ಕೌಸ್ತುಭ ಜ್ಯುವೆಲ್ಲರ‍್ಸ್ ಶುಭಾರಂಭ

0

ಪುತ್ತೂರು : ನೆಲ್ಲಿಕಟ್ಟೆ ರೈಲ್ವೇಸ್ಟೇಷನ್ ರಸ್ತೆಯಲ್ಲಿರುವ ಮುನ್ನ ಕಾಂಪ್ಲೆಕ್ಸ್‌ನಲ್ಲಿ ೨೧ ವರ್ಷಗಳಿಂದ ವ್ಯವಹರಿಸುತ್ತಿರುವ ಕೌಸ್ತುಭ ಜ್ಯುವೆಲ್ಲರ‍್ಸ್‌ನ ಸಹಸಂಸ್ಥೆ ಶ್ರೀಕೌಸ್ತುಭ ಜ್ಯುವೆಲ್ಲರ‍್ಸ್ ಕೋರ್ಟುರಸ್ತೆಯ ಪೈಲ್ಯಾಂಡ್ ಬಿಲ್ಡಿಂಗ್‌ನಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ಫೆ.೧೯ರಂದು ಶುಭಾರಂಭಗೊಂಡಿತು. ಪುತ್ತೂರು ಶ್ರೀಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಮಂದಿರದ ಧರ್ಮದರ್ಶಿ ಯನ್. ಐತ್ತಪ್ಪ ಸಪಲ್ಯರವರು ದೀಪ ಪ್ರಜ್ವಲಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಪುರೋಹಿತರುಗಳಾದ ಅಭಿಷೇಕ್ ಮತ್ತು ಜಯರಾಮ ಭಟ್‌ರವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಶ್ಯಾಮ್ ಜ್ಯುವೆಲ್ಸ್‌ನ ಎಂ.ಡಿ ಕೃಷ್ಣನಾರಾಯಣ ಮುಳಿಯ, ಬಂಗಾರದ ಕಟ್ಟೆಯ ಸತೀಶ್, ಸುಳ್ಯ ಸಿಂಧೂರ ಜ್ಯವೆಲ್ಲರ‍್ಸ್‌ನ ವಸಂತ್, ಗೀತಾ ಜ್ಯುವೆಲ್ಸ್‌ನ ಪ್ರಸಾದ್ ಬೀಡಿಗೆ, ಲಕ್ಷ್ಮೀದೇವಿ ಬೆಟ್ಟದ ಕೃಷ್ಣಪ್ರಸಾದ್, ಪ್ರಸಾದ್, ಜನಾರ್ಧನ, ಜಯಶ್ರೀ ಜ್ಯುವೆಲ್ಲರ‍್ಸ್‌ನ ಸತೀಶ್, ಪ್ರದೀಪ್ ಆಚಾರ್ಯ ಕಾರ್ಕಳ, ರಾಜೇಶ್ ಬಂಟ್ವಾಳ, ಶಶಿ ಉಜಿರೆ, ಲಕ್ಷ್ಮಣ ಬೆಳ್ತಂಗಡಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಜಗದೀಶ್ ಆಚಾರ್ಯ ವಾಲ್ತಾಜೆ ಸ್ವಾಗತಿಸಿದರು. ಸಂಸ್ಥೆಯ ಮಾಲಕ ನಾಗೇಶ್ ಆಚಾರ್ಯ ವಾಲ್ತಾಜೆ ಮಾತನಾಡಿ ನಮ್ಮಲ್ಲಿ ೯೧೬ ಚಿನ್ನಾಭರಣಗಳ ಮಾರಾಟ ಮತ್ತು ಗ್ರಾಹಕರಿಗೆ ಬೇಕಾದ ವಿನ್ಯಾಸಗಳಲ್ಲಿ ಚಿನ್ನಾಭರಣಗಳನ್ನು ತಯಾರಿಸಿ ಕ್ಲಪ್ತ ಸಮಯಕ್ಕೆ ಒದಗಿಸಲಾಗುವುದು ಎಂದು ತಿಳಿಸಿ ಗ್ರಾಹಕರ ಸಹಕಾರ ಕೋರಿದರು. ಮಾಲಕರ ಪತ್ನಿ ಸ್ನೇಹ, ಪುತ್ರ ಸ್ಮರಣ್ ಬಿ.ಎನ್., ಬೇಬಿ ಸಾನಿಧ್ಯ ಬಿ.ಎನ್., ಸರಿತಾರವರು ಉಪಸ್ಥಿತರಿದ್ದರು.
—————
ಪ್ರಥಮ ಖರೀದಿ

ಬಾಲಕೃಷ್ಣ ಗೌಡ ಭೂಮಿಕ ಕೆದುವಡ್ಕರವರು ನೂತನ ಸಂಸ್ಥೆಯಲ್ಲಿ ಚಿನ್ನಾಭರಣಗಳ ಪ್ರಥಮ ಖರೀದಿ ಮಾಡಿದರು

LEAVE A REPLY

Please enter your comment!
Please enter your name here