ಪೆರುವಾಜೆ ಗ್ರಾಮ ಪಂಚಾಯತ್ ಜಮಾಬಂದಿ

0

 

ಪೆರುವಾಜೆ ಗ್ರಾಮ ಪಂಚಾಯತ್ ನ 2021-2022 ನೇ ಸಾಲಿನ ಜಮಾಬಂಧಿಯು ಸೆ.20ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್ ಜಮಾಬಂಧಿ ಅಧಿಕಾರಿಯಾಗಿದ್ದರು.
ಪಂಚಾಯತ್ ಕಾರ್ಯದರ್ಶಿ ಜಯಪ್ರಕಾಶ್ ಅಲೆಕ್ಕಾಡಿ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಪಂಚಾಯತ್ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಶ್ರೀಮತಿ ಗುಲಾಬಿ, ಶ್ರೀಮತಿ ರೇವತಿ, ಮಾಧವ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿ.ಡಿ.ಒ ರವರು ಸ್ವಾಗತಿಸಿ,ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.
ನಂತರ ಕಾಮಗಾರಿಗಳ ವೀಕ್ಷಣೆ ನಡೆಯಿತು.


ಪಂಚಾಯತ್ ಗೆ ಅಳವಡಿಸಿದ ಸೋಲಾರ್ ಗ್ರಿಡ್, ಪಂಚಾಯತ್ ಚೇಂಬರ್, ದೇವಸ್ಥಾನದ ಬಳಿ ಚರಂಡಿ ನಿರ್ಮಾಣವನ್ನು ವೀಕ್ಷಿಸಲಾಯಿತು.

LEAVE A REPLY

Please enter your comment!
Please enter your name here