ಮಾ. 6ರಿಂದ 12ತನಕ ಇರ್ದೆ ಪಳ್ಳಿತ್ತಡ್ಕ ಮಖಾಂ ಉರೂಸ್- ಉರೂಸ್ ಕಮಿಟಿ ರಚನೆ

0

ಪುತ್ತೂರು: ಇತಿಹಾಸ ಪ್ರಸಿದ್ದ, ಕರಾವಳಿಯ ಸೌಹಾರ್ಧತಾ ಕೇಂದ್ರ ಎಂದೇ ಪ್ರಸಿದ್ದಿ ಪಡೆದ ಇರ್ದೆ ಪಳ್ಳಿತ್ತಡ್ಕ ಮಖಾಂ ಉರೂಸ್ ಹಾಗೂ ಧಾರ್ಮಿಕ ಮತ ಪ್ರವಚನವು 2022 ಮಾರ್ಚ್ 6ರಿಂದ 12 ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಉರೂಸ್ ಕಮಿಟಿ ರಚನೆಯು ಜಮಾಅತ್ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ ಕುಂಞ ಹಾಜಿ ಯವರ ಅಧ್ಯಕ್ಷತೆಯಲ್ಲಿ ಕೊರಿಂಗಿಲ ಜುಮಾ ಮಸೀದಿಯಲ್ಲಿ ನಡೆಯಿತು.

ಮೂಸೆಕುಂಞ ಬೆಟ್ಟಂಪಾಡಿ

 

ಅನ್ವರ್ ಕೊರಿಂಗಿಲ

ಅಧ್ಯಕ್ಷರಾಗಿ ಮೂಸೆಕುಂಞ ಬೆಟ್ಟಂಪಾಡಿ, ಉಪಾಧ್ಯಕ್ಷರಾಗಿ ಅಶ್ರಫ್ ಕೊರಿಂಗಿಲ, ಹಮೀದ್ ಕೊಮ್ಮೆಮ್ಮಾರ್, ಶಾಫಿ ಕೇಕನಾಜೆ ಕಾರ್ಯದರ್ಶಿಯಾಗಿ ಅನ್ವರ್ ಕೊರಿಂಗಿಲ, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಕುಕ್ಕುಪುಣಿ, ಅಝೀಝ್ ತೊಟದಮೂಲೆ, ಶರೀಫ್ ಕೂರಿಬಲೆ, ಸಲೀಂ ಅಂಕತ್ತಲ, ಪತ್ರಿಕಾ ಪ್ರತಿನಿಧಿಯಾಗಿ ಜಹವಾಝ್ ಕೊರಿಂಗಿಲ , ಪ್ರಚಾರ ಸಮಿತಿ ಉಸ್ತುವಾರಿಯಾಗಿ ಹಮೀದ್ ಸಾಲ್ಮರ ಹಾಗೂ ೫೦ ಮಂದಿ ಸದಸ್ಯರನೊಳಗೊಂಡ ಕಮಿಟಿಯನ್ನು ರಚಿಸಲಾಗಿದೆ.
ಸಲಹಾ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಕುಂಞಿ ಹಾಜಿ ಕೊರಿಂಗಿಲ, ಇಸ್ಮಾಯಿಲ್ ಹಾಜಿ ಎಂಪೆಕ್ಕಲ್, ಆಲಿಕುಂಞ ಕೊರಿಂಗಿಲ, ಕಾಸಿಂ ಕೇಕನಾಜೆ, ಮುಹಮ್ಮದ್ ಹಾಜಿ ಶಾಲಬಳಿ, ಶಾಹುಲ್ ಹಮೀದ್ ಕೊರಿಂಗಿಲ,ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ಲಾ ನೆಕ್ಕರೆ, ಅಬ್ದುಲ್ಲ ಹಾಜಿ ಅನಡ್ಕ, ಇಬ್ರಾಹಿಂ ನಿಡ್ಪಳ್ಳಿ, ಶಾಹುಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ಲ ಮೌಲವಿ, ಅಬ್ದುಲ್ಲ ಕೂರಿಬಲೆ ಇವರನ್ನು ಆಯ್ಕೆ ಮಾಡಲಾಯಿತು.ಜಮಾಅತ್ ಖತೀಬರಾದ ಅಲ್ ಹಾಜ್ ಅಯ್ಯೂಬ್ ವಹಬಿ ಗಡಿಯಾರ ದುಆ ನೆರವೇರಿಸಿದರು.

LEAVE A REPLY

Please enter your comment!
Please enter your name here