ಜಿಲ್ಲಾ ಮಟ್ಟದ ಕ್ಲೀನ್ ಇಂಡಿಯಾ ಕಾರ್ಯಕ್ರಮ – ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗಕ್ಕೆ ಜಿಲ್ಲಾ ಪ್ರಶಸ್ತಿ

0

ಪುತ್ತೂರು: ಪ್ರಧಾನ ಮಂತ್ರಿಯ ಕನಸಿನ ಭಾರತ, ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಅಯೋಜಿಸಲಾದ ಜಿಲ್ಲಾ ಮಟ್ಟದ `ಕ್ಲೀನ್ ಇಂಡಿಯಾ’ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವ ಶಕ್ತಿ ಬಳಗವು ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಮಂಗಳೂರಿನ ಟೌನ್‌ಹಾಲ್‌ನಲ್ಲಿ ಮಾ.೦೨ ರಂದು ನಡೆದ ಕಾರ್ಯಕ್ರಮದಲ್ಲಿ ಯುವಶಕ್ತಿ ಬಳಗಕ್ಕೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.ಮಯೂರು ಗೋಳ್ತಿಲ, ಅಧ್ಯಕ್ಷ ಉದಯ ಸ್ವಾಮಿನಗರ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರು, ಸದಸ್ಯರುಗಳಾದ ಸತೀಶ್ ಮಜ್ಜಾರ್, ರಮೇಶ್ ಸ್ವಾಮಿನಗರ ಉಪಸ್ಥಿತರಿದ್ದರು.

 


ಈ ಸಂದರ್ಭದಲ್ಲಿ ಜಿಲ್ಲಾ ಯುವಜನ ಅಧಿಕಾರಿ ರಘವೀರ್ ಸೂಟರ್‌ಪೇಟೆ, ಜಯಕಿಶನ್ ಭಟ್ ,ಸಂಪನ್ಮೂಲ ವ್ಯಕ್ತಿ ಪ್ರೋ| ನಂದಕಿಶೋರ್ ಜಿಎಫ್‌ಜಿಸಿ ಬಂಟ್ವಾಳ, ,ವಿಶ್ವಸಂಸ್ಥೆ ವಿಶ್ವ ಅಭಿವೃದ್ಧಿ ಯೋಜನೆಯ ಕರ್ನಾಟಕ ರಾಜ್ಯ ಮುಖ್ಯಸ್ಥ ಜಯಚಂದ್ರನ್ ಹಾಗೂ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಉಪಸ್ಥಿತರಿದ್ದರು.

ಕ್ಲೀನ್ ಇಂಡಿಯಾ ಕಾರ್ಯದಲ್ಲಿ ಯುವಶಕ್ತಿ ಬಳಗ
ಶ್ರಮ,ಸೇವೆ,ಸಹಾಯ ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಾಪನೆಯಾದ ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಜ್ಜಾರಡ್ಕ ಈ ಸಂಘಟನೆ ಆರ್ಥಿಕವಾಗಿ,ಧಾರ್ಮಿಕವಾಗಿ,ಶೈಕ್ಷಣಿಕವಾಗಿ ಅಲ್ಲದೆ ಸಮಾಜಮುಖಿಯಾಗಿಯು ಸಕ್ರಿಯವಾದ ಕಾರ್ಯ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ವಿಶೇಷ ರೀತಿಯಲ್ಲಿ ಯುವ ಸಮುದಾಯಕ್ಕೆ ಮಾದರಿಯಾಗುತ್ತಿದೆ. ಕ್ಲೀನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಅರಿಯಡ್ಕ ಗ್ರಾಮಕ್ಕೆ ಒಳಪಡುವ ತ್ಯಾಗರಾಜನಗರ, ತಿಂಗಳಾಡಿ,ಕಟ್ಟಾತ್ತಾರು,ಕುಂಬ್ರ,ಕೌಡಿಚ್ಚಾರು ಹೀಗೆ ಗ್ರಾಮದ ಸುತ್ತಮುತ್ತಲಿನ ಬಸ್ ತಂಗುದಾಣವನ್ನು ಸ್ವಚ್ಛ ಮಾಡುವುದರೊಂದಿಗೆ,ಬಸ್ ತಂಗುದಾಣದ ಸುತ್ತಲಿನ ಪ್ಲಾಸ್ಟಿಕ್ ಕಸಗಳನ್ನು ಸಂಗ್ರಹಿಸುವ ಕಾರ್ಯ, ತಿಂಗಳಾಡಿ ಶಾಲೆಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛತೆ ಮಾಡುವುದರೊಂದಿಗೆ, ಆವರಣದ ಸುತ್ತಮುತ್ತಲಿನ ಗಿಡಗಂಟಿಗಳನ್ನು ,ಪೊದೆಗಳನ್ನು ಕಡಿದು ಸ್ವಚಗೊಳಿಸುವ ಕಾರ್ಯಕ್ರಮ, ಪ್ಲಾಸ್ಟಿಕ್ ಮುಕ್ತ ಹಸಿರು ಗ್ರಾಮ ಯೋಜನೆಯನ್ನು ಕೈಗೊಂಡು ಕೆದಂಬಾಡಿ ಗ್ರಾಮಕ್ಕೆ ಒಳಪಡುವ ತ್ಯಾಗರಾಜನಗರ ಬಸ್ ತಂಗುದಾಣಕ್ಕೆ ಪೈಂಟಿಂಗ್ ಕಾರ್ಯ ನಡೆಸಿ,ಪ್ಲಾಸ್ಟಿಕ್ ನಿರ್ಮೂಲನೆ,ಮತ್ತು ಸ್ವಚ್ಛ ಭಾರತ ಕನಸು ನನಸಾಗಿಸುವ ಭಿತ್ತಿ ಚಿತ್ರದ ಮೂಲಕ ಸಂದೇಶವನ್ನು ನೀಡುವ ವರ್ಣಚಿತ್ತಾರ ರಚನೆ, ಪ್ಲಾಸ್ಟಿಕ್ ಮುಕ್ತ ಅರಿಯಡ್ಕ ಗ್ರಾಮ ಯೋಜನೆಯಡಿಯಲ್ಲಿ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ,ಅರಿವು ಮೂಡಿಸುವ ಕಾರ್ಯಕ್ರಮ, ಸತತ ಒಂದು ತಿಂಗಳುಗಳ ಕಾಲ ಕ್ಲೀನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಸಂಗ್ರಹಿಸಿಡಲಾದ ಪ್ಲಾಸ್ಟಿಕ್ ಕಸಗಳನ್ನು ಮಜ್ಜಾರಡ್ಕ ಪರಿಸರದಲ್ಲಿ ಸಂಗ್ರಹಿಸಿದ್ದು, ಪಂಚಾಯತ್ ಗೆ ಒಳಪಡುವ ಪ್ಲಾಸ್ಟಿಕ್ ಸಂಗ್ರಹ ಕೇಂದ್ರಕ್ಕೆ ವಿಲೇವಾರಿ ಮಾಡುವ ಕಾರ್ಯವನ್ನು ಸಂಘಟನೆಯ ವತಿಯಿಂದ ಮಾಡಲಾಗಿದೆ.

`ಎಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ನಮ್ಮ ಯುವಶಕ್ತಿ ಬಳಗವು ಪ್ಲಾಸ್ಟಿಕ್ ಮುಕ್ತ ಅರಿಯಡ್ಕ ಗ್ರಾಮ ಎಂಬ ಅಭಿಯಾನದಲ್ಲಿ ಅಕ್ಟೋಬರ್ ಒಂದು ತಿಂಗಳು ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಮಾಡಿದ್ದೇವೆ. ನಮ್ಮೊಂದಿಗೆ ಸಹಕರಿಸಿದ ಅರಿಯಡ್ಕ ಗ್ರಾಪಂ ಅಧಿಕಾರಿ ವರ್ಗ ಮತ್ತು ಆಡಳಿತ ವರ್ಗಕ್ಕೆ, ಯುವಕೇಂದ್ರದ ಎಲ್ಲಾ ಅಧಿಕಾರಿ ವರ್ಗದವರಿಗೆ ಹಾಗೂ ಗ್ರಾಮಸ್ಥರಿಗೆ, ದಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.’ – ರಾಜೇಶ್ ಕೆ.ಮಯೂರ, ಸಂಘಟನಾ ಕಾರ್ಯದರ್ಶಿ ಯುವಶಕ್ತಿ ಬಳಗ

LEAVE A REPLY

Please enter your comment!
Please enter your name here