ಗುತ್ತಿಗಾರು ಶ್ರೀ ಮಂಗಳಾ ಎಂಟರ್ ಪ್ರೈಸಸ್ ಉದ್ಘಾಟನೆ ಪ್ರಯುಕ್ತ ದೇಣಿಗೆ ಹಸ್ತಾಂತರ

0

 

 

ಸುಳ್ಯ ತಾಲೂಕಿನ ಹೆಸರಾಂತ ಚಾಲನಾ ತರಬೇತಿ ಸಂಸ್ಥೆ ಶ್ರೀ ಮಂಗಳಾ ಎಂಟರ್ಪ್ರೈಸಸ್ ಇದರ ಗುತ್ತಿಗಾರ್ ಕಚೇರಿ ಉದ್ಘಾಟನೆ ಪ್ರಯುಕ್ತ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಆಂಬುಲೆನ್ಸ್ ಸೇವಾ ಯೋಜನೆಗೆ ದೇಣಿಗೆಯನ್ನು ಹಸ್ತಾಂತರ ಮಾಡುವ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಸ್ವಾತಿಕ್, ಅತಿಥಿಗಳಾದ ಸಂತೋಷ್ ಕುತ್ತಮೊಟ್ಟೆ, ಮಹೇಶ್ ಪುಚ್ಚಪ್ಪಾಡಿ, ವಚನ್ ದೇರಪ್ಪಜ್ಜನ ಮನೆ, ಉದಯ ಕುಮಾರ್ ದೇರಪ್ಪಜ್ಜನ ಮನೆ, ಧರ್ಮಪಾಲ ಪಂಜಿಪಳ್ಳ, ಶರತ್ ಕುಮಾರ್ ಅಡ್ಯಡ್ಕ, ಕೇಶವ ಅಡ್ತಲೆ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು. ಸೋಮಶೇಖರ್ ದೇವ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here