ಶಾಪಿಂಗ್ ಉತ್ಸವ, ಕುಂಬ್ರ ಅತಿಥಿಯಿಂದ ರೆಫ್ರಿಜರೇಟರ್ ಖರೀದಿಸಿದ ಕುತ್ಯಾಡಿಯ ಮೋಹಿನಿಯವರಿಗೆ ಚಿನ್ನದ ನಾಣ್ಯ ಬಹುಮಾನ

0

ಪುತ್ತೂರು: ಅದೃಷ್ಟ ನಿಮ್ಮದು, ಕೊಡುಗೆ ನಮ್ಮದು ಎಂಬ ಧ್ಯೇಯದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಹಮ್ಮಿಕೊಂಡಿದ್ದ ವಿಜಯೋತ್ಸವ, ಶಾಪಿಂಗ್ ಉತ್ಸವದಲ್ಲಿ ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿರುವ `ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್’ ಶೋರೂಮ್‌ನಿಂದ ರೆಫ್ರಿಜರೇಟರ್ ಖರೀದಿಸಿದ ಅರಿಯಡ್ಕ ಗ್ರಾಮದ ಮೋಹಿನಿ ಕುತ್ಯಾಡಿಯವರಿಗೆ ಚಿನ್ನದ ನಾಣ್ಯ ಬಹುಮಾನವಾಗಿ ಲಭಿಸಿದೆ. ಅತಿಥಿ ಇಲೆಕ್ಟ್ರಾನಿಕ್ಸ್ ಶೋರೂಮ್‌ನ ಶಾಪಿಂಗ್ ಉತ್ಸವದಲ್ಲಿ ಬಹಳಷ್ಟು ಗ್ರಾಹಕರು ಭಾಗವಹಿಸಿದ್ದರು. ಶಾಪಿಂಗ್ ಉತ್ಸವದಲ್ಲಿ ಬಂಪರ್ ಬಹುಮಾನವಾಗಿ ೭ ಕಾರುಗಳು, ೧೦ ದ್ವಿಚಕ್ರ ವಾಹನಗಳು ಸೇರಿದಂತೆ ಚಿನ್ನದ ನಾಣ್ಯಗಳು, ರೆಫ್ರಿಜರೇಟರ್, ಬೈಸಿಕಲ್, ಗ್ಯಾಸ್ ಸ್ಟವ್, ಮಿಕ್ಸರ್, ಕುಕ್ಕರ್,ಗ್ರೈಂಡರ್,ಎಲ್‌ಇಡಿ ಟಿವಿ ಸೇರಿದಂತೆ ಹತ್ತುಹಲವು ಬಹುಮಾನಗಳು ಒಳಗೊಂಡಿದ್ದವು. ಇದರಲ್ಲಿ ಅರಿಯಡ್ಕ ಗ್ರಾಮದ ಓರ್ವ ಗ್ರಾಹಕರಿಗೆ ಚಿನ್ನದ ನಾಣ್ಯ ಬಹುಮಾನವಾಗಿ ಲಭಿಸಿದೆ. ಮೋಹಿನಿ ಕುತ್ಯಾಡಿಯವರಿಗೆ ಅತಿಥಿಯ ಮಾಲಕ ಸಂಪತ್ ಕುಮಾರ್‌ರವರು ಚಿನ್ನದ ನಾಣ್ಯವನ್ನು ಕೊಟ್ಟು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೋಹಿನಿಯವರ ಪತಿ ಕುಂಬ್ರ ಉದಯ ಆರ್ಟ್ಸ್ ಮಾಲಕ ಚಂದ್ರ ಜಿ.ಕುತ್ಯಾಡಿ, ಅತಿಥಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹತ್ತು ಹಲವು ಬಹುಮಾನ
ಶಾಪಿಂಗ್ ಉತ್ಸವದಲ್ಲಿ ಪಾಲ್ಗೊಂಡ ನೂರಾರು ಗ್ರಾಹಕರಲ್ಲಿ ಸುಮಾರು ೨೦ ಕ್ಕೂ ಅಧಿಕ ಮಂದಿ ಅದೃಷ್ಟವಂತ ಗ್ರಾಹಕರಿಗೆ ವಿವಿಧ ಬಹುಮಾನಗಳನ್ನು ಬಂದಿವೆ. ಇದರಲ್ಲಿ ವಿಶೇಷವಾಗಿ ವೆಟ್ ಗ್ರೈಂಡರ್, ಗ್ಯಾಸ್ ಸ್ಟವ್ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ ಎಂದು ಮಾಲಕರು ತಿಳಿಸಿದ್ದಾರೆ.
ಬಿಗ್ ಎಕ್ಸ್‌ಚೇಂಜ್ ಆಫರ್ ಇದೀಗ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಶೋರೂಮ್‌ನಲ್ಲಿ ಹಳೆಯ ಗ್ರೈಂಡರ್ ಅನ್ನು ಹೊಸ ಗ್ರೈಂಡರ್‌ನೊಂದಿಗೆ ಬದಲಾಯಿಸಿಕೊಳ್ಳುವ ಬಿಗ್ ಎಕ್ಸ್‌ಚೇಂಜ್ ಆಫರ್ ನಡೆಯುತ್ತಿದೆ. ನಿಮ್ಮಲ್ಲಿರುವ ಯಾವುದೇ ಕಂಪೆನಿಯ ಯಾವುದೇ ಸ್ಥಿತಿಯಲ್ಲಿರುವ ಹಳೆಯ ಗ್ರೈಂಡರ್ ಅನ್ನು ಹೊಸ ಗ್ರೈಂಡರ್‌ನೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ. ರೂ.೮೯೯೦ ಬೆಲೆಯ ಹೊಸ ಗ್ರೈಂಡರ್ ಅನ್ನು ಈ ಆಫರ್‌ನಲ್ಲಿ ಕೇವಲ ರೂ.೫೨೫೦ ಕ್ಕೆ ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದಲ್ಲದೆ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್‌ನಲ್ಲಿ ಇನ್ನೂ ಅನೇಕ ಆಫರ್‌ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9481934111 ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here