ಮತಾಂತರ ಮಸೂದೆ, ಕ್ರೈಸರ ಮೇಲಿನ ದೌರ್ಜನ್ಯ ವಿರೋಧಿಸಿ ಕ್ರೈಸ್ತ ಬಾಂಧವರಿಂದ ಮೋಂಬತ್ತಿ ಉರಿಸಿ, ಮೌನ ಪ್ರತಿಭಟನೆಯ ಮಾನವ ಸರಪಳಿ

0

ಪುತ್ತೂರು: ರಾಜ್ಯ ಸರಕಾರ ಪ್ರಸ್ತಾಪಿಸಿರುವ ಮತಾಂತರ ನಿಷೇಧ ಮಸೂದೆ ಮತ್ತು ಕ್ರೈಸ್ತ ಬಾಂಧವರ ಮೇಲಿನ ದೌರ್ಜನ್ಯವನ್ನು ಖಂಡಿಸಿ, ದಕ್ಷಿಣ ಕನ್ನಡ ಕಥೋಲಿಕ್ ಸಭಾ ಜಿಲ್ಲೆಯ ಎಲ್ಲ ಸ್ಥಳೀಯ ಶಾಖೆಗಳೊಂದಿಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಕ್ಕೊಳಪಟ್ಟ ಎಲ್ಲಾ ಚರ್ಚ್‌ಗಳ ಧರ್ಮಗುರುಗಳು ಹಾಗೂ ಕ್ರೈಸ್ತ ಬಾಂಧವರಿಂದ ಮಾ.2 ರಂದು ಸಂಜೆ 6 ರಿಂದ 7ರ ವರೆಗೆ ದ.ಕ ಜಿಲ್ಲೆಯಾದ್ಯಂತ ಮೋಂಬತ್ತಿ ಉರಿಸಿ, ವಿವಿಧ ಘೋಷಣಾ ಫಲಕಗಳ ಪ್ರದರ್ಶನದೊಂದಿಗೆ ಮಾನವ ಸರಪಳಿ ಮೂಲಕ ಮೌನ ಪ್ರತಿಭಟನೆ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚ್ ಗಳಲ್ಲಿ ನಡೆಯಿತು.

ಮಾನವ ಸರಪಳಿ ಮೂಲಕ ಪ್ರತಿಭಟನೆ: ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಬನ್ನೂರಿನ ಸಂತ ಅಂತೋನಿ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್, ಉಪ್ಪಿನಂಗಡಿಯ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರುಗಳು ಹಾಗೂ ಕ್ರೈಸ್ತ ಬಾಂಧವರು ಮತಾಂತರ ಮಸೂದೆ ಹಾಗೂ ಕ್ರೈಸ್ತ ಬಾಂಧವರ ಮೇಲಿನ ದೌರ್ಜನ್ಯವನ್ನು ಖಂಡಿಸಿರುವ ವಿವಿಧ ಘೋಷಣಾ -ಲಕಗಳೊಂದಿಗೆ ಮೋಂಬತ್ತಿ ಉರಿಸಿಕೊಂಡು ಮೌನಯುತ ಮಾನವ ಸರಪಳಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ನಾಲ್ಕು ಚರ್ಚ್‌ಗಳ ಕ್ರೈಸ್ತ ಬಾಂಧವರು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಜಮಾಯಿಸಿ ಬಳಿಕ ಮೆರವಣಿಗೆಯು ಚರ್ಚ್ ವಠಾರದಿಂದ ಸರತಿ ಸಾಲಿನಲ್ಲಿ ಹೊರಟು ಪೊಲೀಸ್ ಸ್ಟೇಷನ್-ಶ್ರೀಧರ್ ಭಟ್ ಬ್ರದರ್ಸ್ ಮಳಿಗೆ ಮೂಲಕ ಸಾಗುತ್ತಾ ಕಿಲ್ಲೆ ಮೈದಾನದ ಸುತ್ತಲೂ ಇರುವ ರಸ್ತೆಯಲ್ಲಿ ನಿಂತು ಕ್ರೈಸ್ತ ಬಾಂಧವರು ಮೋಂಬತ್ತಿ ಉರಿಸುವ ಮೂಲಕ ಮೌನವಾಗಿ ಪ್ರತಿಭಟನೆ ನಡೆಸಿದರು.

ಘೋಷಣಾ ಫಲಕಗಳು: ಜನಪ್ರತಿನಿಧಿಗಳೇ ಪುರೋಹಿತರಾಗಬೇಡಿ, ಸಮಾಜದ ಉದ್ಧಾರಕರಾಗಿ..,ಕೋಮುವಾದಿ ಸಂಘಟನೆಗಳನ್ನು ಸಹಬಾಳ್ವೆಗೆ ಘರ್ ವಾಪ್ಸಿ ಮಾಡಿ..,ಜನಪ್ರತಿನಿಧಿಗಳೇ ಜನರನ್ನು ಆಮಿಷವೊಡ್ಡಿ ಮತಾಂತರಿಸಬೇಡಿ..,ಜಾತಿ-ಮತ ಎಲ್ಲರೂ ಮರೆತು ಒಗ್ಗಟ್ಟು ಇರಲಿ..,ಮತಾಂಧತೆ ಅಳಿಸಿ, ಮನುಷ್ಯತ್ವ ಉಳಿಸಿ..,ನಾವು ಸಂವಿಧಾನವನ್ನು ಎತ್ತಿ ಹಿಡಿಯೋಣ..,ಅನೇಕತೆಯಲ್ಲಿ ಏಕತೆ…,ಬಹುಸಂಖ್ಯಾತ, ಅಲ್ಪಸಂಖ್ಯಾತವೆನ್ನುವ ಬೇಧಭಾವವನ್ನು ಭಿತ್ತದಿರಿ..,ನಾವು ನಂಬಿದ ದೇವರನ್ನು ಪೂಜಿಸುವುದು ನಮ್ಮ ಹಕ್ಕು…,ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ, ಅದನ್ನು ಗೌರವಿಸಿ ಮುಂತಾದ ಅನೇಕ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿನ ಘೋಷಣಾ -ಲಕಗಳನ್ನು ಹಿಡಿದುಕೊಂಡು ಮೌನವಾಗಿಯೇ ಕ್ರೈಸ್ತ ಬಾಂಧವರಿಂದ ಪ್ರತಿಭಟನೆ ವ್ಯಕ್ತವಾಯಿತು.


ಸಾವಿರಕ್ಕೂ ಮಿಕ್ಕಿ ಕ್ರೈಸ್ತ ಬಾಂಧವರು: ಮೌನ ಪ್ರತಿಭಟನೆ ಮಾಯಿದೆ ದೇವುಸ್ ಚರ್ಚ್‌ನ ಮುಂದಾಳತ್ವದಲ್ಲಿ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ -ರ್ನಾಂಡೀಸ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ -ಂಕ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ, ಧರ್ಮಗುರುಗಳಾದ ವಂ|ವಿಜಯ್ ಲೋಬೋ, ವಂ|ಸ್ಟ್ಯಾನಿ ಪಿಂಟೋ, ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಸನ್ನಿ ಮ್ಯಾಥ್ಯೂ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ -ಬಿಯನ್ ಗೋವಿಯಸ್, ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ -ರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಬ್ರ್ಯಾಗ್ಸ್, ಕಾರ್ಯದರ್ಶಿ ವಿನ್ಸೆಂಟ್ ಮೊರಾಸ್, ಕಥೋಲಿಕ್ ಸಭಾದ ಪುತ್ತೂರು ವಲಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ಪದಾಧೀಕಾರಿಗಳು, ಕಥೋಲಿಕ್ ಸಭಾ ಪುತ್ತೂರು ಘಟಕದ ಅಧ್ಯಕ್ಷ ಪಾವ್ಲ್ ಮೊಂತೇರೋ ಹಾಗೂ ಪದಾಧಿಕಾರಿಗಳು, ಕಥೋಲಿಕ್ ಸಭಾ ಕೇಂದ್ರೀಯ ಘಟಕದ ಪದಾಧಿಕಾರಿ ಇನಾಸ್ ರೊಡ್ರಿಗಸ್, ಧರ್ಮಭಗಿನಿಯರು, ಆಯಾ ಚರ್ಚ್‌ನ ಪಾಲನಾ ಸಮಿತಿ ಸದಸ್ಯರು, ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು, ಆಯಾ ಚರ್ಚ್‌ಗಳ ಸಂಘ-ಸಂಸ್ಥೆಯ ಪ್ರತಿನಿಽಗಳ ಸಹಿತ ಸಾವಿರಕ್ಕೂ ಮಿಕ್ಕಿ ಕ್ರೈಸ್ತ ಬಾಂಧವರು ಯಶಸ್ವಿ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಪುತ್ತೂರು ನಗರ ಪೊಲೀಸ್ ಠಾಣೆ, ಮಹಿಳಾ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿಕೊಟ್ಟರು.

ಭಾಷಣಕ್ಕೆ ಆಸ್ಪದವಿಲ್ಲ..

ಈ ಮೊದಲು ಪ್ರತಿಭಟನೆಯು ಯಾವುದೇ ಭಾಷಣಕ್ಕೆ ಆಸ್ಪದ ನೀಡದೆ ಆಯಾ ಚರ್ಚ್‌ಗಳ ಎದುರಿನಿಂದ ಸಾಗುವ ರಸ್ತೆಗಳು ಹಾಗೂ ಹೆದ್ದಾರಿಗಳಲ್ಲಿ ಚರ್ಚ್ ವ್ಯಾಪ್ತಿಯ ವಾಳೆಗಳಲ್ಲಿನ ಕ್ರೈಸ್ತ ಬಾಂಧವರು ಮುಖ್ಯರಸ್ತೆಯ ರಸ್ತೆ ಬದಿಯಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಆರು ಫೀಟ್‌ಗಳ ಅಂತರದಲ್ಲಿ ಮೌನವಾಗಿಯೇ ಮಾನವ ಸರಪಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಾತ್ರವಲ್ಲದೆ ಆಯಾ ಚರ್ಚ್ ವಾಳೆಗಳಲ್ಲಿನ ಕ್ರೈಸ್ತ ಬಾಂಧವರಿಗೆ ಮೊದಲೇ ನಿಗದಿಪಡಿಸಿದ್ದ ನಿರ್ದಿಷ್ಟ ಜಾಗದಲ್ಲಿ ನಿಲ್ಲುವಂತೆ ಸೂಚಿಸಲಾಗಿತ್ತು, ಆದರೆ ಪೊಲೀಸರ ವಿಶೇಷ ಮನವಿಯ ಮೇರೆಗೆ ಮೌನ ಪ್ರತಿಭಟನೆಯು ಕೋರ್ಟ್‌ರಸ್ತೆಗೆ ಸ್ಥಳಾಂತರ ಮಾಡಲಾಯಿತು.

ಮತಾಂತರ ಮಸೂದೆ ಕೈಬಿಡುವಂತೆ ಒತ್ತಾಯ

ಮತಾಂತರ ಮಸೂದೆ ಕೈಬಿಡುವಂತೆ ಕೂಳೂರಿನಲ್ಲಿನ ೪೦ ವರ್ಷ ಹಳೆಯ ಕ್ರೈಸ್ತ ಪ್ರಾರ್ಥನಾ ಮಂದಿರದ ಧ್ವಂಸ, ಬೆಂಗಳೂರಿನ ಯೇಸುಕ್ರಿಸ್ತರ ಪ್ರತಿಮೆ ಧ್ವಂಸ ಮುಂತಾದ ವಿಷಯಗಳ ಜೊತೆಗೆ ಮತಾಂತರ ಮಸೂದೆಯು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಕ್ರೈಸ್ತ ಸಮುದಾಯ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಾವು ಕೈಗೊಳ್ಳುವ ಮೌನಯುತ ಪ್ರತಿಭಟನೆಯು ಮಸೂದೆಯನ್ನು ಕೈಬಿಡುವಂತೆ ಒತ್ತಾಯಿಸುತ್ತದೆ ಎಂದು ಕಥೋಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೋ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ಟಲಿನೋರವರು ಕರೆ ನೀಡಿದ್ದರು.


ಮನವಿ ಅರ್ಪಣೆ..
ಪ್ರತಿಭಟನಾ ಕಾರ್ಯಕ್ರಮದ ಮುನ್ನ ಸಂಜೆ ಮತಾಂತರ ಮಸೂದೆ ನಿಷೇಧ ಹಾಗೂ ಕ್ರೈಸ್ತ ಬಾಂಧವರಿಗೆ ಆಗುವ ದೌರ್ಜನ್ಯದ ಕುರಿತಾದ ಮನವಿ ಪತ್ರವನ್ನು ಮಾಯಿದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಕಥೋಲಿಕ್ ಸಭಾ ಪುತ್ತೂರು ವಲಯದ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಾರ್ಯದರ್ಶಿ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್, ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ರೋಶನ್ ಡಾಯಸ್, ಸಂಟ್ಯಾರ್ ವಾಳೆಯ ಗುರಿಲಾರ ಪಾವ್ಲ್ ಡಿ’ಸೋಜರವರು ತಹಶೀಲ್ದಾರ್ ರಮೇಶ್ ಬಾಬುರವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here