ಆಲೆಟ್ಟಿ (ನಾರ್ಕೋಡು)ಯಲ್ಲಿ ಬೃಹತ್ ಆರೋಗ್ಯ ಮೇಳ- ಉಚಿತ ಆರೋಗ್ಯ ತಪಾಸಣಾ ಶಿಬಿರ

0

 

 

ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಆಲೆಟ್ಟಿ ಗ್ರಾಮ ಪಂಚಾಯತ್, ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘ, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ, ಯೆನೇಪೋಯ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ ಮಂಗಳೂರು, ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ಆರೋಗ್ಯ ಮೇಳ -ಉಚಿತ ಆರೋಗ್ಯ ತಪಾಸಣಾ ಶಿಬಿರವು
ಆಲೆಟ್ಟಿ ಸ.ಹಿ.ಪ್ರಾ.ಶಾಲೆ ನಾರ್ಕೋಡಿನಲ್ಲಿ ಅ.10 ರಂದು ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮೀ ಯವರು ದೀಪ ಬೆಳಗಿಸಿ ನೆರವೇರಿಸಿದರು. ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರು ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಡಿ.ಹೆಚ್.ಒ.ಡಾ.ಕಿಶೋರ್ ಮಂಗಳೂರು, ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ಸುಳ್ಯ, ಇ.ಒ.ಭವಾನಿಶಂಕರ, ಯೆನೇಪೋಯ ಆಸ್ಪತ್ರೆಯ ಪ್ರಾಂಶುಪಾಲ ಡಾ.ಪುನೀತ್ ಕುಮಾರ್ ಅರಂತೋಡು, ಜಿಲ್ಲಾ ಸಮನ್ವಯಧಿಕಾರಿ ಡಾ.ಜಗದೀಶ್, ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಯೇನೆಪೋಯ ಆಸ್ಪತ್ರೆ ಮೇಲ್ವಿಚಾರಕ ಅಬ್ದುಲ್ ರಜಾಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ರೋಟರಿ ಕ್ಲಬ್ ಅಧ್ಯಕ್ಷ ಮುರಳೀಧರ ರೈ, ಇನ್ನರ್ ವೀಲ್ ಅಧ್ಯಕ್ಷೆ ನಯನಾಹರಿಪ್ರಸಾದ್, ಪಂ.ಸದಸ್ಯ ಚಂದ್ರಕಾಂತ ನಾರ್ಕೋಡು, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಹುಕ್ರಪ್ಪ ಪೂಜಾರಿ ಕುದ್ಕುಳಿ, ‌ಮುಖ್ಯ ಶಿಕ್ಷಕಿ ಸುನಂದ, ಸಿ.ಡಿ.ಪಿ.ಒ ಕಚೇರಿ ಮೇಲ್ವಿಚಾರಕಿ ದೀಪಿಕಾ, ಜಿಲ್ಲಾ ಸಮನ್ವಯಾಧಿಕಾರಿ ತೇಜಸ್ವಿನಿ, ಪಿ.ಡಿ.ಒ.ಕೀರ್ತಿ ಪ್ರಸಾದ್ ಉಪಸ್ಥಿತರಿದ್ದರು.
ಮೌರ್ಯ ನಾರ್ಕೋಡು ಪ್ರಾರ್ಥಿಸಿದರು. ಪಿ.ಡಿ.ಒ ಕೀರ್ತಿ ಪ್ರಸಾದ್ ಸ್ವಾಗತಿಸಿದರು. ಡಾ.ನಂದಕುಮಾರ್ ಪ್ರಾಸ್ತಾವಿಕ ಮಾತನಾಡಿದರು.ಚಂದ್ರಕಾಂತ ನಾರ್ಕೋಡು ವಂದಿಸಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಮೀಳಾ ಮತ್ತು ಪಂ.ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಮೇಳದಲ್ಲಿ ಎಲ್ಲಾ ವಿಭಾಗದ ತಜ್ಞ ವೈದ್ಯರು ಉಪಸ್ಥಿತರಿದ್ದು‌ ತಪಾಸಣೆ ನಡೆಸಿದರು. ಯೆನೆಪೋಯ ಆಸ್ಪತ್ರೆಯ ಮಹಿಳಾ ಆರೋಗ್ಯ ಸಂಚಾರಿ ಘಟಕದ ಬಸ್ ನಲ್ಲಿ ಮಹಿಳೆಯರ ಆರೋಗ್ಯ ತಪಾಸಣೆಯನ್ನು ಪ್ರತ್ಯೇಕವಾಗಿ ‌ಮಾಡಲಾಯಿತು. ಸುಮಾರು 400 ಕ್ಕಿಂತ ಹೆಚ್ಚು ನಾಗರಿಕರು ಆಗಮಿಸಿ ಆರೋಗ್ಯ ತಪಾಸಣೆ ನಡೆಸಿದರು. ತಪಾಸಣೆ ನಡೆಸಿ ಸ್ಥಳದಲ್ಲಿ ಅವಶ್ಯಕತೆಗನುಗುಣವಾಗಿ ಔಷಧಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅ.ಭಾ ಕಾರ್ಡ್ ನೋಂದಾವಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪಂಚಾಯತ್ ಸದಸ್ಯರು,ಸಿಬ್ಬಂದಿ ವರ್ಗದವರು, ಸಂಘ ಸಂಸ್ಥೆಗಳ ಸದಸ್ಯರು, ಶಾಲೆಯ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು, ಎಸ್.ಡಿ.ಎಂ.ಸಿ.ಸದಸ್ಯರು, ಆರೋಗ್ಯ ಇಲಾಖೆಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು.

LEAVE A REPLY

Please enter your comment!
Please enter your name here