ಅಗಳಿ: ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಕಲ್ಪೋಕ್ತ ಶನೈಶ್ಚರ ಪೂಜೆ- ಧಾರ್ಮಿಕ ಸಭೆ

0

  • ಪ್ರಕೃತಿಗೆ ಸಹಜವಾಗಿ ಜೀವನ ನಡೆಸಿದಾಗ ಲೋಕಕ್ಕೆ ಮಂಗಲ- ಉದಯ ರೈ ಮಾದೋಡಿ
  • ಧಾರ್ಮಿಕ ಚಿಂತನೆ ಜೀವನದಲ್ಲಿ ನಿತ್ಯ ನಿರಂತರ ಅಳವಡಿಸಿಕೊಳ್ಳಬೇಕು- ಅವಿನಾಶ್ ಕೊಡಂಕಿರಿ
  • ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ಸಂಸ್ಕಾರದ ಅರಿವು ಮೂಡಿಸಬೇಕು- ಮಹೇಶ್ ಸವಣೂರು
  • ವಿದ್ಯಾಸಂಸ್ಥೆ, ದೇಗುಲ ಊರಿನ ಎರಡು ಕಣ್ಣುಗಳಿದ್ದಾಗೆ- ಮೇದಪ್ಪ ನಾವೂರು

ಕಾಣಿಯೂರು: ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿನೆಲ್ಲೆಡೆ ಪ್ರಚಾರಿಸುವ ಕೆಲಸ ನಮ್ಮಿಂದಾಗಬೇಕು. ಸಂಘಟನೆಯ ಮೂಲಕ ಅಭಿವೃದ್ಧಿಯ ಕೆಲಸವಾಗಬೇಕು. ಸೇವೆ ಮಾಡುವ ಮನೋಧರ್ಮದಿಂದ ಮನುಷ್ಯನ ಬದುಕು ಸನ್ಮಾರ್ಗದತ್ತ ಸಾಗಲು ಸಾಧ್ಯ ಎಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಸವಣೂರು ವಲಯದ ಆಶ್ರಯದಲ್ಲಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಹಕಾರದೊಂದಿಗೆ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಮುದಾಯ ಭವನದಲ್ಲಿ ಫೆ.26ರಂದು ನಡೆದ ಸಾಮೂಹಿಕ ಕಲ್ಪೋಕ್ತ ಶನೈಶ್ಚರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು. ಊರಿನ ಪವಿತ್ರವಾದ ದೇಗುಲ ನಿರ್ಮಾಣ, ಜೀರ್ಣೋದ್ಧಾರ ಕಾರ್ಯದಲ್ಲಿ ಸಹಭಾಗಿಗಳಾಗುವುದು ಪ್ರತಿಯೊಬ್ಬ ಬದುಕಿನ ಸುಯೋಗ. ಆದ್ಯಾತ್ಮಿಕತೆ ನಡೆಯೊಂದಿಗೆ ತಾಂತ್ರಿಕತೆಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ಪ್ರಕೃತಿಗೆ ಸಹಜವಾಗಿ ಜೀವನ ನಡೆಸಿದಾಗ ಲೋಕಕ್ಕೆ ಮಂಗಲ ಉಂಟಾಗುತ್ತದೆ ಎಂದರು.

 

ಸವಣೂರು ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ. ಸವಣೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,. ಪ್ರಕೃತಿಗೆ ವಿರುದ್ಧವಾಗಿ ನಾವು ಮಾಡುವ ಎಲ್ಲಾ ಕ್ರಿಯೆಗಳು ನಮ್ಮ ಅವನತಿಗೆ ಕಾರಣವಾಗುತ್ತದೆ. ಹುಟ್ಟು ಸಾವುಗಳ ಮಧ್ಯೆ ನಾವು ಮಾಡುವ ಒಳ್ಳೆಯ ಕೆಲಸಗಳಿಂದ ನಾವು ಗಳಿಸುವ ಕೀರ್ತಿಯು ಶಾಶ್ವತವಾಗಿರುತ್ತದೆ. ಸಂಸ್ಕೃತಿ, ಸಂಸ್ಕಾರಗಳು ನಮ್ಮ ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ನಮ್ಮ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕೆಲಸ ನಾವು ಅಗತ್ಯವಾಗಿ ಮಾಡಬೇಕಾಗಿದೆ ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ನರಿಮೊಗರು ಶ್ರೀ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕೇರಿ, ಮಾನವೀಯ ಮೌಲ್ಯಗಳ ಜೊತೆಗೆ ಧರ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಧಾರ್ಮಿಕ ಚಿಂತನೆಯನ್ನು ನಾವು ನಮ್ಮ ಜೀವನದಲ್ಲಿ ನಿತ್ಯ ನಿರಂತರವಾಗಿ ಅಳವಡಿಸಿಕೊಳ್ಳಬೇಕು. ನಿತ್ಯ ನಿರಂತರವಾಗಿ ಧರ್ಮದ ಜೊತೆಗೆ ನಮ್ಮ ಜೀವನವನ್ನು ಶಾಸ್ವತವಾಗಿ ಜೋಡಿಸಿಕೊಂಡಾಗ ಜೀವನದಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ. ಊರಿನ ಪವಿತ್ರವಾದ ದೇಗುಲ ನಿರ್ಮಾಣ, ಜೀರ್ಣೋದ್ಧಾರ ಕಾರ್ಯದಲ್ಲಿ ಸಹಭಾಗಿಗಳಾಗುವುದು ಪ್ರತಿಯೊಬ್ಬ ಬದುಕಿನ ಸುಯೋಗ.

ಒಂದು ದೇವಸ್ಥಾನ ಜೀರ್ಣೋದ್ಧಾರಗೊಂಡು ಅಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ನಮ್ಮ ಸಂಸ್ಕೃತಿ ಉಳಿಯುವುದರ ಜೊತೆಗೆ ಆ ಊರು ಸಮೃದ್ಧಿಗೊಳ್ಳಲು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಮಾತನಾಡಿ, ವಿದ್ಯಾಸಂಸ್ಥೆ ಮತ್ತು ದೇಗುಲಗಳು ಊರಿನ ಎರಡು ಕಣ್ಣುಗಳಿದ್ದಾಗೆ. ಅವುಗಳು ಚೆನ್ನಾಗಿದ್ದಾರೆ ಮಾತ್ರ ಆ ಊರು ಚೆನ್ನಾಗಿರಲು ಸಾಧ್ಯ. ಮಗುವಿಗೆ ಸರಿಯಾದ ಶಿಕ್ಷಣ, ಸಂಸ್ಕಾರ ಸಿಕ್ಕಾಗ ಮಾತ್ರ ಆ ಮಗು ಶಿಸ್ತು ಬದ್ಧ ಜೀವನ ನಡೆಸಲು ಸಾಧ್ಯ. ಭಗವಂತನನ್ನು ಪ್ರೀತಿಯಿಂದ ಸಂಪಾದನೆ ಮಾಡಿದರೆ ಇಡೀ ಸಮಾಜದ ಗೌರವ ಸಿಗುತ್ತದೆ. ಧರ್ಮದ ಮೂಲಕ ಜಾಗೃತಿ ಹೊಂದಿ ಜೀವನ ನಡೆಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದರು. ಸವಣೂರು ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ ಕಳುವಾಜೆ, ಅಗಳಿ ಶ್ರಿ ಸದಾಶಿವ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಅಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಗೌಡ ಪೂವ, ಚಂಪಾ ಅಬೀರ, ಲಿಂಗಪ್ಪ ಗೌಡ, ತಾರಾ, ವಸಂತ್, ಲೋಕನಾಥ ವಜ್ರಗಿರಿ, ಶಿವರಾಮ ಮರಕ್ಕಡ ಅತಿಥಿಗಳನ್ನು ಗೌರವಿಸಿದರು. ನಾಣಿಲ ಎಸ್‌ಪಿ ಲೀಲಾವತಿ ಪ್ರಾರ್ಥಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬೆಳಂದೂರು ‘ಬಿ’ ಒಕ್ಕೂಟದ ಕಾರ್ಯದರ್ಶಿ ಶೇಷಪ್ಪ ಕೆರೆಮನೆ ಸ್ವಾಗತಿಸಿ, ಸವಣೂರು ವಲಯ ಮೇಲ್ವೀಚಾರಕ ರವಿ ವಂದಿಸಿದರು. ಶಿಕ್ಷಕ ರವಿಶಂಕರ್ ಎನ್.ಟಿ ನಾವೂರು ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಸವಣೂರು ವಲಯದ ಆಶ್ರಯದಲ್ಲಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಹಕಾರದೊಂದಿಗೆ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಮುದಾಯ ಭವನದಲ್ಲಿ ಬೆಳಿಗ್ಗೆ ಶ್ರೀ ಕಲ್ಪೋಕ್ತ ಶನೈಶ್ಚರ ಪೂಜೆ ಪ್ರಾರಂಭಗೊಂಡು, ಬಳಿಕ ಮಹಾಪೂಜೆ, ಧಾರ್ಮಿಕ ಸಭೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here