ಕಿರು ಆಹಾರ ಸಂಸ್ಕರಣಾ ಉದ್ದಿಮೆ ಕುರಿತು ತರಬೇತಿ ಕಾರ್ಯಗಾರ

0

 

 

ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ಭಾರತ ಸರಕಾರ, ಕೃಷಿ ಇಲಾಖೆ ಸುಳ್ಯ, ತೋಟಗಾರಿಕಾ ಇಲಾಖೆ ಸುಳ್ಯ, ಹಾಗೂ ಸುದ್ದಿ ಕೃಷಿ ಸೇವಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಪಿ ಎಮ್ ಎಫ್ ಎಂ ಇ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಅಕ್ಟೋಬರ್ 20ರಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

 

ಸುಳ್ಯ ರೈತ ಉತ್ಪಾದಕ ಸಂಘದ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು.

ಆಹಾರ ಸಂಸ್ಕರಣೆ ಉದ್ದಿಮೆಗೆ ಸುವರ್ಣ ಅವಕಾಶ ಎಂಬ ವಿಷಯದಲ್ಲಿ ಆಹಾರ ವಿಜ್ಞಾನಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎ.ಎ. ಫಜಲ್ ಮಾಹಿತಿ ನೀಡಿದರು.

ಸುಳ್ಯ ತಾಲೂಕು ಪಂಚಾಯಿತಿ ಸಂಜೀವಿನಿ ಒಕ್ಕೂಟದ ಅಧಿಕಾರಿ ಶ್ರೀಮತಿ ಶ್ವೇತ, ತೋಟಗಾರಿಕಾ ಇಲಾಖೆ ಅಧಿಕಾರಿ ಜಗದೀಶ್, ಸುಳ್ಯ ಕೆನರಾ ಬ್ಯಾಂಕ್ ಮ್ಯಾನೇಜರ್ ಸುಷ್ಮಾ, ಸುದ್ದಿ ಬಿಡುಗಡೆ ವರದಿಗಾರ ಶಿವಪ್ರಸಾದ್ ಕೇರ್ಪಳ ವೇದಿಕೆಯಲ್ಲಿದ್ದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೃಷಿ ಇಲಾಖೆಯ ನಿವೃತ್ತ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here