ಕಿಡ್ನಿ ವೈಫಲ್ಯವಿರುವವರಿಗೆ ರೋಟರಿ ಕ್ಲಬ್‌ನಿಂದ ಆಹಾರ ಔಷಧೀಯ ಕ್ರಮ, ಕಿಡ್ನಿ ಟ್ರಾನ್ಸ್‌ಪ್ಲೆಂಟ್ ಮಾಹಿತಿ ಶಿಬಿರ

0

 

ಪುತ್ತೂರು:ಕಿಡ್ನಿ ವೈಫಲ್ಯವಿರುವವರು ಒಬ್ಬರ ಕಿಡ್ನಿಯನ್ನು ಮತ್ತೊಬ್ಬರಿಗೆ ಅಳವಡಿಸುವುದು(ಟ್ರಾನ್ಸ್‌ಪ್ಲೆಂಟ್) ಮಾಡುವುದರಿಂದ ಖಾಯಿಲೆಯಿಂದ ಗುಣಮುಖವಾಗಿ ಸಾಮಾನ್ಯರಂತೆ ಜೀವಿಸಬಹುದು. ಅಲ್ಲದೆ ಡಯಾಲಿಸಿಸ್‌ಗೆ ಪ್ರತಿ ವರ್ಷ ಖರ್ಚು ಮಾಡುವ ಲಕ್ಷಾಂತರ ರೂಪಾಯಿಗಳನ್ನು ಉಳಿಸಬಹುದು ಎಂದು ಮಂಗಳೂರು ಎ.ಜೆ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಸಲಹೆ ನೀಡಿದರು.

ರೋಟರಿ ಕ್ಲಬ್ ಪುತ್ತೂರು ಡಯಾಲಿಸಿಸ್ ಸೆಂಟರ್‌ನಿಂದ ಮಾ.೫ರಂದು ರೋಟರಿ ಕ್ಲಬ್ ಪುತ್ತೂರು ಟ್ರಸ್ಟ್ ಹಾಲ್‌ನಲ್ಲಿ ನಡೆದ ಪುತ್ತೂರು ಹಾಗೂ ಕಡಬ ತಾಲೂಕಿನ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಆಹಾರ ಔಷಧೀಯ ಕ್ರಮ ಹಾಗೂ ಕಿಡ್ನಿ ಟ್ರಾನ್ಸ್‌ಪ್ಲೆಂಟ್ ಬಗ್ಗೆ ವಿಶೇಷ ಶಿಬಿರದಲ್ಲಿ ಮಾಹಿತಿ ನೀಡಿದರು. ಕಿಡ್ನಿ ವೈಫಲ್ಯವಿರುವವರಿಗೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಪ್ರತಿಬಾರಿ ರೂ.1500 ವ್ಯಯಿಸಬೇಕಾಗುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ ಡಯಾಲಿಸಿಸ್‌ಗೆ ರೂ.2500ರಿಂದ ೩೫೦೦ರ ತನಕ ಖರ್ಚಾಗುತ್ತದೆ. ಕಿಡ್ನಿ ಟ್ರಾನ್ಸ್‌ಪ್ಲೆಂಟ್ ಮಾಡುವುದರಿಂದ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುವುದನ್ನು ಉಳಿಸುವುದಲ್ಲದೆ ಸಾಮಾನ್ಯ ವ್ಯಕ್ತಿಗಳಂತೆ ಬದುಕಲು ಸಾಧ್ಯ. ಕುಟುಂಬದ ಬಂಧುಗಳೊಲಗೆ ಸುಲಭವಾಗಿ ಟ್ರಾನ್ಸ್‌ಪ್ಲೆಂಟ್ ಮಾಡಬಹುದನ್ಸ್ಕಿಡ್ನಿ ದಾನ ಮಾಡುವುದರಿಂದ ಅವರಿಗೆ ಯಾವುದೇ ತೊಂದರೆಯಿಲ್ಲ. ಹೊರಗಿನವರಿಂದ ಆದರೆ ಸುಲಭವಾಗಿ ಟ್ರಾನ್ಸ್‌ಪ್ಲೆಂಟ್ ಮಾಡಲು ಸಾಧ್ಯವಿಲ್ಲ. ಅದಕ್ಕೆ ಸಕಾರದ ಅನುಮತಿ ಬೇಕಾಗುತ್ತದೆ. ಅಲ್ಲದೆ ಸಿನೇಮಾಗಳಲ್ಲಿ ನಡೆಯುವ ರೀತಿಯಲ್ಲಿ ಟ್ರಾನ್ಸ್‌ಪ್ಲೆಂಟ್ ಮಾಡುವುದಿಲ್ಲ. ಟ್ರಾನ್ಸ್‌ಪ್ಲೆಂಟ್‌ಗೆ ರೂ.೩ರಿಂದ೪ಲಕ್ಷ ಖರ್ಚಾಗುತ್ತದೆ. ಒಂದು ಭಾರಿ ಖರ್ಚು ಮಾಡುವುದರಿಂದ ನಂತರ ಯಾವುದೇ ತೊಂದರೆಗಳಿಲ್ಲದೆ ಸಾಮಾನ್ಯ ವ್ಯಕ್ತಿಗಳಂತೆ ಜೀವಿಸಲು ಸಾಧ್ಯವಿದೆ. ಮಂಗಳೂರಿನಲ್ಲಿ ಎ.ಜೆ ಶೆಟ್ಟಿ ಆಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆಗಳಲ್ಲಿ ಮಾತ್ರ ಟ್ರಾನ್ಸ್‌ಪ್ಲೆಂಟ್ ಮಾಡಾಗುತ್ತಿದ್ದು ಇದಕ್ಕೆ ಸರಕಾರದ ನಿಯಮದಲ್ಲಿ ನೊಂದಾವಣೆಯಾಗಬೇಕು ಎಂದು ಹೇಳಿದರು.

 

ಕಿಡ್ನಿ ವೈಫಲ್ಯ ಉಂಟಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅದು ಬಾರದಂತೆ ತಡೆಗಟ್ಟಲು ಸಾಧ್ಯವಿಲ್ಲ. ಅಧಿಕ ರಕ್ತದೊತ್ತಡ(ಬಿಪಿ) ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಡದಿದ್ದರೆ ಮುಂದೆ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ತಲೆ, ನೋವು, ಕಾಲು ನೋವುಗಳಿಗೆ ಪರೀಕ್ಷಿಸದೆ ಮೆಡಿಕಲ್‌ನಿಂದ ಮಾತ್ರೆ ಸೇವಿಸುವುದರಿಂದ ಕಿಡ್ನಿ ವೈಫಲ್ಯವುಂಟಾಗುತ್ತದೆ. ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ(ಬಿಪಿ) ಇರುವವರು ನಿರಂತರವಾಗಿ ವೈದ್ಯರಲಿ ಪರೀಕ್ಷಿಸಿ ಔಷಧಿ ಪಡೆದುಕೊಳ್ಳಬೇಕು. ಮೆಡಿಕಲ್‌ನಿಂದ ಪಡೆದುಕೊಳ್ಳಬಾರದು. ಇದರೆ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಒಮ್ಮೆ ಕಿಡ್ನಿ ವೈಫಲ್ಯವಾದರೆ ಮತ್ತೆ ನಿಯಂತ್ರಿಸಲು ಸಾಧ್ಯವಿಲ್ಲ. ನಂತರ ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಡಯಾಲಿಸಿಸ್ ಮಾಡಬೇಕು. ಉಪ್ಪು, ಪೊಟಾಶಿಯಂ, ಎಣ್ಣೆಯಲ್ಲಿ ತಯಾರಿಸಿದ ಆಹಾರಗಳನ್ನು, ಸಾಫ್ಟ್‌ಡ್ರಿಂಕ್, ಒಣಮೀನು ದೂರವಿರಬೇಕು ಎಂದು ಸಲಹೆ ನೀಡಿದ ಡಾ.ಪ್ರಶಾಂತ್ ಮಾರ್ಲ ರೋಟರಿ ಕ್ಲಬ್ ಮುಖಾಂತರ ಡಯಾಲಿಸಿಸ್ ಕೇಂದ್ರವು ಉತ್ತಮ ರೀತಿಯಲ್ಲಿ ನಿರ್ವಹಣೆಯಾಗುತ್ತಿದೆ. ರೋಗಿಗಳಿಗೆ ಸಹಾಯಧನ ನೀಡುವ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

1262 ಮಂದಿಗೆ ಡಯಾಲಿಸಿಸ್ ಚಿಕಿತ್ಸೆ:
ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ಮಾತನಾಡಿ, ರೂ.50ಲಕ್ಷ ವೆಚ್ಚದಲ್ಲಿ 2021ರಲ್ಲಿ ಲೋಕಾರ್ಪಣೆಗೊಂಡಿರುವ ಡಯಾಲಿಸಿಸ್ ಕೇಂದ್ರದ ನಿರ್ಮಾಣದಲ್ಲಿ ರೋಟರಿಯ ಸದಸ್ಯರ ಶ್ರಮಿವಿದೆ. ಮಹಾವೀರ ಆಸ್ಪತ್ರೆಯ ಆಡಳಿತ ನಿರ್ದೇಶಕ ಅಶೋಕ್ ಪಡಿವಾಳ್ ಸ್ಥಳವಾಕಾಶ ನೀಡಿದ್ದಾರೆ. ಎ.ಜೆ ಶೆಟ್ಟಿ ನಿರ್ವಹಣೆಯೊಂದಿಗೆ ಕೇಂದ್ರವು ನಡೆಯುತ್ತಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದ 1262 ಮಂದಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಡಯಾಲಿಸಿಸ್ ಕೇಂದ್ರ ನಮ್ಮ ನಿರೀಕ್ಷೆಗಿಂತ ಮಿಗಿಲಾಗಿ ಮುನ್ನಡೆಯುತ್ತಿದೆ. ಪ್ರತಿದಿನ ಆರು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಸೇವೆಯು ಇನ್ನಷ್ಟು ಮಂದಿಗೆ ದೊರೆಯಬೇಕುನ್ನು ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮೂರು ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಲಾಗುವುದು. ರೋಟರಿ ಕ್ಲಬ್ ಮುಖಾಂತರ ಬಿಪಿಎಲ್ ಪಡಿತರ ಚೀಟಿದಾರ ೧೯ ಮಂದಿ ಡಯಾಲಿಸಿಸ್ ರೋಗಿಗಳಿಗೆ ರೂ. ೨,೮೭೫೫೦ ಸಹಾಯಧನ, ಈಗ 17 ಮಂದಿ ಪ್ರತಿ ತಿಂಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ತೊಂದರೆ ಬಳಲುತ್ತಿರುವವರಿಗೆ ರೋಟರಿ ಕ್ಲಬ್ ನಿರಂತರ ಸಹಾಯ ಹಸ್ತ ನೀಡುತ್ತಿದೆ. ಕೇಂದ್ರದ ಪ್ರಯೋಜನ ಇನ್ನಷ್ಟು ಜನರಿಗೆ ದೊರೆಯಬೇಕೆನ್ನು ನಿಟ್ಟಿನಲ್ಲಿ ಮಾಹಿತಿ ಶಿಬಿರ ಏರ್ಪಡಿಸಲಾಗಿದೆ. ಎಂದು ಹೇಳಿದರು.

ಸುಮಾರು 50ಕ್ಕೂ ಅಧಿಕ ಮಂದಿ ಡಯಾಲಿಸಿಸ್ ರೋಗಿಗಳು ಶಿಬಿರದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ, ಗೊಂದಲಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ ಕಣಜಾಲು ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯ ದಾಮೋದರ ಪ್ರಾರ್ಥಿಸಿದರು. ಅಧ್ಯಕ್ಷ ಮಧು ನರಿಯೂರು ಸ್ವಾಗತಿಸಿದರು. ಡಾ.ಅಶೋಕ್ ಪಡಿವಾಳ್ ವಂದಿಸಿದರು.

LEAVE A REPLY

Please enter your comment!
Please enter your name here