ಇಡ್ಕಿದು ಸೇವಾ ಸಹಕಾರಿ ಸಂಘದ ಆರೋಗ್ಯಾಮೃತ ಯೋಜನೆ ಜಾರಿ ಹಿನ್ನೆಲೆ ಗ್ರಾಮದ ವೈದ್ಯರ ಸಮಾಲೋಚನಾ ಸಭೆ

0

  • ಸಹಕಾರಿ ಸಂಘದ ಇಂತಹ ಜನೋಪಯೋಗಿ ಯೋಜನೆ ದೇಶಕ್ಕೇ ಮಾದರಿ: ಡಾ. ಸಂಜೀವ ರೈ

 

ಡಾ. ಸಂಜೀವ ರೈಯವರು ವೈದ್ಯರುಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸುತ್ತಿರುವುದು.

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ಪ್ರಾಯೋಜಿತ ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ವತಿಯಿಂದ ಆರೋಗ್ಯಾಮೃತ ಯೋಜನೆಯಂತೆ ಆರೋಗ್ಯ ಗ್ರಾಮ ನಿರ್ಮಾಣಕ್ಕೆ ವಿವಿಧ ಯೋಜನೆ ರೂಪಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ವಾಸ್ತವ್ಯವಿದ್ದು ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳ ಸಭೆ ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವದಲ್ಲಿ ಮಂಗಳೂರಿನ -ದರ್ ಮುಲ್ಲರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂಜೀವ ರೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಳಿಕ ಮಾತನಾಡಿದ ಡಾ. ಸಂಜೀವ ರೈಯವರು ಅವರು ಇಡ್ಕಿದು ಸೇವಾ ಸಹಕಾರಿ ಸಂಘದ ಇಂತಹ ಜನೋಪಯೋಗಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. ವಿವಿಧ ತಜ್ಞರು ನಮ್ಮ ಗ್ರಾಮದಲ್ಲಿದ್ದೇವೆ. ಅವರವರ ಅನುಕೂಲದ ಸಮಯದಲ್ಲಿ ಗ್ರಾಮದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳೋಣ, ಸಹಕಾರಿ ಸಂಘದ ಸಾಮಾಜಿಕ ಕಳಕಳಿಯ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.

ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡುತ್ತಿರುವುದು.

ಮುಖ್ಯ ಅತಿಥಿಯಾಗಿದ್ದ ಸೇವಾ ಭಾರತೀಯ ಕರ್ನಾಟಕ ರಾಜ್ಯ ಸಂಚಾಲಕರಾದ ಚೆನ್ನಯ ಸ್ವಾಮಿಯವರು ಮಾತನಾಡಿ ನಾವೆಲ್ಲರು ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ, ಆದರೆ ವೈದ್ಯರು ಜನ ಸೇವೆಯಲ್ಲಿಯೇ ಜನಾರ್ದನನ ಕಾಣುತ್ತಾರೆ. ಗ್ರಾಮ ಆರೋಗ್ಯದ ಈ ಚಿಂತನೆಯ ಜೊತೆಗೆ ಶಿಕ್ಷಣದ ಬಗ್ಗೆಯೂ ಈ ಗ್ರಾಮ ಯೋಜನೆಗಳನ್ನು ರೂಪಿಸಲಿ, ಇಡ್ಕಿದು ಸೇವಾ ಸಹಕಾರಿ ಸಂಘದ ಗ್ರಾಮ ವಿಕಾಸದ ಕಲ್ಪನೆಯಿಂದ ಇಡ್ಕಿದು ಹಾಗೂ ಕುಳ ಗ್ರಾಮ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.

ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವ ಸರಕಾರದ ವಿವಿಧ ಇನ್ಶುರೆನ್ಸ್‌ಗಳ ಬಗ್ಗೆ ವೆನ್ಲಾಕ್ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್, ಹೆಚ್. ಓ.ಡಿ. ಡಾ. ಶರತ್ ಕುಮಾರ್ ರವರು ಮಾಹಿತಿ ನೀಡಿದರು. ಶ್ರೀನಿವಾಸ ಆಸ್ಪತ್ರೆಯ ಡಾ. ಜಯಪ್ರಕಾಶ್ ವಾರದಲ್ಲಿ ಒಂದು ದಿನ ಇಡ್ಕಿದು ಹಾಗೂ ಕುಳ ಗ್ರಾಮದ ಜನರಿಗೆ ಸೇವೆ ಸಲ್ಲಿಸಲು ಬರುವುದಾಗಿ ಭರವಸೆ ನೀಡಿದರು. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶಶಿಕಲಾ ರವರು ಇಲ್ಲಿ ಆರೋಗ್ಯ ಕೇಂದ್ರದ ಘಟಕ ತೆರೆಯಲು ಅವಕಾಶವಿದ್ದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.

ಡಾ. ಪದ್ಮನಾಭ ಕೋಲ್ಪೆ, ಡಾ. ಪ್ರವೀಣ್ ಕುಮಾರ್ ಆರ್. ಭಟ್, ಡಾ. ಜಯಪ್ರಕಾಶ್ ಆರ್.ಕೆ., ಡಾ ಚರಣ್ ಕಜೆ, ಡಾ. ಪ್ರಭಾಕರ್ ಉರಿಮಜಲು, ಡಾ. ಸೀತಾರಾಮ ಕೆ.ಜಿ, ಡಾ.ಆಶೋಕ್ ಜಿ.ಕೆ, ಡಾ. ಸೌಮ್ಯ, ಡಾ| ರಾಮಚಂದ್ರ ಭಟ್, ಇಡ್ಕಿದು ಗ್ರಾ.ಪಂ. ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ಮುಖ್ಯ ಕಾರ್ಯನಿರ್ವಹಣಾಽಕಾರಿ ಈಶ್ವರ ನಾಯ್ಕ ಎಸ್., ನಿರ್ದೇಶಕರಾದ ಗೋಪಾಲಕೃಷ್ಣ ಭಟ್, ಶಿವಪ್ರಕಾಶ್ ಕೆ.ವಿ, ಜನಾರ್ಧನ ಕಾರ್ಯಾಡಿ ಹಾಗೂ ರೈತ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು ಸ್ವಾಗತಿಸಿದರು. ಪದ್ಮನಾಭ ಕೊಂಕೋಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಕೆ.ಎಸ್.ಉರಿಮಜಲು ವಂದಿಸಿದರು. ಚರಣ್ ಪ್ರಾರ್ಥನೆ ಹಾಡಿದರು.

 

LEAVE A REPLY

Please enter your comment!
Please enter your name here