ಸುಳ್ಯ: ಸಖಿ ಬ್ಯೂಟಿ ಝೋನ್ ಶುಭಾರಂಭ

0

 

 

ಸುಳ್ಯದ ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಸಖಿ ಬ್ಯೂಟಿ ಝೋನ್ ಅ.5 ರಂದು ಶುಭಾರಂಭಗೊಂಡಿತು. ಬಿ ಜೆ ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಪಾರ್ಲರ್ ನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.

ರಾಷ್ಟ್ರ ಸೇವಿಕಾ ಸಮಿತಿ ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ನಾಗರಾಜ್ ಬ್ಯೂಟಿ ಪಾರ್ಲರ್ ನ್ನು ದೀಪ ಬೆಳಗಿಸಿದರು.
ಅತಿಥಿಯಾಗಿ ಮಾಜಿ ತಾ.ಪಂ. ಉಪಾಧ್ಯಕ್ಷೆ ಪುಷ್ಪಾಮೇದಪ್ಪ ಉಪಸ್ಥಿತಿದ್ದರು. ವೇದಿಕೆಯಲ್ಲಿ ನಿಶಿತಾ ಅವರ ಅಜ್ಜ ಪರಮೇಶ್ವರ ಬೊಮ್ಮದೇರೆ ಪೈಕ, ಅಜ್ಜಿ ಶ್ರೀಮತಿ ದೇವಕಿ
ತಂದೆ ಅಶೋಕ್ ಬೊಮ್ಮದೇರೆ, ತಾಯಿ ಶ್ರೀಮತಿ ನಾಗವೇಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಟ್ಟಡ ಮಾಲಕ ಕೆ. ಆರ್ ಕೃಷ್ಣ ರಾವ್, ಬಿ ನಾಗಪ್ಪ ಗೌಡ ಬೊಮ್ಮದೇರೆ ಪೈಕ, ಸೋಮಶೇಖರ ಪೈಕ, ವಿಮಲ ಸೋಮಶೇಖರ್, ಮಹಾದೇವಿ ಕಿಶೋರ್‍ , ಪೂರ್ಣಚಂದ್ರ ಬೊಮ್ಮದೇರೆ ಪೈಕ, ಯಮಿತ ಪೂರ್ಣಚಂದ್ರ, ಹೂವಪ್ಪ ಬೂದಿಪಳ್ಳ, ಲಾವಣ್ಯ ಹೂವಪ್ಪ, ದೇವಕಿ ಕಜಮೂಲೆ, ಬಾಲಕೃಷ್ಣ ಕಜೆ ಮೂಲೆ, ಕುಮಾರಿ ರಕ್ಷಾ, ಸಾತ್ವಿಕ್,
ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಬೊಮ್ಮದೇರೆ ಪೈಕ ಕಾರ್ಯಕ್ರಮ ನಿರೂಪಿಸಿದರು.


ಸಂಸ್ಥೆಯಲ್ಲಿ ಫೇಷಿಯಲ್ , ಐಬ್ರೋಸ್, ಹೇರ್ ಕಟಿಂಗ್, ಪೆಡಿಕ್ಯೂರ್, ಮನಿಕ್ಯೂರ್, ಹೇರ್ ಸ್ಟ್ರೈಟ್ನಿಂಗ್, ಹೇರ್ ಸ್ಮೂತಿಂಗ್, ಆಯಿಲ್ ಮಸಾಜ್, ಮೇಕ್ ಓವರ್, ನೈಲ್ ಎಕ್ಸ್ ಟೆಕ್ಷನ್, ವಾಕ್ಸಿಂಗ್ ಮತ್ತಿತರ ವ್ಯವಸ್ಥೆಗಳು ಇರಲಿದ್ದು ಹೇರ್ ಸ್ಪಾ, ಬಾಡಿಗೆಯ ಡ್ರೆಸ್ಸ್ ಗಳು, ಬಾಡಿಗೆಯ ಜ್ಯುವೆಲರಿ ಇರಲಿವೆ ಎಂದು ಸಂಸ್ಥೆಯ ಮಾಲಕಿ ನಿಶಿತಾ ಬೊಮ್ಮದೇರೆ ಪೈಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here