ಧಾರ್ಮಿಕ ಆಚರಣೆಯಲ್ಲಿ ವೈಜ್ಞಾನಿಕ ವಿಚಾರ ಅಡಗಿದೆ – ಕೊಂಬೆಟ್ಟು ಅಟಲ್ ಉದ್ಯಾನವನ ಅಶ್ವತ್ಥಕಟ್ಟೆ ಪೂಜೆಯಲ್ಲಿ ಕುಂಟಾರು ರವೀಶ ತಂತ್ರಿ

0

ಪುತ್ತೂರು: ಧಾರ್ಮಿಕ ಆಚಾರಣೆಯಲ್ಲಿ ಏನೆಲ್ಲಾ ಇದೆಯೋ ಅದೆಲ್ಲದರಲ್ಲೂ ವೈಜ್ಞಾನಿಕ ವಿಚಾರ ಅಡಗಿದೆ. ಹಾಗಾಗಿ ಕೊರೋನಾ ಸಂದರ್ಭದಲ್ಲಿ ಏನೆಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಯಿತೋ ಅದೆಲ್ಲವೂ ಬಹಳ ಹಿಂದೆಯೇ ನಮ್ಮ ಅಧ್ಯಾತ್ಮಿಕತೆಯಲ್ಲಿ ಇತ್ತು ಎಂದು ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶತಂತ್ರಿಯವರು ನುಡಿದರು.

ಕೊಂಬೆಟ್ಟು ಅಟಲ್ ಉದ್ಯಾನವನದ ವಠಾರದಲ್ಲಿರುವ ಶತಮಾನ ದಾಟಿದ ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ಪೂಜಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಆದ್ಯಾತ್ಮಿಕಕ್ಕೆ ಶಕ್ತಿಕೊಡುವ ಕೇಂದ್ರಗಳು ದೇವಾಲಯಗಳು. ಆದರೂ ನಾವು ಪ್ರಕೃತಿಯ ಮಡಿಲು, ನದಿ ಇರಬಹುದು ಅಥವಾ ಬೆಟ್ಟ ಇರಬಹುದು. ಅವೆಲ್ಲವನ್ನು ನಾವು ದೇವರಾಗಿ ಕಾಣುತ್ತೇವೆ. ಅದೇ ರೀತಿ ಅಟಲ್ ಉದ್ಯಾನವನ ಮೋಜಿಗಾಗಿ ಉಪಯೋಗಿಸಬಹುದಿತ್ತು. ಆದರೆ ಇಲ್ಲೂ ಕೂಡಾ ಆಧ್ಯಾತ್ಮಿಕ ಚಿಂತನೆ ಅಡಗಿದೆ ಎಂದ ಅವರು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಆಧ್ಯಾತ್ಮಿಕತೆಗೆ ಇದೆ. ನಾವು ಸಕಾರಾತ್ಮಕ ಚಿಂತನೆ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು. ಅಶ್ವತ್ಥ ವೃಕ್ಷದ ಬುಡದಲ್ಲಿ ಸಮಾನ ಮನಸ್ಕರು ಪ್ರತಿ ನಿತ್ಯ ಸೇರುವಾಗ ಇಲ್ಲಿಯೂ ವೈಜ್ಞಾನಿಕವಾಗಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಟ್ಟಿನಲ್ಲಿ ಎನು ಇರದೇ ಇರುವಲ್ಲಿ ಏನನ್ನೂ ಬೇಕಾದರೂ ಸಾಧನೆ ಮಾಡಲು ಇರುವ ಶಕ್ತಿ ಹಿಂದುವಿಗೆ ಮಾತ್ರ ಇರುವುದು ಎಂದರಲ್ಲದೆ ಅದ್ಯಾತ್ಮಿಕ ಕ್ಷೇತ್ರದಲ್ಲಿ ಬಂದವರು ಸಾಧನೆಯ ಪಥದಲ್ಲಿ ಏರಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿ ಯವರು ನಮ್ಮ ಮುಂದಿದ್ದಾರೆ ಎಂದರು.

ಸನ್ಮಾನ:
ಕೊಂಬೆಟ್ಟು ಅಟಲ್ ಉದ್ಯಾನವನ ಆರಂಭಕ್ಕೂ ಮುಂದೆ ಶ್ರೀ ಮಹಾಲಿಂಗೇಶ್ವರ ದೇವರು ಜಾತ್ರಾ ಸಂದರ್ಭದಲ್ಲಿ ಪೂಜೆ ಸ್ವೀಕರಿಸುವ ಅಶ್ವತ್ಥ ಕಟ್ಟೆಯಲ್ಲಿ ವೃಕ್ಷದ ಗೆಲ್ಲಿಗೆ ಮುಹೂರ್ತ ನೀಡಿ ಬಳಿಕ ಅಟಲ್ ಉದ್ಯಾನವನದಲ್ಲಿ ಕಾರ್ಯಕ್ರಮ ಮಾಡಿದ ಅವರು ಇದೀಗ ಅಶ್ವತ್ಥ ಪೂಜೆಯಲ್ಲೂ ಭಾಗವಹಿಸಿದ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರನ್ನು ಕೊಂಬೆಟ್ಟು ವಾರ್ಡ್‌ನ ಪರವಾಗಿ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಸ್ಥಳೀಯರಾದ ಗಣೇಶ್ ಬಾಳಿಗ, ಕಹಳೆ ನ್ಯೂಸ್‌ನ ಶ್ಯಾಮ್ ಸುದರ್ಶನ್ ಹೊಸಮೂಲೆ, ಶ್ರೀಪತಿ ರಾವ್ ಅವರು ಫಲಪುಷ್ಪ ಸಮರ್ಪಣೆ ಮಾಡಿ ಸನ್ಮಾನ ಮಾಡಿದರು. ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಡಾ. ಸುಬ್ರಹ್ಮಣ್ಯ ಭಟ್ ವಂದಿಸಿದರು.

ಅಶ್ವತ್ಥ ಪೂಜೆ:
ವೇ ಮೂ ಪ್ರಶಾಂತ್ ಭಟ್ ಅವರ ನೇತೃತ್ವದಲ್ಲಿ ನಡೆದ ಅಶ್ವತ್ಥ ಪೂಜೆಯಲ್ಲಿ ನಿವೃತ್ತ ಪ್ರಾಂಶುಪಾಲ ಶ್ರೀಪತಿ ರಾವ್ ಮತ್ತು ಮೋಹಿನಿ ರಾವ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು. ಶ್ರೀಕೃಷ್ಣ ಜೆ ರಾವ್ ವೈದಿಕತ್ವಕ್ಕೆ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಪಾಂಡುರಂಗ ನಾಯಕ್, ಪ್ರಭಾವತಿ ಮತ್ತು ನವೀನ್ ಪಡಿವಾಳ್ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು. ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ‌

ಈ ಸಂದರ್ಭದಲ್ಲಿ ಸ್ಥಳೀಯರಾದ ಗಣೇಶ್ ಬಾಳಿಗ, ನಾರಾಯಣ ನಾಯ್ಕ್, ಎಮ್.ವಿ.ಕಾಮತ್, ಸ್ಮಿತಾ ಬಾಳಿಗ, ರಾಧಾ, ವೀಣಾ, ರಾಮಚಂದ್ರ ಘಾಟೆ, ನ್ಯಾಯವಾದಿ ಮಹೇಶ್ ಕಜೆ, ದೀಪಿಕಾ ಕಜೆ, ಮನೋಹರ್, ಕೂಟ ಮಹಾಜಗತ್ತಿನ ಅಧ್ಯಕ್ಷ ನಾಗೇಶ್ ರಾವ್, ಸ್ವಣೋದ್ಯಮಿ ಬಲರಾಮ ಆಚಾರ್ಯ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಇಂದುಶೇಖರ್, ನರಸಿಂಹ ಕಾಮತ್, ಶ್ರೀವಿದ್ಯಾ ಜೆ ರಾವ್, ಅನುರಾಧ, ನಿವೃತ್ತ ಮುಖ್ಯಗುರು ಶ್ರೀನಿವಾಸ್, ಸವಿತಾ ರಾವ್, ಡಾ. ಗೋವಿಂದ ಪ್ರಸಾದ್ ಕಜೆ, ಗಣೇಶ್ ಆಚಾರ್ಯ ಬನ್ನೂರು, ಪ್ರೇಮಲತಾ ರಾವ್, ಗೋವಿಂದ ಭಟ್, ಉದನೇಶ್ವರ ಭಟ್, ಕೇದಾರ, ನರಸಿಂಹ, ರಾಜೇಶ್, ಸತೀಶ್, ರಾಘವೇಂದ್ರ ಐತ್ತಾಳ್, ಡಾ. ಸುಧೀರ್, ಪದಂ ಸಿಂಗ್, ವಿಷ್ಣುಪ್ರಸಾದ್, ಬಾಮಿ ಪದ್ಮನಾಭ ಶೆಣೈ, ರಾಮಚಂದ್ರ ಪೂಜಾರಿ, ರಾಧಾಕೃಷ್ಣ ಕೆ, ಸಿಂಧು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here