ನಿರಂಜನ ಕಡ್ಲಾರು ಸಾಹಿತ್ಯದ ’ಅಪ್ಪೆ ಕಲ್ಲುರ್ಟಿ’ ತುಳು ಭಕ್ತಿಗೀತೆ ಬಿಡುಗಡೆ

0

ತುಳುನಾಡಿನ ಮಹಾಶಕ್ತಿಯಾಗಿರುವ ಕಲ್ಲುರ್ಟಿ ದೈವದ “ಅಪ್ಪೆ ಕಲ್ಲುರ್ಟಿ” ಎಂಬ ತುಳು ಭಕ್ತಿಗೀತೆ ಶ್ರೀ ಕ್ಷೇತ್ರ ಪನೋಲಿಬೈಲಿನಲ್ಲಿ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಶ್ರೀ ಕ್ಷೇತ್ರ ಪನೋಲಿಬೈಲಿನ ಮುಖ್ಯ ಅರ್ಚಕರಾದ ವಾಸುದೇವ ಮೂಲ್ಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಾರಾಯಣ ಮೂಲ್ಯ ಮತ್ತು ಶ್ರೀ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ದಯಾನಂದ್ ಕುಲಾಲ್ ಭಂಡಾರ ಮನೆ ಪನೋಲಿಬೈಲು ಮತ್ತು ಕೇಶವ ನಾಯ್ಕ ಸಹಕರಿಸಿದರು.

ನಿರಂಜನ ಕಡ್ಲಾರು ಅವರ ಸಾಹಿತ್ಯಕ್ಕೆ ಅಂಕಿತಾ ಆಚಾರ್ಯ ಕಡ್ಲಾರು ಅವರ ಕಂಠಸಿರಿಯಲ್ಲಿ ಮೂಡಿ ಬಂದ ಈ ಭಕ್ತಿಗೀತೆಗೆ ಮಿಥುನ್ ರಾಜ್ ವಿದ್ಯಾಪುರ ಇವರ ಸಂಗೀತ ಮತ್ತು ಇಂದುಧರ ಹಳೆಯಂಗಡಿಯವರ ಸಂಕಲನವಿದೆ. ಕಲ್ಲುರ್ಟಿ ದೈವದ ಈ ಭಕ್ತಿಗೀತೆಯು N A Times ಯೂಟ್ಯೂಬ್ ಚಾನಲ್ ಅಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here