ಮಾ.26: ಅರಿಕ್ಕಿಲದಲ್ಲಿ ನವೀಕೃತ ಮಸೀದಿ ಉದ್ಘಾಟನೆ-ಆಮಂತ್ರಣ ಪತ್ರಿಕೆ ಬಿಡುಗಡೆ

0

 

ಪುತ್ತೂರು: ಮಾಡಾವು ಸಮೀಪದ ಅರಿಕ್ಕಿಲದಲ್ಲಿ ನವೀಕೃತ ನೂರುಲ್ ಹುದಾ ಜುಮಾ ಮಸೀದಿಯ ಉದ್ಘಾಟನಾ ಸಮಾರಂಭ ಮಾ.26ರಂದು ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಯು ಅರಿಕ್ಕಿಲ ಮಸೀದಿಯಲ್ಲಿ ನಡೆಯಿತು. ಅರಿಕ್ಕಿಲ ಮಸೀದಿಯ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಮೇರ್ಲ, ಪ್ರ.ಕಾರ್ಯದರ್ಶಿ ಕೆ.ಎಂ ಮುಹಮ್ಮದ್, ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ, ಮದ್ರಸ ಶಿಕ್ಷಕರಾದ ರಝಾಕ್ ಮುಸ್ಲಿಯಾರ್, ಇರ್ಫಾನ್ ಹಿಮಮಿ ಸಖಾಫಿ, ಪ್ರಮುಖರಾದ ಕೆ.ಎಂ ಹನೀಫ್ ಮಾಡಾವು, ರಝಾಕ್ ಅರಿಕ್ಕಿಲ, ಇಬ್ರಾಹಿಂ ಹಾಜಿ ಫ್ಯಾಮಿಲಿ, ರಫೀಕ್ ಅರಿಕ್ಕಿಲ, ಯೂಸುಫ್ ಬಿ.ಕೆ, ಅಝೀಝ್ ಮೇರ್ಲ, ಮೊದುಕುಂಞಿ ಅಡ್ಕ ಉಸ್ಮಾನ್ ಎಸ್.ಕೆ, ಹಮೀದ್ ಅರಿಕ್ಕಿಲ ಉಪಸ್ಥಿತರಿದ್ದರು. ಮಾ.26ರಂದು ನಡೆಯಲಿರುವ ಮಸೀದಿ ಉದ್ಘಾಟನೆಯನ್ನು ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ನೆರವೇರಿಸಲಿದ್ದಾರೆ ಎಂದು ಅರಿಕ್ಕಿಲ ಮಸೀದಿಯ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here