ಸುಬ್ರಹ್ಮಣ್ಯದ ಕುಕ್ಕೇಶ್ರೀ ಸರ್ಕಲ್ ತಂಡದಿಂದ ಧನಸಹಾಯ

0

ಸುಬ್ರಹ್ಮಣ್ಯದ ಕುಕ್ಕೇಶ್ರೀ ಸರ್ಕಲ್ ತಂಡದ ವತಿಯಿಂದ ಚಿಕಿತ್ಸೆ ಪಡೆಯುತ್ತಿರುವ ಗಿರೀಶ್ ರೈ ಕಡಬ ಅವರಿಗೆ ಮೊದಲ ಯೋಜನೆಯಾಗಿ ರೂ.40,021  ಇಂದು ಹಸ್ತಾಂತರಿಸಲಾಯಿತು.

ಸುಹಾಸ್ ಎಸ್ ಎಲ್ ಅವರ ನೇತೃತ್ವದಲ್ಲಿ ಸುಮಾರು 10 ಜನ ಯುವಕರನ್ನು ಸೇರಿಸಿಕೊಂಡು ನವರಾತ್ರಿಯ ಒಂದು ದಿನ ಹುಲಿವೇಷ ಹಾಕಿ ಅದರಲ್ಲಿ ಬಂದ ರೂ.40,021 ಹಣವನ್ನು ಶ್ರೀನಿವಾಸ್ ಹಾಸ್ಪಿಟಲ್ ಸುರತ್ಕಲ್ ನಲ್ಲಿ ಚಿಕಿತ್ಸೆ ಗಿರೀಶ್ ರೈ ಕಡಬ ಅವರಿಗೆ ಹಸ್ತಾಂತರಿಸಲಾಯಿತು.

ಈ ತಂಡದಲ್ಲಿ ಗಗನ್ ರಾಜ್ ಸುಬ್ರಹ್ಮಣ್ಯ, ಉಜ್ವಲ್ ಗೌಡ, ವಿಷ್ಣು, ಹರಿಚಂದನ್ , ಚನ್ನ, ಹಿತೇಶ್, ಉದಯ, ಯಕ್ಷಿತ್, ಭರತೇಶ್, ಕರಿಯ ಹಾವೇರಿ, ವಿಘ್ನೇಶ್, ಅನಿರುದ್ದ್, ಜಯಂತ ಹುಲಿವೇಷ ಹಾಕಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here