ನಾಕೂರಗಯ ರಸ್ತೆ ಕಾಂಕ್ರೀಟಿಕರಣಗೊಳಿಸಲು ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ

0

ಕಡಬ: ಎಡಮಂಗಲ ಗ್ರಾಮದ ಬೊಳ್ಮಣ್ಣುನಿಂದ ನಾಕೂರುಗಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನಾಗರಿಕರು ಎಡಮಂಗಲ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

 

ಎಡಮಂಗಲ ಗ್ರಾಮದ ಬೊಳ್ಮಣ್ಣುವಿನಿಂದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ನಾಕೂರುಗಯಕ್ಕೆ ಸುಮಾರು 2 ಕಿ.ಮೀ. ದೂರ ಇದ್ದು, ಈಗ ಮಣ್ಣಿನ ಕಚ್ಚಾ ರಸ್ತೆ ಇದ್ದು ತೀರ ಹದಗೆಟ್ಟಿದೆ.ಈ ರಸ್ತೆಯಲ್ಲಿ ಪ್ರಸಿದ್ದ ನಾಕೂರುಗಯ ಕ್ಷೇತ್ರಕ್ಕೆ ಊರು-ಪರವೂರಿನಿಂದ ಜನರು ಬರುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯು ಕೆಸರುಮಯವಾಗುತ್ತಿದೆ. ಈ ಸಂದರ್ಭದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಈಗಾಗಲೇ ಈ ರಸ್ತೆ ದುರಸ್ತಿಗೆ ಸಚಿವ ಎಸ್. ಅಂಗಾರ ಹಾಗೂ ಎಡಮಂಗಲ ಗ್ರಾ.ಪಂ.ಗೆ ಮನವಿ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ, ಕೂಡಲೇ ರಸ್ತೆ ಅಭಿವೃದ್ದಿಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಜಯರಾಮ ಕಲ್ಲರ್ಪೆ,ಡಿಕೇಶ ಗಿರಿಯಮಜಲು, ಹರೀಶ ಪುಳಿಕುಕ್ಕು, ಮನೀಶ್ ಪುಳಿಕುಕ್ಕು,ಯತೀಶ್ ಪುಳಿಕುಕ್ಕು, ಮೋಹನ ಪಲಗೇಣಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here