ಆಲಂಕಾರು ಬಸ್ಸು ನಿಲ್ದಾಣದಲ್ಲಿ ಬೆಳ್ತಂಗಡಿಯ ಶೇಷಪ್ಪ ಗೌಡ ನಿಧನ

0

ಆಲಂಕಾರು: ಆಲಂಕಾರು ಗ್ರಾಮದ ಆಲಂಕಾರು ಪೇಟೆಯ ಬಸ್ಸು ನಿಲ್ದಾಣದಲ್ಲಿ ಬೆಳ್ತಂಗಡಿಯ ಶೇಷಪ್ಪಗೌಡ ಎಂಬವರು ನಿಧನರಾಗಿದ್ದಾರೆ. ಶೇಷಪ್ಪ ಗೌಡ ಎಂಬವರು ಫೆ 12 ರಂದು ಸಂಜೆ ಯಿಂದ ಫೆ 13.ಬೆಳಗ್ಗೆ 10-00 ಗಂಟೆಯ ಮಧ್ಯೆ ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಕುಕ್ಕುಂಜ ಮನೆಯ ಹೇಮಾವತಿ ಎಂಬವರು 36 ವರ್ಷ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದು ಶೇಷಪ್ಪ ಗೌಡ ಎಂಬವರಿಗೆ 3 ಜನ ಮಕ್ಕಳಿದ್ದು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು. ಮನೆಯಲ್ಲಿ ತಂದೆ,ತಾಯಿ ಹಾಗೂ ತಮ್ಮ ಲೋಕೇಶ ರವರು ವಾಸವಿದ್ದು.ತನ್ನ ತಂದೆ ಮೃತ ಶೇಸಪ್ಪ ಗೌಡ ರವರು ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದು. ಫೆ12 ರಂದು ಸಂಜೆ ಸಮಯ 05.00 ಗಂಟೆಗೆ ಮನೆಯಿಂದ ಹೋದವರು ಮನೆಗೆ ಬಾರದೇ ಇದ್ದು.

ಫೆ.13.ರಂದು ಕಡಬ ತಾಲೂಕು ಆಲಂಕಾರು ಗ್ರಾಮದ ಬಸ್ಸು ನಿಲ್ದಾಣ ದಲ್ಲಿ ನಿನ್ನೆ ದಿನ ರಾತ್ರಿ ಹೊತ್ತು ಮಲಗಿದವರು ಮಲಗಿದ್ದ ಸ್ಥಿತಿಯಲ್ಲಿ ಮೃತ ಪಟ್ಟಿರುವ ವಿಷಯವನ್ನು ಚಿಕ್ಕಪ್ಪನ ಮಗನಾದ ಜಯರಾಮ ಎಂಬವರು ತಿಳಿಸಿದ ಮೇರೆಗೆ ಹೋಗಿ ನೋಡುವಾಗ ತನ್ನ ತಂದೆಯವರು ಶೇಷಪ್ಪ ಗೌಡ ಮೃತ ಪಟ್ಟಿರುವುದು ಗೊತ್ತಾಗಿದ್ದು. ತನ್ನ ತಂದೆಯವರು ಕೆಲವು ವರ್ಷಗಳಿಂದ ವಿಪರೀತ ಮಧ್ಯಪಾನ ಸೇವಿಸುವ ಅಭ್ಯಾಸ ಹೊಂದಿದ್ದು ಸರಿಯಾಗಿ ಆಹಾರ ಸೇವಿಸದೇ ಇರುತ್ತಿದ್ದು ಫೆ;12. ರಂದು ಮನೆ ಬಿಟ್ಟು ಹೋದವರು ಫೆ13ರಂದು ಬೆಳಗ್ಗೆ 10 ಗಂಟೆಯ ಮಧ್ಯದೊಳಗಡೆ ಮೃತಪಟ್ಟಿದ್ದು ವಿಪರೀತ ಕುಡಿತದಿಂದ ಆಹಾರ ಸರಿಯಾಗಿ ಸೇವಿಸದೇ ಇದ್ದುದ್ದರಿಂದ ಮೃತ ಪಟ್ಟಿರುವುದ್ದಲ್ಲದೆ ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಮೃತರ ಮಗಳು ಹೇಮಾವತಿಯವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here