ಬರಿಮಾರು ವಾರ್ಷಿಕ ಜಾತ್ರೆ ಆಂಜನೇಯ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಸೂರಿಕುಮೇರು ಸಮೀಪದ ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ” ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬೊಳವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ” ಶ್ರೀರಾಮ ವನಗಮನ” ಯಕ್ಷಗಾನ ತಾಳಮದ್ದಳೆ ನಡೆಯಿತು.


ಹಿಮ್ಮೇಳದಲ್ಲಿ ಗಿರೀಶ್ ಮುಳಿಯಾಲ, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಹರಿಣಾಕ್ಷೀ ಜೆ ಶೆಟ್ಟಿ ( ದಶರಥ ), ಕಿಶೋರಿ ದುಗ್ಗಪ್ಪ ನಡುಗಲ್ಲು ( ಕೈಕೆಯೀ ), ಶಾರದಾ ಅರಸ್ ( ಶ್ರೀರಾಮ ), ಪ್ರೇಮಲತಾ ಟಿ ರಾವ್ ( ಲಕ್ಷ್ಮಣ ), ಮನೋರಮ ಜಿ ಭಟ್ ( ಮಂಥರೆ) ಸಹಕರಿಸಿದರು. ಧರ್ಮದರ್ಶಿ ರಾಖೇಶ್ ದಂಪತಿ ದೀಪಬೆಳಗಿಸಿ ಉದ್ಘಾಟಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿದರು. ದಾಮೋದರ ಪ್ರಭು ವಂದಿಸಿದರು. ಬೊಳುವಾರು ಹೋಟೆಲ್ ಉದ್ಯಮಿ ಶಿವಾನಂದ ಪ್ರಭು ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here