ರೋಟರಿ ಈಸ್ಟ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

  • ರೋಟರಿಯಿಂದ ಸ್ನೇಹ, ಬಾಂಧವ್ಯದ ಅಡಿಪಾಯಕ್ಕೆ ಮುನ್ನುಡಿ-ರವೀಂದ್ರ ಭಟ್

ಪುತ್ತೂರು:ವೈಯಕ್ತಿಕವಾಗಿ ಸೇವೆ ಮಾಡುವುದರ ಬದಲು ಸಂಘ-ಸಂಸ್ಥೆಯೊಂದಿಗೆ ಸೇರಿಕೊಂಡು ಸಾರ್ವತ್ರಿಕವಾಗಿ ಸೇವೆ ಮಾಡಿದಾಗ ಹೆಚ್ಚು ತೂಕ ಬರುತ್ತದೆ. ಈ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ರೋಟರಿಯಲ್ಲಿ ಸದಸ್ಯರು ಗುರುತಿಸಿಕೊಂಡಾಗ ಸೇವೆಯೊಂದಿಗೆ ಸ್ನೇಹ ಹಾಗೂ ಬಾಂಧವ್ಯದ ಅಡಿಪಾಯಕ್ಕೆ ಮುನ್ನುಡಿ ಸಿಗುವಂತಾಗುತ್ತದೆ ಎಂದು ರೋಟರಿ ಜಿಲ್ಲೆ ೩೧೮೧, ವಲಯ ನಾಲ್ಕರ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಹೇಳಿದರು.

ರೋಟರಿ ಜಿಲ್ಲೆ ೩೧೮೧, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ಗೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಮಾ.೬ ರಂದು ಅಧಿಕೃತ ಭೇಟಿ ನೀಡಿ, ಸಂಜೆ ಮರೀಲು ಹೊರ ವಲಯದಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ಜರಗಿದ ಸಮಾರಂಭದಲ್ಲಿ ಕ್ಲಬ್ ಹಮ್ಮಿಕೊಂಡ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು. ರೋಟರಿ ಈಸ್ಟ್‌ಗೆ ೧೯೮೮ರಲ್ಲಿ ಚಾರ್ಟರ್ ದಕ್ಕಿದ ದಿನವಾಗಿದೆ. ಅಲ್ಲಿಂದ ಇಲ್ಲಿವರೆಗೂ ಕ್ಲಬ್ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ದೇಶಕ್ಕೆ, ಸಮಾಜಕ್ಕೆ ಒಳಿತ್ತನ್ನು ಮಾಡುವ ಮೂಲಕ ಮನೆಮಾತಾಗಿದೆ. ಸಂಪಾದನೆ ಯಾರೂ ಕೂಡ ಮಾಡಬಹುದು, ಆದರೆ ಸಮಾಜಕ್ಕೆ ಸಂಪಾದನೆಯಲ್ಲಿ ಒಂದಿಷ್ಟು ವಿನಿಯೋಗಿಸುವ ಮನಸ್ಸು ಬೇಕಾಗಿದೆ. ಕ್ಲಬ್ ಹಮ್ಮಿಕೊಂಡಿರುವ ಪ್ರಾಜೆಕ್ಟ್‌ಗಳಲ್ಲಿ ಸ್ವಚ್ಚಭಾರತ ಯೋಜನೆಯು ಬಹಳ ಮೆಚ್ಚತಕ್ಕದ್ದು. ತುಂಬಾ ಜನರಿಗೆ ರೋಟರಿ ಸಂಸ್ಥೆ ಏನೆಂಬುದೇ ಗೊತ್ತಿಲ್ಲ ಎಂದ ಅವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ಣುಡಿಯಂತೆ ಪ್ರತಿ ರೊಟೇರಿಯನ್ಸ್‌ಗಳು ವ್ಯಾವಹಾರಿಕವಾಗಿ ಪರಸ್ಪರ ತೊಡಗಿಸಿಕೊಂಡಾಗ ನಾಣ್ಣುಡಿಗೆ ಅರ್ಥ ಬರುತ್ತದೆ ಮಾತ್ರವಲ್ಲದೆ ರೊಟೇರಿಯನ್ಸ್‌ಗಳು ಕೂಡ ಆರ್ಥಿಕವಾಗಿ ಸಬಲರಾಗುತ್ತಾ ಹೋಗುತ್ತಾರೆ. ಪ್ರತಿ ರೊಟೇರಿಯನ್ಸ್‌ಗಳಲ್ಲಿ ತಾನು ಸಾಧಿಸುತ್ತೇನೆ ಎಂಬ ಪಂಥಹ್ವಾನದೊಂದಿಗೆ ಕನಸು ಕೂಡ ಬೇಕಾಗಿದೆ ಎಂದು ಅವರು ಹೇಳಿದರು.

ಅಸಿಸ್ಟೆಂಟ್ ಗವರ್‍ನರ್ ಜಿತೇಂದ್ರ ಎನ್.ಎರವರು ಕ್ಲಬ್ ಬುಲೆಟಿನ್ ರೋಟವಾಹಿನಿ ಉದ್ಘಾಟಿಸಿ ಮಾತನಾಡಿ, ರೋಟರಿ ಈಸ್ಟ್ ಕ್ಲಬ್ ಜಿಲ್ಲೆಯ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾಗಿದೆ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಶ್ಲಾಘನೆಗೆ ಪಾತ್ರವಾಗಿದೆ ಕೂಡ. ಕ್ಲಬ್ ಅಧ್ಯಕ್ಷ ಪುರಂದರ ರೈಯವರು ವಿನಯತೆ ಹಾಗೂ ವಿಧೇಯತೆಯನ್ನು ಮೈಗೂಡಿಸಿಕೊಂಡು ಜೇಸಿಯಲ್ಲಿ ಸಾಧನೆ ಮಾಡಿದವರು. ರೋಟರಿಯ ವಿಷಯದಲ್ಲಿ ರೋಟರಿ ಈಸ್ಟ್ ಎಲ್ಲಾ ವಿಚಾರಗಳಲ್ಲೂ ಮುಂದೆ ಇದ್ದಾರೆ ಎನ್ನುವುದು ಸತ್ಯ. ಮುಂದಿನ ದಿನಗಳಲ್ಲೂ ಕ್ಲಬ್ ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲಿ ಎನ್ನುವುದೇ ಆಶಯವಾಗಿದೆ ಎಂದರು.

ರೋಟರಿ ವಲಯ ಕಾರ್ಯದರ್ಶಿ ಅಬ್ಬಾಸ್ ಮುರರವರು ಮಾತನಾಡಿ, ರೋಟರಿ ಈಸ್ಟ್‌ನ ಪ್ರಸ್ತುತ ಅಧ್ಯಕ್ಷರಾಗಿರುವ ಪುರಂದರ ರೈಯವರು ೩೪ನೇ ಅಧ್ಯಕ್ಷರು ಜೊತೆಗೆ ಹಿರಿಯ ಸದಸ್ಯರೂ ಕೂಡ. ತಾನು ಜೇಸಿಯಲ್ಲಿ ಸೀನಿಯರ್ ಆದರೆ ರೋಟರಿಯಲ್ಲಿ ನಿಮಗೆ ಜ್ಯೂನಿಯರ್ ಎಂದು ಪುರಂದರ ರೈಯವರು ಹೇಳುತ್ತಿದ್ದರು. ಪುರಂದರ ರೈಯವರ ಮುಂದಿನ ನಾಲ್ಕು ತಿಂಗಳ ಅಧ್ಯಕ್ಷವಾಧಿಯಲ್ಲಿ ಕ್ಲಬ್ ಮತ್ತಷ್ಟು ಕಾರ್ಯಕ್ರಮಗಳು ನಡೆಸುವಂತಾಗಲಿ ಎಂದರು.


ರೋಟರಿ ವಲಯ ಸೇನಾನಿ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ನನ್ನ ಮಾತೃಸಂಸ್ಥೆಯಾಗಿರುವ ರೋಟರಿ ಈಸ್ಟ್‌ನಲ್ಲಿ ವಲಯ ಸೇನಾನಿಯಾಗಿರುವುದು ನನ್ನ ಹೆಗ್ಗಳಿಕೆಯಾಗಿದೆ. ರೋಟರಿ ಸಂಸ್ಥೆಯು ಯಾವುದೇ ಸಮಾಜಮುಖಿ ಕಾರ್ಯ ಮಾಡಿದಾಗ ಅದರ ಲಾಭ ಮಾತ್ರ ಬಹಳಷ್ಟು ಮಂದಿಗೆ ಆಗುತ್ತದೆ ಎನ್ನುವುದು ಸತ್ಯ. ಅದು ಪ್ರಜ್ಞಾ ಸೇವಾಶ್ರಮವಾಗಲಿ, ಭಾರತ್ ಸೇವಾಶ್ರಮವಾಗಲಿ ಯಾವುದೇ ಸಂಸ್ಥೆಯಾಗಲಿ ರೋಟರಿ ಸದಸ್ಯರು ನೀಡುವ ಸೇವೆಯು ನಿಜಕ್ಕೂ ಅನನ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕ್ಲಬ್ ಅಧ್ಯಕ್ಷ ಪುರಂದರ ರೈಯವರು ಸ್ವಾಗತಿಸಿ ಮಾತನಾಡಿ, ದೇಶದ ಯಾವುದೋ ಮೂಲೆಯಲ್ಲಿ ಇದ್ದಂತಹ ವ್ಯಕ್ತಿಗಳು ರೋಟರಿ ಸದಸ್ಯರಲ್ಲಿನ ಬಾಂಧವ್ಯದಿಂದ ಫಲಾನುಭವಿಗಳಿಗೆ ನೆರವಾಗುತ್ತಿರೋದು ನಿಜಕ್ಕೂ ಪುಣ್ಯದ ಕಾರ್ಯ. ಎಲ್ಲಿಯ ಭಾರತ, ಎಲ್ಲಿಯ ಲಂಡನ್, ಎಲ್ಲಿಯ ಪುತ್ತೂರು, ಎಲ್ಲಿಯ ಪ್ರಜ್ಞಾ ಸೇವಾಶ್ರಮ ಹೀಗೆ ಬೆಳೆಯುತ್ತದೆ ಸಮಾಜಮುಖಿ ಕಾರ್ಯಗಳು. ನಾವೆಲ್ಲರೂ ಒಂದೇ ಕುಟುಂಬದ ಮಕ್ಕಳಂತೆ ಸಮಾಜದಲ್ಲಿ ತೊಡಗಿಸಿಕೊಳ್ಳೋಣ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್‌ಗೆ ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯಾ ಬಿ.ಎಸ್ ಹಾಗೂ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಶ್ರೀಮತಿ ಮಮತಾ ಕೆ.ರವರು ನೂತನ ಸದಸ್ಯರಾಗಿ ಕ್ಲಬ್‌ಗೆ ಸೇರ್ಪಡೆಗೊಂಡರು. ಕ್ಲಬ್ ಸರ್ವಿಸ್‌ನಡಿಯಲ್ಲಿ ಕ್ಲಬ್ ಸರ್ವಿಸ್ ನಿರ್ದೇಶಕ ಶರತ್ ಕುಮಾರ್ ರೈಯವರು ನೂತನ ಸದಸ್ಯರ ಪರಿಚಯ ಮಾಡಿದರು. ಜಿಲ್ಲಾ ಗವರ್ನರ್ ನೂತನ ಸದಸ್ಯರಿಗೆ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು.

ಸನ್ಮಾನ:
ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್ ದಂಪತಿ, ಪುತ್ತೂರಿನಲ್ಲಿ ರೋಟರಿ ಸಂಸ್ಥೆಯನ್ನು ಬೆಳೆಸಿದ ರೋಟರಿ ಭೀಷ್ಮ ಕೆ.ಆರ್ ಶೆಣೈ, ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಪ್ರಕಾಶ್ ಕಾರಂತ್, ರೋಟರಿ ಜಿಲ್ಲಾ ಗವರ್‍ನರ್ ನಾಮಿನಿಯಾಗಿ ಆಯ್ಕೆಯಾದ ವಿಕ್ರಂ ದತ್ತರವರನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ವಸಂತ್ ಜಾಲಾಡಿ, ವೃತ್ತಿ ಸೇವಾ ನಿರ್ದೇಶಕ ಮುರಳೀಶ್ಯಾಂರವರು ಕರ್ತವ್ಯ ನಿರ್ವಹಿಸಿದರು.

 

ಅಭಿನಂದನೆ:
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ, ರೋಟರಿ ಕ್ಲಬ್ ಸದಸ್ಯರೂ ಜೊತೆಗೆ ದಿ ಪುತ್ತೂರು ಕ್ಲಬ್ ಅಧ್ಯಕ್ಷರೂ ಆಗಿರುವ ಡಾ.ದೀಪಕ್ ರೈ, ಜಿಲ್ಲಾ ಪ್ರತಿನಿಧಿಗಳಾದ ವಿಜಯೇಂದ್ರ, ವಿವೇಕ್ ಅತ್ತಾವರ್ ಹಾಗೂ ಕಾರ್ಯಕ್ರಮದ ಭೋಜನಕ್ಕೆ ಧನಸಹಾಯ ನೀಡಿದ ಮುರಳಿಶ್ಯಾಂ, ವಸಂತ್ ಕುಮಾರ್ ರೈ, ಪುರುಷೋತ್ತಮ್, ಸುರೇಶ್, ಸುದರ್ಶನ್ ನಾಯಕ್, ನವೀನ್ ಶೆಟ್ಟಿ, ಲ್ಯಾನ್ಸಿ ಡಿ’ಸೋಜ, ಶಶಿಕಿರಣ್ ರೈ, ವಸಂತ್ ಜಾಲಾಡಿ, ಡಾ.ಶ್ಯಾಮ್‌ಪ್ರಸಾದ್, ಡಾ.ಸೂರ್ಯನಾರಾಯಣ, ಮನೋಜ್ ಡಿ’ಸೋಜ, ದೀಪಕ್ ಶೆಟ್ಟಿ, ಮಹಾಲಿಂಗ ನಾಯ್ಕ್‌ರವರನ್ನು ಗುರುತಿಸಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರು ಹೂಗುಚ್ಛ ನೀಡುವ ಮೂಲಕ ಅಭಿನಂದಿಸಲಾಯಿತು.

 

ಪಿಎಚ್‌ಎಫ್ ಗೌರವ:
ಅಂತರ್ರಾಷ್ಟ್ರೀಯ ಸರ್ವಿಸ್‌ನಡಿಯಲ್ಲಿ ಪಿಎಚ್‌ಎಫ್ ಪದವಿ ಪಡೆದ ಕ್ಲಬ್ ಅಧ್ಯಕ್ಷ ಪುರಂದರ ರೈ, ಶರತ್ ಕುಮಾರ್ ರೈ, ಮುರಳೀಶ್ಯಾಂ, ಡಾ.ಶ್ಯಾಮ್ ಪ್ರಸಾದ್(ಫ್ಲಸ್ ೨ ಪಿಎಚ್‌ಎಫ್), ರವಿಕುಮಾರ್ ರೈ, ಮನೋಜ್ ಡಿ’ಸೋಜ, ಸೂರ್‍ಯನಾಥ ಆಳ್ವ, ಸಚ್ಚಿದಾನಂದ, ಕೃಷ್ಣನಾರಾಯಣ ಮುಳಿಯ(ಫ್ಲಸ್ ೨ ಪಿಎಚ್‌ಎಫ್), ಕೆ.ವಿಶ್ವಾಶ್ ಶೆಣೈ, ಬೂಡಿಯಾರು ರಾಧಾಕೃಷ್ಣ ರೈ, ಡಿಆರ್‌ಎಫ್‌ಸಿ ಡಾ.ಸೂರ್‍ಯನಾರಾಯಣರವರಿಗೆ ಡಿಜಿ ಹೂ ನೀಡಿ ಗೌರವಿಸಿದರು.

ಹುಟ್ಟುಹಬ್ಬ ಆಚರಣೆ:
ಮಾರ್ಚ್ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್, ಕ್ಲಬ್ ಅಧ್ಯಕ್ಷ ಪುರಂದರ ರೈಯವರು ಜೊತೆಗೂಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸಚ್ಚಿದಾನಂದರವರು ಪ್ರಾಜೆಕ್ಟ್‌ಗಳ ವಿವರ ನೀಡಿದರು. ಕು|ತನ್ವಿ ಪ್ರಾರ್ಥಿಸಿದರು. ಕ್ಲಬ್ ನಿರ್ಗಮನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೂಡಿಯಾರು ರಾಧಾಕೃಷ್ಣ ರೈ, ಶಾಂತಿ ಶೆಣೈ, ಶರತ್ ಕುಮಾರ್ ರೈ, ಮುರಳೀಶ್ಯಾಂ, ಸಚ್ಚಿದಾನಂದರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಡಾ.ಹೆಬ್ಬಾರ್‌ರವರು ಡಿಜಿಯವರ ಪರಿಚಯ ಮಾಡಿದರು. ಕಾರ್ಯದರ್ಶಿ ಶಶಿಧರ್ ಕನ್ನಿಮಜಲುರವರು ವರದಿ ವಾಚಿಸಿ ವಂದಿಸಿದರು. ಮಾಜಿ ಅಧ್ಯಕ್ಷ ಕೆ.ವಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಸಮಾಜಮುಖಿ ಕಾರ್ಯಗಳು
ಸಾವಿರ ಡಾಲರ್ ಜಿಲ್ಲಾ ಗ್ರ್ಯಾಂಟ್‌ನ ಸಹಯೋಗದೊಂದಿಗೆ ಕೆದಂಬಾಡಿ ಪಂಚಾಯತ್‌ನಲ್ಲಿ ಸುಮಾರು ರೂ.೩ ಲಕ್ಷ ವೆಚ್ಚದಲ್ಲಿ ಟಾಯ್ಲೆಟ್, ಕನ್ಯಾನ ಭಾರತ್ ಸೇವಾಶ್ರಮಕ್ಕೆ ಹುಶಾರಿಲ್ಲದವರಿಗೆ ವಾರ್ಡ್, ದೇವಾ ಟ್ರೇಡರ್‍ಸ್ ಸಹಕಾರದೊಂದಿಗೆ ರೂ.೩೪ ಸಾವಿರ ಮೌಲ್ಯದ ಹೊಲಿಗೆ ಮೆಶಿನ್, ಸೇವಾಭಾರತಿ ಆಶ್ರಮಕ್ಕೆ ರೂ.೧೦ ಸಾವಿರ, ಕನ್ಯಾನ ಆಶ್ರಮಕ್ಕೆ ರೂ.೫೦ ಸಾವಿರ ನೀಡಲಾಗಿದೆ. ಕ್ಲಬ್ ವತಿಯಿಂದ ೫ಕೆ.ಜಿ ಬಿದಿರಿನ ಬೀಜಗಳನ್ನು ಖರೀದಿಸಿ ವಿವಿಧ ಕಡೆಗಳಲ್ಲಿ ಭಿತ್ತನೆ ಮಾಡಲಾಗಿದೆ. ಸುಮಾರು ೧೮ ಲಕ್ಷ ವೆಚ್ಚದಲ್ಲಿ ೧.೫೦ ಕೋಟಿ ಲೀಟರ್ ಮಳೆ ನೀರನ್ನು ಸಂಗ್ರಹಿಸುವ ನೀರಿನ ಟ್ಯಾಂಕನ್ನು ಅಧ್ಯಕ್ಷ ಪುರಂದರ ರೈಯವರ ಮಿತ್ರಂಪಾಡಿ ಫಾರ್ಮ್ಸ್‌ನಲ್ಲಿ ನಿರ್ಮಿಸಲಾಗಿದೆ.ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ರೂ.೨೭ ಸಾವಿರ ವೆಚ್ಚದಲ್ಲಿ ಮೇಲ್ಛಾವಣಿಯ ವಿಸ್ತರಿಣೆ, ಮೇಲ್ಛಾವಣಿಗೆ ಬೇಕಾದ ಶೀಟ್‌ಗಳನ್ನು `ಕನಸುಗಳ ಬೆನ್ನೇರಿ’ ಟೀಮ್ ನೀಡಿದೆ. ಜೊತೆಗೆ ರೂ.೧.೫ ಲಕ್ಷದಲ್ಲಿ ರೋಟರಿ ಯುವ ಸಹಯೋಗದೊಂದಿಗೆ ಆಶ್ರಯ ಹಾಲ್, ರೋಟರಿ ಸ್ವರ್ಣದೊಂದಿಗೆ ರೂ.೪೫ ಸಾವಿರದಲ್ಲಿ ಬಯೋಗ್ಯಾಸ್ ಪ್ಲಾಟ್, ರೂ.೫೮ ಸಾವಿರದಲ್ಲಿ ಸೋಲಾರ್ ವಾಟರ್ ಹೀಟರ್, ಸ್ವಚ್ಛ ಪುತ್ತೂರು ಯೋಜನೆ ಮುಂತಾದುವುಗಳು.

ಸನ್ಮಾನ..
ಯೂತ್ ಸರ್ವಿಸ್‌ನಡಿಯಲ್ಲಿ ಒಳಮೊಗ್ರು ಗ್ರಾಮದ ಮುಡಾಲ ಎಂಬಲ್ಲಿಯ ಪುರಂದರ ಶೆಟ್ಟಿ ಹಾಗೂ ವಾರಿಜಾಕ್ಷಿ ಶೆಟ್ಟಿಯವರ ತೃತೀಯ ಪುತ್ರಿ, ಪ್ರಸ್ತುತ ಕುಂದಾಪುರ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಹಸ್ತಾ ಶೆಟ್ಟಿ, ವೃತ್ತಿ ಸೇವಾ ವಿಭಾಗದಡಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ನೋಟ್ ಪುಸ್ತಕ, ಜೆರಾಕ್ಸ್ ಕಾಪಿ, ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಸಂಗ್ರಹಿಸಿ ನೀಡುವ ಮೂಲಕ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕರಿಸುತ್ತಾ ಬಂದಿರುವ ಮಾಧವ ಪ್ರಭು ಕೂರ್ನಡ್ಕರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here