ಹುಲ್ಲು, ಪೊದರುಗಳಿಂದ ಆವೃತವಾದ ರೆಂಜಲಾಡಿ- ಭಕ್ತಕೋಡಿ ರಸ್ತೆ

0

  • ಮುಂಡೂರು ಗ್ರಾಮ ಪಂಚಾಯತ್’ನಿಂದ ತೆರವು ಕಾರ್ಯಾಚರಣೆ

ಪುತ್ತೂರು: ಮುಂಡೂರು ಗ್ರಾಪಂ ವ್ಯಾಪ್ತಿಯ ರೆಂಜಲಾಡಿಯಿಂದ ಭಕ್ತಕೋಡಿ ವರೆಗೆ ರಸ್ತೆಯ ಇಕ್ಕೆಲೆಗಳಲ್ಲಿ ಬೆಳೆದಿದ್ದ ಹುಲ್ಲು, ಗಿಡಗಂಟಿ ಪೊದರುಗಳನ್ನು ತೆರವುಗೊಳಿಸುವ ಕಾರ್ಯ ಮಾ.6ರಂದು ನಡೆಯಿತು. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ತೆರವು ಕಾರ್ಯಕ್ಕೆ ಚಾಲನೆ ನೀಡಿದರು.

 

ಸ್ಥಳೀಯ ವಾರ್ಡ್ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಬೊಟ್ಯಾಡಿ, ಸರ್ವೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ ಸೊರಕೆ, ಹೇಮರಾಜ್ ಆಚಾರ್ಯ, ಲೋಕೇಶ್ ಆಚಾರ್ಯ, ನವೀನ್ ರೈ ರೆಂಜಲಾಡಿ, ಶೃತೇಶ್ ರೈ, ಭಾರತಿ ರೈ, ವಸುಧಾ ರೈ, ಲಕ್ಷ್ಮೀ ಶೆಟ್ಟಿ, ಪ್ರಜ್ವಲ್ ರೈ, ಪ್ರಣಾಮ್ ರೈ, ದೀಕ್ಷಿತ್ ಬಲ್ಯಾಯ, ಚೇತನ್ ಕಡ್ಯ, ಅನ್ವಿತ್ ರೈ ಅಝೀಝ್ ರೆಂಜಲಾಡಿ, ಮಹಮ್ಮದ್ ರೆಂಜಲಾಡಿ, ಸಂತೋಷ್ ಕಲ್ಪಣೆ, ಸುಂದರ ಕಲ್ಪಣೆ ಹಾಗೂ ರಂಜಿತ್ ಭಕ್ತಕೋಡಿ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ರಾಧಾಕೃಷ್ಣ ರೈ ರೆಂಜಲಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

LEAVE A REPLY

Please enter your comment!
Please enter your name here