58 ನೇ ವಾರ್ಷಿಕೋತ್ಸವ ಪ್ರಯುಕ್ತ  ಜೋಸ್ ಆಲುಕ್ಕಾಸ್ ಫೌಂಡೇಶನ್ ವತಿಯಿಂದ ಸಹಾಯ ಹಸ್ತ ವಿತರಣೆ

0

 

ಇದೊಂದು ಚಿನ್ನಾಭರಣ ಮಳಿಗೆಯ ಅರ್ಥಪೂರ್ಣ ಕಾರ್ಯಕ್ರಮ : ಬಿ. ರಮಾನಾಥ ರೈ

ವ್ಯಾಪಾರದಲ್ಲಿ ಪಾರದರ್ಶಕತೆ ಹೊಂದಿರುವ ಸಂಸ್ಥೆ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ: ಕಾವು ಹೇಮನಾಥ ಶೆಟ್ಟಿ

ನಮ್ಮನ್ನು ಗುರುತಿಸಿ ಸಹಕಾರ ನೀಡಿದ ಸಂಸ್ಥೆಗೆ ನಾವು ಅಭಾರಿಯಾಗಿದ್ದೇವೆ: ಬಿಜು ಕೆ.ಜೆ

 ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಪ್ರತಿಯೊಂದು ಸಂಸ್ಥೆಯಿಂದ ಸಿಎಸ್.ಆರ್ ಫಂಡ್ ಅನ್ನು ನೀಡಬೇಕೆಂದು ಸರಕಾರದ ಆದೇಶವಿದೆ. ಆದರೆ ಈ ಸಂಸ್ಥೆ ಅದನ್ನು ಅರ್ಹ ಫಲಾನುಭವಿಗಳಿಗೆ ನೀಡುವ ಮೂಲಕ ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ರವರು ಹೇಳಿದರು.

ಅವರು ಅ.೨೦ರಂದು ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ಸಂಸ್ಥೆಯ 58ನೇ ವಾರ್ಷಿಕೋತ್ಸವದ ಪ್ರಯುಕ್ತ ಜೋಸ್ ಆಲುಕ್ಕಾಸ್ ಫೌಂಡೇಶನ್ ವತಿಯಿಂದ ಕೊಡಲ್ಪಡುವ ಆಶ್ರಮಗಳಿಗೆ ಹಾಗೂ ಅನಾರೋಗ್ಯ ಪೀಡಿತ ಅಶಕ್ತರಿಗೆ ಧನ ಸಹಾಯದ ಚೆಕ್ ಅನ್ನು ವಿತರಣೆ ಮಾಡಿ ಮಾತನಾಡಿದರು.

 

ಜೋಸ್ ಆಲುಕ್ಕಾಸ್ ಸಂಸ್ಥೆಗೆ ಅದರದೇ ಆದ ಒಂದು ಸ್ಥಾನಮಾನವಿದೆ. ಪ್ರತಿಯೊಂದು ಪಟ್ಟಣದಲ್ಲಿ ಈ ಜೋಸ್ ಆಲುಕ್ಕಾಸ್ ಸಂಸ್ಥೆಯ ಶಾಖೆಗಳು ಕಾಣಸಿಗುತ್ತದೆ. ಸಿ.ಎಸ್.ಆರ್. ಫಂಡ್ ಅನ್ನು
ಜವಾಬ್ದಾರಿಯುತವಾಗಿ ಸಮಾಜಕ್ಕೆ ನೀಡುವ ಕೆಲಸ ಆಲುಕ್ಕಾಸ್ ನಿಂದ ಅಗುತ್ತಿದೆ. ಸಮಾಜದಲ್ಲಿ ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕಾರ್ಯ ಈ ಚಿನ್ನಾಭರಣ ಮಳಿಗೆಯಿಂದ ಆಗುತ್ತಿರುವುದು ಸಂತಸದ ವಿಚಾರ. ಪುತ್ತೂರಿನಲ್ಲಿ ಜೋಸ್ ಆಲುಕ್ಕಾಸ್ ತನ್ನ ಕಾರ್ಯ ವೈಖರಿಯ ಮೂಲಕ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದೆ. ಗ್ರಾಹಕರ ಅಪೇಕ್ಷೆಗೆ ಅನುಗುಣವಾಗಿ ಸಂಸ್ಥೆ ಕೆಲಸ ಮಾಡಿದಲ್ಲಿ ಯಶಸ್ಸು ಹೆಚ್ಚು. ಜನರಿಗೆ ಪಾರದರ್ಶಕ ಸೇವೆ ನೀಡವ ಮೂಲಕ ಸಂಸ್ಥೆ ಕೀರ್ತಿ ಇನ್ಮಷ್ಟು ಎತ್ತರಕ್ಕೆ ಏರಲಿ ಎಂದರು.

 

ಶ್ರೀ ರಾಮಕೃಷ್ಣ ಪ್ರೌಡಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆ ಪುತ್ತೂರಿನಲ್ಲಿ ಬಹಳಷ್ಟು ಜನಮನ್ನಣೆ ಪಡೆದಿದೆ. ಪುತ್ತೂರು ಎಂದರೆ ಚಿನ್ನ ಹಾಗೂ ವಜ್ರಾಭರಣ ಮಳಿಗೆ ಹೆಚ್ಚಿರುವ ಪ್ರದೇಶ. ಅನೇಕ ಚಿನ್ನಾಭರಣ ಮಳಿಗೆ ಇದ್ದರೂ ಜನರು ಜೋಸ್ ಆಲುಕ್ಕಾಸ್ ಅನ್ನು ಬಹಳಷ್ಟು ನೆಚ್ಚಿಕೊಂಡಿದ್ದಾರೆ. ಅದಕ್ಕೆ ಅವರ ನಗುಮುಖದ ಸೇವೆ, ಸ್ನೇಹಾಚಾರ ಹಾಗೂ ಮಾತುಗಾರಿಕೆಯೇ ಕಾರಣ. ಗ್ರಾಹಕರ ಮನಕ್ಕೊಪ್ಪುವ ಚಿನ್ನಾಭರಣಗಳನ್ನು ತಯಾರಿಸಿ ಅತೀ ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಸಂಸ್ಥೆ ಇನ್ನಷ್ಟು ಗ್ರಾಹಕರ ಹತ್ತಿರವಾಗಿದೆ. ನಾನು ಈ ಸಂಸ್ಥೆಯ ಗ್ರಾಹಕ. ಇಲ್ಲಿನ ಸೇವೆ ನನಗೆ ಬಹಳಷ್ಟು ಹಿಡಿಸಿದೆ. ವ್ಯಾಪಾರದಲ್ಲಿ ಪಾರದರ್ಶಕತೆ ಇದ್ದಲ್ಲಿ ಯಶಸ್ಸು ಖಂಡಿತಾ ಇದೆ ಎನ್ನುವುದಕ್ಕೆ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ಸ್ಪಷ್ಟ ನಿದರ್ಶಣ. ವ್ಯಾಪಾರದಲ್ಲಿ ಲಾಭವನ್ನು ಎಲ್ಲರೂ ಮಾಡುತ್ತಾರೆ ಆದರೆ ಅದರಲ್ಲಿ ಒಂದಂಶವನ್ನು ಸಮಾಜದಲ್ಲಿರುವ ಬಡವರಿಗೆ ವಿನಿಯೋಗಿಸುವವರು ಬಹಳ ಕಡಿಮೆ. ಅಂತಹ ಕಾಲಘಟ್ಟದಲ್ಲಿ ಕೋಟ್ಯಾಂತರ ರೂಪಾಯಿ ಈ ರೀತಿ ವಿನಿಯೋಗ ಮಾಡುತ್ತಿರುವುದು ಬಹಳ ಉತ್ತಮ ಕಾರ್ಯವಾಗಿದೆ. ಸಂಸ್ಥೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದರು.

ಕರ್ನಾಟಕ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿ ( ಕಿಡ್ಸ್) ಇದರ ಆಶ್ರಯದಲ್ಲಿ ಪರ್ಲಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಸರ್ವೋದಯ ವಿಶೇಷ ಚೇತನ ಶಾಲೆಗೆ ಅಗತ್ಯ ಸಾಮಾಗ್ರಿಗಳ ಖರೀದಿಗಾಗಿ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ಹಾಗೂ ಕ್ಯಾನ್ಸ ರ್ ಪೀಡಿತ ಏಳು ಜನರ ಚಿಕಿತ್ಸಾ ವೆಚ್ಚವಾಗಿ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ವಿತರಣೆ ಮಾಡಲಾಯಿತು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೆಶಕ ರೆ.ಫಾ. ಬಿಜು ಕೆ.ಜೆ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಇಂದು ನನಗೆ ತುಂಬಾ ಸಂತಸವಾಗುತ್ತಿದೆ. ಪುತ್ತೂರಿನ ಪ್ರಥಮ ವಿಶೇಷ ಶಾಲೆ ನಮ್ಮದಾಗಿದೆ. ವಿಶೇಷ ಚೇತನ ಮಕ್ಕಳನ್ನು ನಾವು ನಮ್ಮ ಸಂಸ್ಥೆಯಲ್ಲಿ ಪೋಷಿಸುವ ಕೆಲಸ ಮಾಡುತ್ತಿದ್ದೇವೆ. ನೀವು ನಮ್ಮ ಸಂಸ್ಥೆಯನ್ನು ಗುರುತಿಸಿ ನಮಗೆ ಸಹಕಾರ ಮಾಡಿರುವುದಕ್ಕೆ ನಾವು ಅಭಾರಿಯಾಗಿದ್ದೇವೆ. ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ‌ ಎಂದರು.

ಜೋಸ್ ಆಲುಕ್ಕಾಸ್ ನ ಪುತ್ತೂರು ಶಾಖೆಯ ೪ ವರ್ಷಾಚರಣೆಯ ಪ್ರಯುಕ್ತ ಗ್ರಾಹಕರಿಗಾಗಿ ಏರ್ಪಡಿಸಲಾಗಿದ್ದ ಲಕ್ಕಿ ಕೂಪನ್ ನ ವಿಜೇತರಿಗೆ ಶ್ರೀ ರಾಮಕೃಷ್ಣ ಪ್ರೌಡಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ವಿತರಣೆ ಮಾಡಿದರು. ಪ್ರಥಮ ಬಹುಮಾನ ಫ್ರಿಡ್ಜ್ ಅನ್ನು
ಪ್ರಫುಲ್ಲ ಮನೋಹರ ನೈಕ್ ಕೊಳಕ್ಕೆಮಾರ್, ದ್ವಿತೀಯ ಬಹುಮಾನ ವಾಷಿಂಗ್ ಮೆಷಿನ್ ಅನ್ನು ಶರೀಫ್ ತವಕ್ಕಲ್ ಕಡಬ ಹಾಗೂ ತೃತೀಯ ಬಹುಮಾನ ಟಿ.ವಿ.ಯನ್ನು ಜಯಂತಿ ಬೆದ್ರಾಳರವರು ಪಡೆದುಕೊಂಡರು.
ಸಂಸ್ಥೆಯ ಏರಿಯಾ ಮ್ಯಾನೇಜರ್ ಬಿಜು ಟಿ.ಎಲ್., ಪುತ್ತೂರು ಶಾಖಾ ಮ್ಯಾನೇಜರ್ ರತೀಶ್ ಸಿ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ಮ್ಯಾನೇಜರ್ ಶಿಬು ವರ್ಗೀಸ್, ಅಕೌಂಟ್ಸ್ ವಿಭಾಗದ ರಾಜೇಶ್ ರವರು ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಮಂಗಳೂರು ಶಾಖಾ ಸಿಬ್ಬಂದಿ ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

 

58 ನೇ ವಾರ್ಷಿಕೋತ್ಸವ – ಗ್ರಾಹಕರಿಗೆ
ಉಡುಗೊರೆಗಳ ಮಹಾಪೂರ

ಸಂಸ್ಥೆ ತನ್ನ 58ನೇ ವಾರ್ಷಿಕೋತ್ಸವದ ಪ್ರಯುಕ್ತ ತನ್ನ ಎಲ್ಲಾ ಶಾಖೆಗಳಲ್ಲಿಯೂ ಗ್ರಾಹಕರಿಗೆ 5 ಕೋಟಿ ರೂಪಾಯಿಯ ಉಡುಗೊರೆಗಳನ್ನು ನೀಡಲು ತೀರ್ಮಾನಿಸಿದ್ದು ಇದೀಗಾಗಲೇ ಕೊಡುಗೆಗಳು ಚಾಲ್ತಿಯಲ್ಲಿದೆ. ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಶೇ. 4.99 ರಿಂದ ಆರಂಭ,‌ ವಜ್ರಾಭರಣ ಖರೀದಿಯಲ್ಲಿ 20% ರಿಯಾಯಿತಿ ದೊರೆಯಲಿದೆ. ವಿಶೇಷ ವಜ್ರದ ನೆಕ್ಲೇಸ್ ಗಳು ರೂ. 1,49,000 ದಿಂದ ಆರಂಭವಾಗಲಿದೆ. ಅಲ್ಲದೇ ಹಳೇ ಚಿನ್ನಾಭರಣಗಳನ್ನು
ಹೊಸದಕ್ಕೆ ಎಕ್ಸ್‌ಚೇಂಜ್ ಮಾಡಲು ಅವಕಾಶವಿದ್ದು, ಹಬ್ಬಗಳ ಸಾಲನ್ನು ಹೊಸ ಚಿನ್ನಾಭರಣಗಳ ಧಿರಿಸಿನೊಂದಿಗೆ ಆಚರಿಸಲು ಸುವರ್ಣವಕಾಶವಿದೆ. ಎಸ್‌ಬಿಐ ಕಾರ್ಡ್ ಪಾವತಿಗೆ ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಸೌಲಭ್ಯವನ್ನೂ ಸಂಸ್ಥೆ ಕಲ್ಪಿಸಿದೆ. ಒಟ್ಟಿನಲ್ಲಿ ಸಂಭ್ರಮದ ಹಬ್ಬವನ್ನು ಸ್ವಾಗತಿಸಲು ನಾಡಿನೆಲ್ಲೆಡೆ ಕಾತುರದಲ್ಲಿರುವ ಜನರು ಹೊಸತನದ ಚಿನ್ನಾಭರಣಗಳೊಂದಿಗೆ ವಿಶೇಷ ಹುಮ್ಮನಸ್ಸು, ಹುರುಪಿನೊಂದಿಗೆ ಹಬ್ಬ ಆಚರಿಸಲು ಜೋಸ್ ಆಲುಕ್ಕಾಸ್ ಅವಕಾಶ ಕಲ್ಪಿಸಿದೆ.

LEAVE A REPLY

Please enter your comment!
Please enter your name here