಿವೃತಿ ರಾಶಿ’ ಎಂದು ಮಾತು ಆರಂಭಿಸಿದ ಅವರು ಪ್ರಶ್ನೆಯ ಆರಂಭದಲ್ಲಿ ಧನು ರಾಶಿಯಲ್ಲಿ ಆದಿತ್ಯ 12ರಲ್ಲಿ ಪ್ರಶ್ನೆ ಇತ್ತು. 3, 6, 8, 12 ಎನ್ನುವಂತಹ ಬಾವಗಳು ಅತ್ಯಂತ ಅನಿಷ್ಠವಾಗಿತ್ತು. ಆದರೆ ಮಹಾಲಿಂಗೇಶ್ವರನ ಅನುಗ್ರಹದಿಂದ ನಿವೃತಿಯಲ್ಲಿ ಮಕರ ರಾಶಿ ಲಗ್ನದಲ್ಲಿ ಆದಿತ್ಯ, ಬುದ, ಶನಿ 2ರಲ್ಲಿ ಗುರು 3ರಲ್ಲಿ, 5ರಲ್ಲಿ ಚಂದ್ರ ರಾಹು, 11ರಲ್ಲಿ ಕೇತು, 12ರಲ್ಲಿ ಅಂಗಾರಕ ರಾಶಿ ಬಂದಿದ್ದು, ಮಹಾ ಸಾನಿಧ್ಯಪತಿಯಾದ ಮಹಾಲಿಂಗೇಶ್ವರ ದೈವಾನುಕೂಲ ತಂದಂತಹ ರಾಶಿ, ಪೂರ್ಣ ಪ್ರಮಾಣದ ದೈವಾಂಶ ಇಲ್ಲಿ ಲಭಿಸಿದೆ. ಪಾರ್ವತಿ ಅಮ್ಮನವರಿಗೆ ಅತ್ಯಂತ ಸಂತುಷ್ಟವಾದ ರಾಶಿ ಇದು ಎಂದರಲ್ಲದೆ ಇಷ್ಟು ಮಹಾ ದೊಡ್ಡ ಕ್ಷೇತ್ರದಲ್ಲಿ ಹಲವು ವಿಷಯಗಳು, ಹಲವು ವ್ಯವಸ್ಥೆಗಳಿರುತ್ತದೆ. ಆದರೆ ಒಂದೇ ಪ್ರಯತ್ನದಲ್ಲಿ ನಿವೃತಿ ರಾಶಿ ಸುಲಭವಲ್ಲ. ಆದರೆ ಇಲ್ಲಿ ಅದು ನಡೆದು ಹೋಗಿದೆ. ಇನ್ನು ಯಾವ ವಿಮರ್ಶೆಯ ಅವಶ್ಯಕತೆ ಇಲ್ಲ. ಮಹಾಲಿಂಗೇಶ್ವರ ದೇವರು ಈ ಪ್ರಶ್ನೆಯನ್ನು ಕಂಡಿದ್ದಾರೆ. ಕೇಳಿದ್ದಾರೆ. ಅನುಷಾನ ಮಾಡಿದ್ರೆ ಆಯಿತು ಎಂದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ದೇವಳದ ತಂತ್ರಿ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ, ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ದೇವಳದ ಪ್ರಧಾನ ಅರ್ಚಕರೂ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭ್, ಪ್ರಧಾನ ಅರ್ಚಕ ವಸಂತ ಕೆದಿಲಾಯ, ಅರ್ಚಕರು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ನಟ್ಟೋಜ ಸುಬ್ರಹ್ಮಣ್ಯ ರಾವ್, ಹಿರಿಯರಾದ ಕಿಟ್ಟಣ್ಣ ಗೌಡ, ಯು ಲೋಕೇಶ್ ಹೆಗ್ಡೆ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ವಾಸ್ತು ಇಂಜಿನಿಯರ್‌ ಪಿ ಜಿ ಜಗನಿವಾಸ್‌ ರಾವ್ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here